BREAKING : ಪೊಲೀಸ್ ಸರ್ಪಗವಾಲಿನಲ್ಲಿ ದೇವಸ್ಥಾನದ ಭೂಮಿ ಸರ್ವೇ : ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿದ್ರಾ ಅಧಿಕಾರಿಗಳು?
ಪ್ರಜಾ ವೀಕ್ಷಣೆ ಡಿಜಿಟಲ್ ಡೆಸ್ಕ್ (ಕುಕನೂರು) : ಪಟ್ಟಣದ ಪುರಾತನ ಪ್ರಸಿದ್ದ, ಐತಿಹಾಸಿಕ ದೇವಾಲಯ ಗುದ್ನೇಶ್ವರ ಮಠದ ಶ್ರೀ ರುದ್ರಮುನೀಶ್ವರ ದೇವಾಲಯದ ಜಮೀನು ಸರ್ವೇ ಕಾರ್ಯವನ್ನು ಜಿಲ್ಲಾ ಉಪ ವಿಭಾಗಾಧಕಾರಿ ಮಹೇಶ್ ಮಾಲಗಿತ್ತಿ ಅವರ ಸಮ್ಮುಖದಲ್ಲಿ ಇಂದು (ಸೋಮವಾರ) ಮಾಡಲಾಯಿತು.
ಪೊಲೀಸ್ ಸರ್ಪಗಾವಲಿನೊಂದಿಗೆ ಗುದ್ನೇಶ್ವರ ದೇವಸ್ಥಾನ ಟ್ರಸ್ಟ್ (ಮುಜರಾಯಿ ಇಲಾಖೆಗೆ)ಗೆ ಸೇರಿದ ಭೂಮಿಯ ಸರ್ವೇ ಕಾರ್ಯವನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಂದ ವೀಕ್ಷಣೆ ಜೊತೆಗೆ ಸರ್ವೇ ಕಾರ್ಯ ನಡೆಯಿತು.
ತಾಲೂಕಿನ ಗುದ್ದಪ್ಪನ ಮಠದ ಶ್ರೀ ಗುದ್ನೇಶ್ವರ ದೇವಸ್ಥಾನಕ್ಕೆ (ಮುಜರಾಯಿ ಇಲಾಖೆಗೆ) ಒಳಪಟ್ಟಿದ್ದು, ದೇವಸ್ಥಾನಕ್ಕೆ ಸಂಬಂಧಪಟ್ಟಂತ ಜಮೀನು ವಿಚಾರವಾಗಿ ಚರ್ಚೆ ಮತ್ತೆ ಮುನ್ನಲೇಗೆ ಬಂದಿದ್ದು, ಕಳೆದ ಒಂದು ವರ್ಷ ಹಿಂದೆ ಈ ಗುದ್ನೇಶ್ವರ ದೇವಸ್ಥಾನದ ಸುತ್ತಮುತ್ತಲಿನ ಜಮೀನು ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆದಿದ್ದವು.
ಈಗಾಗಲೇ ಈ ಬಗ್ಗೆ ಹೈಕೋರ್ಟ್ ನಲ್ಲಿ ಪ್ರಕರಣ ನಡೆಯುತ್ತಿದ್ದು, ಇಲ್ಲಿ ಯಾವುದೇ ರೀತಿಯಾದ ಕಾಮಗಾರಿಗಳು ಅಥವಾ ಚಟುವಟಿಕೆಗಳು ನಡೆಯದಂತೆ ದೇವಸ್ಥಾನದ ಸಮಿತಿಯವರು ನ್ಯಾಯಾಲಯದಲ್ಲಿ ಸ್ಟೇ ಆರ್ಡರ್ ತಂದಿರುತ್ತಾರೆ.
ಆದಾಗ್ಯ ಕೂಡ ಇಂದು ಜಿಲ್ಲಾ ಉಪವಿಭಾಗ ಅಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಅವರ ನೇತೃತ್ವದಲ್ಲಿ ಒಟ್ಟು ದೇವಸ್ಥಾನಕ್ಕೆ ಸಂಬಂಧಪಟ್ಟಂತ ಜಮೀನಿನ ಸಾಮಾನ್ಯ ಸರ್ವೇ ಮಾಡಲಾಯಿತು. ಇದು ಅಧಿಕಾರಿಗಳ ಪ್ರಕಾರ ಅನೌಪಚಾರಿಕ ಸರ್ವೆಂದು ತಿಳಿದು ಬಂದಿದೆ.
