LOCAL EXPRESS : ಜಿಲ್ಲೆಯಲ್ಲಿ ಭಾರಿ ಗಾಳಿ, ಗುಡುಗು ಸಹಿತ ಆಲಿಕಲ್ಲು ಮಳೆ : ಪಾತ್ರೆಗಳಲ್ಲಿ ಆಲಿಕಲ್ಲು ಸಂಗ್ರಹಿಸಿಟ್ಟ ಜನರು..!
ಕೊಪ್ಪಳ, ಏಪ್ರಿಲ್ 10 : ಕೊಪ್ಪಳ ಜಿಲ್ಲೆಯ ವಿವಿಧೆಡೆ ಇಂದು (ಗುರುವಾರ) ಸಂಜೆ ಭರ್ಜರಿ ಮಳೆಯಾಗಿದೆ. ಕುಕನೂರು, ಯಲಬುರ್ಗಾ, ಕಾರಟಗಿ , ಗಂಗಾವತಿಯಲ್ಲಿ ಮಳೆಯಾಗಿದೆ.
ಕುಕನೂರಿನಲ್ಲಿ ಭಾರಿ ಗಾಳಿ ಸಹಿತ ಅಲಿಕಲ್ಲು ಮಳೆಯಾಗಿದೆ. ಕಾರಟಗಿಯಲ್ಲಿ ಜೋರಾದ ಗಾಳಿ ಹಾಗೂ ಮಳೆಯಾಗಿದ್ದು, ಈ ವೇಳೆಯಲ್ಲಿ ನಗರದಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಜನರು ಪಾತ್ರೆಗಳು, ಬಕೆಟ್‌ನಲ್ಲಿ ಆಲಿಕಲ್ಲು ಸಂಗ್ರಹಿಸಿದ್ದು ಕಂಡುಬಂತು.