LOCAL NEWS : ‘ಅಂಬೇಡ್ಕರ್ ವಿಚಾರಧಾರೆ ಮಾತಿಗೆ ಸೀಮಿತವಾಗದಿರಲಿ’ : ಬಸವರಾಜ ಸೂಳಿಬಾವಿ..!

You are currently viewing LOCAL NEWS : ‘ಅಂಬೇಡ್ಕರ್ ವಿಚಾರಧಾರೆ ಮಾತಿಗೆ ಸೀಮಿತವಾಗದಿರಲಿ’ : ಬಸವರಾಜ ಸೂಳಿಬಾವಿ..!

ಪ್ರಜಾ ವೀಕ್ಷಣೆ ಸುದ್ದಿ : 

LOCAL NEWS : ‘ಅಂಬೇಡ್ಕರ್ ವಿಚಾರಧಾರೆ ಮಾತಿಗೆ ಸೀಮಿತವಾಗದಿರಲಿ’ : ಬಸವರಾಜ ಸೂಳಿಬಾವಿ..!

ಕುಕನೂರು : ‘ಸಂವಿಧಾನ ಶಿಲ್ಪಿ ಭಾರತ ರತ್ನ ಡಾ ಬಿ ಆರ್ ಅಂಬೇಡ್ಕರ್ ಅವರ ವಿಚಾರಧಾರೆಗಳು ಕೇವಲ ಮಾತಿಗೆ ಸೀಮಿತವಾಗದೆ ಕಾರ್ಯರೂಪಕ್ಕೆ ಬಂದಾಗ ದೇಶ ಸುಭಿಕ್ಷ ಗೊಳ್ಳುವುದರಲ್ಲಿ ಅನುಮಾನವಿಲ್ಲ’ ಎಂದು ಲಡಾಯಿ ಪತ್ರಿಕೆಯ ಸಂಪಾದಕ ಬಸವರಾಜ ಸುಳಿಭಾವಿ ಹೇಳಿದರು.

ಪಟ್ಟಣದಲ್ಲಿ ಶನಿವಾರ ತಾಲೂಕ ಆಡಳಿತ, ತಾಲೂಕ ಪಂಚಾಯಿತಿ, ಪಟ್ಟಣ ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ 134 ನೇ ಜನ್ಮದಿನಾಚರಣೆ ಹಾಗೂ ಹಸಿರು ಕ್ರಾಂತಿಯ ಹರಿಕಾರ ಹಾಗೂ ಭಾರತದ ಮಾಜಿ ಉಪ ಪ್ರಧಾನಿ ಡಾಕ್ಟರ್ ಬಾಬು ಜಗಜೀವನ್ ರಾಮ್ ಅವರ 118ನೇ ಜನ ದಿನಾಚರಣೆ ಸಮಾರಂಭವನ್ನು ಮಹನೀಯರ ಭಾವಚಿತ್ರಗಳಿಗೆ ಪಟ್ಟಣದ ಡಾಕ್ಟರ್ ಬಿಆರ್ ಅಂಬೇಡ್ಕರ್ ವೃತ್ತದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಯೊಂದಿಗೆ ಚಾಲನೆ ನೀಡಲಾಯಿತು ಈ ವೇಳೆ ಬಸವರಾಜ ಸೂಳಿಬಾವಿ ಮಾತನಾಡಿ ಕೊಳಚೆ ಪ್ರದೇಶದ ಸಾಮಾನ್ಯ ವ್ಯಕ್ತಿಯು ಸಹ ದೇಶದ ಅತ್ಯುನ್ನತ ಸ್ಥಾನ ಅಲಂಕರಿಸುವಂತಹ ಕೀರ್ತಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರದಾಗಿದ್ದು, ಇದಕ್ಕೆ ತಾಜಾ ಉದಾಹರಣೆಯಾಗಿ ಚಹಾ ಮಾರುತಿದ್ದ ವ್ಯಕ್ತಿ ಪ್ರಧಾನಿ ಸ್ಥಾನದಲ್ಲಿ ಹಾಗೂ ಬುಡಕಟ್ಟು ಸಮಾಜದ ಮಹಿಳೆ ರಾಷ್ಟ್ರಪತಿ ಸ್ಥಾನದಲ್ಲಿ ಅಲಂಕರಿಸುವುದು ಭಾರತದ ಸಂವಿಧಾನಕ್ಕೆ ಇರುವ ತಾಕತ್ತು ಎಂದು ಹೇಳಿದರು.

