ಮುದಗಲ್ಲ ಈದ್ ಮಿಲಾದ್ ಮತ್ತು ಗಣೇಶ ಹಬ್ಬಗಳ ಶಾಂತಿಯುತ ಆಚರಣೆಗೆ ಜಿ. ಹರೀಶ ಸೂಚನೆ..

ಮುದಗಲ್ಲ ವರದಿ..

ಈದ್ ಮಿಲಾದ್ ಮತ್ತು ಗಣೇಶ ಹಬ್ಬಗಳ ಶಾಂತಿಯುತ ಆಚರಣೆಗೆ ಜಿ. ಹರೀಶ ಸೂಚನೆ..

ಮುದಗಲ್ಲ :- ಶಾಂತಿ ಮತ್ತು ಸೌಹಾರ್ದತೆಯಿಂದ ಗಣೇಶ ಹಾಗೂ ಈದ್ ಮಿಲಾದ್ ಹಬ್ಬ ಆಚರಿಸೋಣ ಎಂದು ರಾಯಚೂರು ಹೆಚ್ಚುವರಿ ಜಿಲ್ಲಾ ಪೋಲಿಸ್ ಅಧಿಕ್ಷಕ ಜಿ. ಹರಿಷ ಮಂಗಳವಾರ ಅವರು ಸಾರ್ವಜನಿಕರ ಸಾಮರಸ್ಯ ಸಭೆಯಲ್ಲಿ ತಿಳಿಸಿದರು ಪಟ್ಟಣದ ಶ್ರೀ ನೀಲಕಂಠೆಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಸಭಾಂಗಣದಲ್ಲಿ ಗೌರಿಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಆಚರಣೆ ನಿಮಿತ್ಯ ಕರೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು ಗೌರಿಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬವನ್ನು ಶಾಂತಿ ಸೌಹಾರ್ದತೆಯೊಂದಿಗೆ ಧಾರ್ಮಿಕ ಭಾವನೆಗಳಗೆ ದಕ್ಕೆಯಾಗದಂತೆ ಆಚರಿಸಿ ಎಂದು ರಾಯಚೂರು ಹೆಚ್ಚುವರಿ ಜಿಲ್ಲಾ ಪೋಲಿಸ್ ಅಧಿಕ್ಷಕ ಜಿ. ಹರಿಷ ಮಂಗಳವಾರ ಹೇಳಿದರು.

ಅನುಮತಿ ಕಡ್ಡಾಯ: ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಪ್ರತಿಷ್ಠಾಪಿಸುವವರು ಸ್ಥಳೀಯ ಪೋಲಿಸ್ ಕಚೇರಿಗಳಲ್ಲಿ ತೆರೆಯಲಾಗುವ ಅನುಮತಿ ಪಡೆಯುವುದು ಕಡ್ಡಾಯ.ಅನುಮತಿ ಪಡೆಯುವ ಸಂದರ್ಭದಲ್ಲಿ ಗಣಪತಿ ಪ್ರತಿಷ್ಠಾಪಿಸುವ ದಿನಾಂಕ, ಅವಧಿ, ವಿಸರ್ಜನೆ ಮಾಡುವ ದಿನಾಂಕ ಮತ್ತು ಸ್ಥಳ, ಮೆರವಣಿಗೆಯ ರೂಟ್ ಮ್ಯಾಪ್ ಗಳನ್ನು ನಮೂದಿಸಬೇಕು

ಇದರಿಂದ ಪೊಲೀಸ್‌ ಬಂದೋಬಸ್ತ್, ಬ್ಯಾರಿಕ್ಯಾಡಿಂಗ್, ಚೆಸ್ಕಾಂ ಇಲಾಖೆಯಿಂದ ಅಗತ್ಯ ಸಿದ್ಧತೆಯನ್ನು ವ್ಯವಸ್ಥಿತವಾಗಿ ಮಾಡಿಕೊಳ್ಳಬಹುದು” ಎಂದ ಅವರು, “ಸ್ಥಳೀಯ ಮುಖಂಡರು ಒಂದೇ ಸ್ಥಳವನ್ನು ನಿಗದಿಪಡಿಸಿ ಕೊಂಡು ಗಣಪತಿ ವಿಸರ್ಜನೆ ಮಾಡಿದರೆ, ಬೇಕಿರುವ ಸಿದ್ಧತೆ ಹಾಗೂ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವುದು ಸುಲಭ” ಎಂದರು.

