ಮುದಗಲ್ಲ ವರದಿ..
ವೆಂಕಟರಾಯನಪೇಟೆಯ ಮಾರುತೇಶ್ವರ ಜಾತ್ರೆ ಸಂಭ್ರಮ..
ಮುದಗಲ್ಲ:- ಸ್ಥಳೀಯ ವೆಂಕಟರಾಯನಪೇಟೆಯ ಮಾರುತೇಶ್ವರ ಜಾತ್ರಾ ಮಹೋತ್ಸವವು ಶ್ರಾವಣ ಮಾಸದ ಕೊನೆ ಸೋಮವಾರದಂದು ಸಂಭ್ರಮ ದಿಂದ ನಡೆಯಿತು.
ಬೆಳಗ್ಗೆ ದೇಗುಲದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಮಹಿಳೆಯರಿಂದ ಕಳಶದ ಮೆರವಣಿಗೆ ನಡೆಯಿತು. ಸಂಜೆ ಕಳಸಾರೋಹಣ ಕಾರ್ಯಕ್ರಮ ಜರುಗಿತು. ನಾನಾ ಸಾಂಸ್ಕೃತಿಕ ತಂಡಗಳು ಹಾಗೂ ಡಿಜೆ ಸಾಂಗ್ ಮುಖಾಂತರ ಮೆರವಣಿಗೆಗೆ ಮೆರಗು ತಂದವು.

ಅಲಂಕೃತ ವಾಹನದಲ್ಲಿ ಆಂಜನೇಯನ ಭಾವಚಿತ್ರ ಪ್ರತಿಷ್ಠಾಪಿಸಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ಮಾಡಲಾಯಿತು.
ಈ ಸಂದರ್ಭದಲ್ಲಿ ವೆಂಕಟರಾಯನಪೇಟೆಯ ಸಮಸ್ತ ಭಕ್ತರು ಶ್ರಾದ್ಧ ಭಕ್ತಿ ಯಿಂದ ಪಾಲ್ಗೊಂಡಿದ್ದರು..
ವರದಿ:- ಮಂಜುನಾಥ ಕುಂಬಾರ