LOCAL HERO : ಬಂಜಾರ ಸಮಾಜ ಯುವ ನಾಯಕ ಸುರೇಶ ಬಳೂಟಗಿ ಅವರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕಾರ..!

You are currently viewing LOCAL HERO : ಬಂಜಾರ ಸಮಾಜ ಯುವ ನಾಯಕ ಸುರೇಶ ಬಳೂಟಗಿ ಅವರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕಾರ..!

LOCAL HERO : ಬಂಜಾರ ಸಮಾಜ ಯುವ ನಾಯಕ ಸುರೇಶ ಬಳೂಟಗಿ ಅವರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕಾರ..!

ಕುಕನೂರು : ತಾಲೂಕಿನ ಕಕ್ಕಿಹಳ್ಳಿ ತಾಂಡದ ಬಂಜಾರ ಸಮಾಜ ಯುವ ನಾಯಕ ಸುರೇಶ ಬಳೂಟಗಿ ಅವರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕಾರ ಲಭಿಸಿದೆ.

ಇತ್ತೀಚೆಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಾಲಕೃಷ್ಣ ಬಯಲು ರಂಗಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಬಂಜಾರ ಸಮಾಜದಲ್ಲಿ ಇವರು ಮಾಡಿರುವ ಸೇವೆಯನ್ನು ಗುರುತಿಸಿ ಖಾಸಗಿ ಮಾಧ್ಯಮವೊಂದು “ದಿ ನ್ಯೂಸ್ ಹಂಟ್ ಕನ್ನಡ ಚಾನೆಲ್ ಹಾಗೂ ಅಂಬಾರಿ ಕ್ರಿಯೇಷನ್ಸ್ ಬೆಂಗಳೂರುರವರು ಕೊಡ ಮಾಡುವ “ದಿ ನ್ಯೂಸ್ ಹಂಟ್ ವರ್ಷದ ಅತ್ಯುತ್ತಮ ಕನ್ನಡಿಗ 2025 ಪ್ರಶಸ್ತಿ” ನೀಡಿ ಗೌರವಿಸಲಾಗಿದೆ.

ಸುರೇಶ ಬಳೂಟಗಿ ಅವರು ಶಿಕ್ಷಣ, ಆರೋಗ್ಯ, ಮತ್ತು ಆರ್ಥಿಕ ಅಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ಕೆಲಸ ಮಾಡಿ, ಇನ್ನೂ ತಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ತೊಡಗಿಕೊಂಡು ಈ ಭಾಗದ ಲಂಬಾಣಿಗರ ಸಂಸ್ಕೃತಿ ಸಂಪ್ರದಾಯಗಳು, ನೃತ್ಯಗಳು, ಹಾಡುಗಳು ಮತ್ತು ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ಬಹು ಮುಖ್ಯಪಾತ್ರವಹಿಸಿದ್ದಾರೆ.

ತಮ್ಮ ವ್ಯಯಕ್ತಿಕ ಕೆಲಸಗಳ ಮಧ್ಯವೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಯುವ ನಾಯಕ ಹಲವಾರು ಹೋರಾಟಗಳನ್ನು ರೂಪಿಸಿ, ತಮ್ಮ ಸಮಾಜಕ್ಕೆ ಸರ್ಕಾರದಿಂದ ಕಡೆಗಣೆನೆ ಆದಾಗೆಲ್ಲ ಧ್ವನಿ ಎತ್ತಿದ ಕೇಲವೇ ಕೇಲವು ನಾಯಕರಲ್ಲಿ ಇವರು ಮೊದಲಿಗರು ಎಂದು ಹೇಳಬಹುದು.

