BREAKING : ರಾಜ್ಯದ ದೇವಾಲಯಗಳ “ಆಸ್ತಿ” ಕಬಳಿಸಿದವರಿಗೆ ಬಿಗ್ ಶಾಕ್..!! : ಕೊಪ್ಪಳ ಜಿಲ್ಲೆಯಲ್ಲೂ ಕಬಳಿಸಿದ್ರಾ ದೇವಸ್ಥಾನದ ಜಮೀನು ..?
ಪ್ರಜಾ ವೀಕ್ಷಣೆ ಡಿಜಿಟಲ್ ಡೆಸ್ಕ್ : ರಾಜ್ಯದಲ್ಲಿ ದೇವಸ್ಥಾನಗಳ ಅಸ್ತಿ ಕಬಳಿಸಿದವರಿಗೆ ರಾಜ್ಯ ಸರ್ಕಾರವು ಬಿಗ್ ಶಾಕ್ ನೀಡಿದ್ದು, ಶೀಘ್ರದಲ್ಲಿ ಮುಜರಾಯಿ ಇಲಾಖೆಯಿಂದ ಬರೋಬ್ಬರಿ 4,000 ಎಕರೆ ಭೂಮಿ ಮರುಸ್ವಾಧೀನಕ್ಕೆ ಗುರುತು ಮಾಡಲಾಗಿದೆ ಎಂದು ಅಧಿಕೃತ ಮೂಲಗಳಿಂದ ಮಾಹಿತಿ ಳಭ್ಯವಾಗಿದೆ.
ರಾಜ್ಯದ ನಾನಾ ದೇವಾಲಯಗಳ ಮತ್ತು ಧಾರ್ಮಿಕ ಸಂಸ್ಥೆಗಳ ಪರಭಾರೆಯಾಗಿದ್ದ ಸುಮಾರು 4 ಸಾವಿರ ಎಕರೆ ಪ್ರದೇಶವನ್ನು ಗುರುತಿಸಿ, ಸ್ಕೆಚ್ನೊಂದಿಗೆ ಧಾರ್ಮಿಕ ದತ್ತಿ ಹಾಗೂ ಮುಜರಾಯಿ ಇಲಾಖೆಯು ಅಂತಿಮ ಅಧಿಸೂಚನೆಗೆ ಸರಕಾರಕ್ಕೆ ಶಿಫಾರಸು ಮಾಡಿದೆ.
ರಾಜ್ಯದ ಹಾಸನ, ಚಿಕ್ಕಮಗಳೂರು, ಕಲಬುರಗಿ, ತುಮಕೂರು, ಮೈಸೂರು, ಮಂಡ್ಯ, ಕೊಪ್ಪಳ ಸೇರಿದಂತೆ ನಾನಾ ಜಿಲ್ಲೆಗಳಲ್ಲಿ ಮುಜರಾಯಿ ಇಲಾಖೆಗೆ ಸೇರಿದ ಸಾವಿರಾರು ಎಕರೆ ಭೂಮಿ ಒತ್ತುವರಿಯಾಗಿದೆ ಎನ್ನಲಾಗಿದೆ.
ಈ ಜಮೀನುಗಳ ಸರ್ವೆ, ಸ್ಕೆಚ್ ಮಾಡಿಸಿ, ತಹಸೀಲ್ದಾರ್ ಅಥವಾ ಡಿಡಿಎಲ್ಆರ್‌ಗಳಿಂದ ಪ್ರಮಾಣೀಕರಿಸಿ ಇಂಟಿಗ್ರೇಟೆಡ್ ಟೆಂಪಲ್ ಮ್ಯಾನೇಜ್ಮೆಂಟ್ ಸಿಸ್ಟಂ (Integrated Temple Information Management System) (ITIMS) (ಐಟಿಎಂಎಸ್)’ ವೆಬ್‌ಸೈಟ್‌ನಲ್ಲಿ ಪ್ರಕಟಿಸಿ ಗೆಜೆಟ್ ಅಧಿಸೂಚನೆಯೊಂದಿಗೆ ದೇವಸ್ಥಾನಗಳ ಆಸ್ತಿಯನ್ನು ಶಾಶ್ವತವಾಗಿ ಉಳಿಸಲು ಮುಜರಾಯಿ ಇಲಾಖೆ ಈಗಾಗಲೇ ಸಜ್ಜಾಗಿದೆ ಎನ್ನಲಾಗಿದೆ.