ಬಾಬಾ ಸಾಹೇಬರು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕಲಿ ಎಂದು ಸಮಾನತೆಯ ಸಂವಿಧಾನವನ್ನು ರಚನೆ ಮಾಡಿದ್ದು ವಿಪರ್ಯಾಸವೆಂದರೆ ದೇಶದ ಸುಮಾರು 75 ಪ್ರತಿಶತ ಜನರಿಗೆ ಸಂವಿಧಾನದ ಅರ್ಥವೇ ಇನ್ನು ತಿಳಿಯದಾಗಿದ್ದು ಇನ್ನೂ ಸಮಾಧಾನತೆಯ ಮಾತು ಪರಿಚಿಕೆಯಾಗಿ ಉಳಿದಿರುವುದು ವಿಪರ್ಯಾಸವೇ ಸರಿ ಎಂದು ಹೇಳಿದರು. ಈಗಲಾದರೂ ಪ್ರತಿಯೊಬ್ಬರು ಅಂಬೇಡ್ಕರ್ ಧ್ವನಿಯನ್ನು ಪ್ರತಿಯೊಬ್ಬರಿಗೆ ತಲುಪಿಸುವ ಮಹತ್ಕಾರ್ಯ ಮಾಡಬೇಕು ಎಂದು ಕರೆ ನೀಡಿದರು.

ಕುಕನೂರು ತಹಸೀಲ್ದಾರ ಪ್ರಾಣೇಶ್ ಹೆಚ್ ಮಾತನಾಡಿ, ‘ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಸೇರಿದಂತೆ ಇನ್ನಿತರ ಮಹಾನರ ಜೀವನ ಮಾತುಗಳು ಕೇವಲ ಜಯಂತಿಗೆ ಸೀಮಿತವಾಗದೆ ಪ್ರತಿಯೊಂದ ಹೆಜ್ಜೆಯಲ್ಲಿಯೂ ಅವರ ತತ್ವಾದರ್ಷಗಳನ್ನು ಜೀವನದಲ್ಲಿ ರೂಡಿಸಿ ಕೊಂಡಾಗ ಬದುಕು ಸಾರ್ಥಕ ಗೊಳ್ಳುತ್ತದೆ’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ರವೀಂದ್ರ ಭಾಗಲಕೋಟೆ ಸಂವಿಧಾನ ಪೀಠಿಕೆಯನ್ನು ಬೋಧಿಸಿದರು. ವೇದಿಕೆಗೂ ಮುನ್ನ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ್ ರಾಮ್ ರವರ ಬೃಹತ್ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಯಿತು.

ವೇದಿಕೆಯಲ್ಲಿ ಪಟ್ಟಣ ಪಂಚಾಯತಿ ಉಪಾಧ್ಯಕ್ಷ ಪ್ರಶಾಂತ್ ಆರುಬೆರಳಿನ,ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಬಿರಾದರ, ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಬೆಟ್ಟದಪ್ಪ ಮಾಳೆಕೊಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಶಿವಶಂಕರ ಕರಡಕಲ್, ಪ್ರಮುಖರಾದ ರಾಮಣ್ಣ ಭಜಂತ್ರಿ, ಗಗನ ನೋಟಗಾರ, ನೂರುದ್ದೀನ್ ಸಾಬ್ ಗುಡಿಹಿಂದಲ, ಮಾಂತೇಶ್ ಬೂದುಗುಂಪ, ಲಕ್ಷ್ಮಣ ಕಾಳಿ, ನಿಂಗಪ್ಪ ಗುರ್ಲೆಕೊಪ್ಪ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

Leave a Reply

error: Content is protected !!