ಸುರೇಶ್‌ ಬಳೂಟಗಿ ಬಹುಮುಖ ಸಮಾಜ ಸೇವೆ

ಶಿಕ್ಷಣ:- ಬಂಜಾರ ಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ನೋಡಿಕೊಳ್ಳುವುದು ಮತ್ತು ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕರೆತರುವುದು. ಇದೀಗ ಶಿಕ್ಷಣ ಪಡೆಯುತ್ತೀರುವ ಮಕ್ಕಳನ್ನು ಸರಿದಾರಿಗೆ ತರುವಲ್ಲಿ ಮಹತ್ವದ ಪಾತ್ರ ಇವರದ್ದು,

ಆರೋಗ್ಯ : – ಸಮುದಾಯದ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಆರೋಗ್ಯ ಸಲಹೆಗಳನ್ನು ನೀಡಿ, ಪೌಷ್ಟಿಕ ಆಹಾರ ಮತ್ತು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲಿ ಸದಾ ಮುಂಚುಣಿಯಲ್ಲಿ ಸುರೇಶ್‌ ಬಳೂಟಗಿ ಇರುತ್ತಿದ್ದರು.

ಆರ್ಥಿಕ ಅಭಿವೃದ್ಧಿ :- ಆರ್ಥಿಕವಾಗಿ ಸದೃಢಗೋಳ್ಳಬೇಕಾದರೇ ಯುವಕರಲ್ಲಿ ಸಣ್ಣ ಉದ್ದಿಮೆಗಳನ್ನು ಆರಂಭಿಸಲು ಮಹತ್ವದ ಸಲಹೇ ಸೂಚನೆ ನೀಡುತ್ತಿದ್ದರು.

ಸಂಸ್ಕೃತಿ :- ತಮ್ಮ ಸಂಪ್ರದಾಯಗಳು, ನೃತ್ಯಗಳು, ಹಾಡುಗಳು ಮತ್ತು ಕಲೆಗಳನ್ನು ಉಳಿಸಿ ಬೆಳೆಸಲು ಪ್ರಯತ್ನಿಸುವುದು. ತಾಂಡಾಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು.

ಜಾಗೃತಿ:- ಬಂಜಾರ ಸಮುದಾಯದ ಹಕ್ಕುಗಳ ಬಗ್ಗೆ ಅರಿವು ಮೂಡಿಸಿ ಮತ್ತು ಸರ್ಕಾರದ ಸೌಲಭ್ಯಗಳನ್ನು ಪಡೆಯುವ ಬಗ್ಗೆ ಯುವಕರನ್ನು ಒಗ್ಗೂಡಿಸಿ ತಮ್ಮ ಸಮಾಜದ ಇರುವಿಕೆಯನ್ನು ಈಭಾಗದಲ್ಲಿ ತೋರಿಸಿಕೊಟ್ಟವರು.

ರಾಜಕೀಯ ಪ್ರಾತಿನಿಧ್ಯ : ರಾಜಕೀಯ ಪಕ್ಷಗಳಲ್ಲಿ ಸಮುದಾಯದ ಪ್ರಾತಿನಿಧ್ಯವನ್ನು ಹೆಚ್ಚಿಸಲು ಶ್ರಮಿಸಿದವರು. ಎಲ್ಲಾ ಕ್ಷೇತ್ರಗಳಲ್ಲಿ ಇವರ ಅಗಾಧ ಸೇವೆಯನ್ನು ಗುರುತಿಸಿ, ವರ್ಷದ ಅತ್ಯುತ್ತಮ ಕನ್ನಡಿಗ 2025 ಪ್ರಶಸ್ತಿ ನೀಡಿ ಗೌರವಿಸಿದ್ದಾಗಿದೆ.

ಇದೀಗ ಪ್ರಸ್ತುತವಾಗಿ “ಗೋರ್‌ ಸಿಕವಾಡಿ ಕರ್ನಾಟಕ” ಸಾಮಾಜಿಕ ಚಳುವಳಿಯಲ್ಲಿ ತೊಡಗಿಸಿಕೊಂಡು, ಗೋರ್‌ ಸೇನಾ ರಾಜ್ಯ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Leave a Reply

error: Content is protected !!