ಮೇಲ್ನೋಟಕ್ಕೆ ಹಾಗೆನೇ ಕಾಣುತ್ತಿದ್ದರೂ ಸಹ ಇದು ಔಪಚಾರಿಕ, ಅಧಿಕೃತ ಸರ್ವೆ ಎಂದು ಅಲ್ಲಿನ ಜನರ ಅಭಿಪ್ರಾಯವಾಗಿತ್ತು. ಒಂದು ಕಡೆಯಿಂದ ವಿಚಾರಿಸಲಾಗಿ, ನ್ಯಾಯಾಲಯದ ಆದೇಶ ಯನ್ನು ಧಿಕ್ಕರಿಸಿ ಅಧಿಕಾರಿಗಳು ಇಂದು ಸರ್ವೆ ಮಾಡಿದ್ರಾ? ಎನ್ನುವ ಪ್ರಶ್ನೆ ಮೂಡುತ್ತದೆ.
ಈ ಬಗ್ಗೆ ಅಲ್ಲಿನ ಸ್ಥಳಿಯರು ಅಧಿಕಾರಿಗಳಿಗೆ ಪ್ರಶ್ನೆ ಮಾಡಿದಾಗ, ಸರ್ಕಾರಿ ಭೂಮಿಯ ಅಥವಾ ಜಮೀನಿನ ಸುತ್ತಮುತ್ತಲಿನ ಖಾಸಗಿ ವ್ಯಕ್ತಿಗಳ ಜಮೀನಿದ್ದು, ಅದು ಸರ್ಕಾರಿ ಭೂಮಿಯನ್ನು ಅತಿಕ್ರಮಣ ಆಗಿದೆಯೋ ಇಲ್ಲವೋ? ಎಂಬುದರ ಬಗ್ಗೆ ಸ್ಪಷ್ಟೀಕರಣ ತೆಗೆದುಕೊಳ್ಳುವುದಕ್ಕೆ ಇಂದು ಸಾಮಾನ್ಯ ಸರ್ವೇ ಮಾಡುತ್ತಿದ್ದೇವೆ ಎಂದು ಸಮಜಾಯಿಸಿ ನೀಡಿದರು.
ಇದೇ ವೇಳೆಯಲ್ಲಿ ಮೀಸಲು ಪಡೆಯ ಪೊಲೀಸ್ ರನ್ನ ನಿಯೋಜಿಸಿದ್ದು, ಭಾರೀ ಆಶ್ಚರ್ಯ ಉಂಟು ಮಾಡುವಂತಹ ಸಂಗತಿಯಾಗಿತ್ತು. ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದರೂ ಕೂಡ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಪೊಲೀಸ್ ಸರ್ಪ ಗವಾಲಿನಲ್ಲಿ ಸರ್ವೇ ಕಾರ್ಯ ನಡೆಸಿದ್ದು, ಸ್ಥಳೀಯ ನಿವಾಸಿಗಳಲ್ಲಿ ಮತ್ತು ದೇವಸ್ಥಾನದ ಸೇವಕರಲ್ಲಿ ಆತಂಕ ಉಂಟು ಮಾಡಿದೆ.
ಈ ಪ್ರಕರಣದ ಹಿನ್ನಲೆ…!
ಗುದ್ನೇಪ್ಪನ ಮಠದ ಸರ್ವೆ ನಂಬರ್ 78ರಲ್ಲಿ ಸರಿ ಸುಮಾರು 170 ಎಕರೆ ಭೂಮಿ ಸರ್ಕಾರಿ ಭೂಮಿಯಾಗಿದ್ದು, (ಅಧಿಕೃತ ಸರ್ಕಾರಿ ದಾಖಲೆಗಳ ಪ್ರಕಾರ) ಎಂದು ಸರ್ಕಾರ ಹಾಗೂ ಇಲ್ಲಿನ ಆಡಳಿತಾತ್ಮಕ ಅಧಿಕಾರಿಗಳ ಒಂದು ವಾದ ವಾಗಿದ್ದರೆ, ಇನ್ನೊಂದು ಕಡೆಯಿಂದ ಗುದ್ನೆಪ್ಪನ ಮಠದ ಶ್ರೀ ಗುದ್ನೇಶ್ವರ ದೇವಸ್ಥಾನದ ಸಮಿತಿಯವರು ಈ ಎಲ್ಲಾ ಭೂಮಿಯು ಸರ್ಕಾರಿ ಭೂಮಿಯಲ್ಲ, ಇದು ಅಜ್ಜ ಗುದ್ನೇಶ್ವರನ ಆಸ್ತಿಯಾಗಿದೆ ಎನ್ನುವ ಇನ್ನೊಂದು ವಾದ. ಆದ್ರೆ ಈ ಕುರಿತು ಈಗಾಗಲೇ ಸರ್ವೇ ನಂಬರ್ 78ರ 40 ಎಕರೆ ಭೂಮಿವೂ ದೇವಸ್ಥಾನದ 18 ಜನ ಸೇವಾದಾರರಿಗೆ ಬಿಟ್ಟುಕೊಡಲಾಗಿದೆ ಎಂದು ಇಲ್ಲಿನ ಸ್ಥಳೀಯರ ಅಭಿಪ್ರಾಯವಾಗಿದೆ.
ದೇವಸ್ಥಾನದ ಜಾಗದಲ್ಲಿ ಸ್ಥಳೀಯ ಆಡಳಿತ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ನೂತನ ನ್ಯಾಯಾಲಯ ಮತ್ತು ಸರ್ಕಾರಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಗ್ರಾಮಸ್ಥರು ಮತ್ತು ಸರ್ಕಾರಿ ಅಧಿಕಾರಿಗಳ ನಡುವೆ ಈಗಾಗಲೇ ತಿಕ್ಕಾಟ ನಡೆದು ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ನ್ಯಾಯಾಲಯ ಈ ಪ್ರಕಾರಕ್ಕೆ ಸಂಬಂಧಿಸಿದಂತೆ ತಡೆಯಾಜ್ಞೆ ನೀಡಿದೆ ಎನ್ನಲಾಗಿದೆ. ಆದರೂ ಕೂಡ ಅಧಿಕಾರಿಗಳು ಮತ್ತೊಮ್ಮೆ ಸರ್ವೇ ಕಾರ್ಯಕ್ಕೆ ಮುಂದಾಗಿದ್ದು, ದೇವಸ್ಥಾನದ ಭೂಮಿ ಕೈತಪ್ಪುವ ಭೀತಿಯಲ್ಲಿ ಸೇವಕರು ಮತ್ತು ಗ್ರಾಮಸ್ಥರು ಆತಂಕಕ್ಕೆ ಕಾರಣವಾಗಿದೆ.
ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಉಪ ವಿಭಾಗಾಧಿಕಾರಿ ಮಹೇಶ್ ಮಾಲಗಿತ್ತಿ, ದೇವಸ್ಥಾನದ ಕೆಲ ಜಮೀನಿಗೆ ಸಂಬಂದಿಸಿದ ಪ್ರಕರಣಕ್ಕೆ ನ್ಯಾಯಾಲಯ ತಡಯಜ್ಞೆ ನೀಡಿದ್ದು, ಅದನ್ನು ಪಾಲಿಸುತ್ತೇವೆ ಎಂದಿದ್ದಾರೆ. ಮತ್ತೊಂದು ಕಡೆ ಸರ್ವೇ ಕಾರ್ಯ ಮುಂದವರೆದಿದ್ದು, ಸ್ಥಳೀಯರಲ್ಲಿ ಅನುಮಾನ ಉಂಟಾಗುವಂತೆ ಮಾಡಿದೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ಧರಾಮೇಶ್ವರ, ತಹಶೀಲ್ದಾರ್ ಹೆಚ್. ಪ್ರಾಣೇಶ್ ಹಾಗೂ ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.