ಕಿಡಿಗೇಡಿಗಳ ಬಗ್ಗೆ ನಿಗಾ: “ಕೋಮು ಗಲಭೆ ಉಂಟುಮಾಡುವ ಕಿಡಿಗೇಡಿಗಳ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಸ್ಥಳೀಯರಿಗೆ ಕಿಡಿಗೇಡಿಗಳು ಹಾಗೂ ಸಂದೇಹಾತ್ಮಕ ಘಟನೆ ಕಂಡುಬಂದಲ್ಲಿ ಸ್ಥಳೀಯ ಪೊಲೀಸ್‌ ಇಲಾಖೆ ಮಾಹಿತಿ ನೀಡಿ. ಕೋಮು ಗಲಭೆ ಉಂಟು ಮಾಡುವ ಹಾಗೂ ಶಾಂತಿ ಕದಡುವ ಸಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವುದು ಹಾಗೂ ಸುಳ್ಳು ಸುದ್ದಿ ಹರಡುವವರ ಮೇಲೂ ಸಹ ಪೊಲೀಸ್‌ ತಂಡ ನಡುವೆ ನಿಗಾ ವಹಿಸುತ್ತಿದೆ. ಪ್ರಕರಣಗಳು ಕಂಡು ಬಂದಲ್ಲಿ ನಿರ್ಧಾಕ್ಷಿಣ್ಯ ಕ್ರಮ ವಹಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.

ಅವರು ಜೆಸ್ಕಾಂ ಇಲಾಖೆ ಅಧಿಕಾರಿಗಳು ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು, ಪುರಸಭೆಯವರು ಹಬ್ಬಕ್ಕೆ ಬೇಕಾಗುವ ಸಕಲ ಸಿದ್ಧತೆ ಮಾಡಿಕೊಡಬೇಕು. ಅಬಕಾರಿ ಇಲಾಖೆಯವರು ಹಬ್ಬದ ಅಧಿನಿಯಮ ಪಾಲಿಸಬೇಕು.ತಪ್ಪಿತಸ್ಥರಿಗೆ ಹಿರಿಯರು ಯಾರು ಶಿಫಾರಸ್ಸು ತರಬಾರದು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವದು ಎಂದು ತಿಳಿಸಿದರು. ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ ಪ್ರಾಸ್ತಾವಿಕ ನುಡಿ ಮಸ್ಕಿ ವೃತ್ತ ಸಿಪಿಐ ಬಾಲಚಂದ್ರ ಲಕ್ಕಂ ಮಾತನಾಡಿದರು.

ಪಟ್ಟಣದ ಗಣ್ಯರಾದ ಗುರುಬಸ್ಸಪ್ಪ ಸಜ್ಜನ್, ಜಮೀರ ಅಹ್ಮದ ಖಾಜಿ, ಅವರು ಮಾತನಾಡಿದ್ದರು

ಜಾಸ್ತಿಯಾಗದ ಸಿಬ್ಬಂದಿ:

ನಂತರ ಮಾತನಾಡಿದ ಲಿಂಗಸೂರು  ತಾಲ್ಲೂಕಿನ ಕೆಡಿಪಿ ಸದಸ್ಯರಾದ ರಾಘವೇಂದ್ರ ಕುದುರಿ ಅವರು ಸ್ಥಳೀಯ ಪೋಲಿಸ್ ಠಾಣೆಯಲ್ಲಿ ಸಿಬ್ಬಂದಿ ಕೊರತೆ ಇದೆ ದಯವಿಟ್ಟು ಸ್ಪಂದನೆ ನೀಡಿ ಜಾಸ್ತಿಯಾಗದ ಸಿಬ್ಬಂದಿ ಮುದಗಲ್ಲ ಪೊಲೀಸ್ ಠಾಣೆ ಆರಂಭವಾದಾಗ ಇಲ್ಲಿ ಸಿಬ್ಬಂದಿ ಎಷ್ಟಿತ್ತೊ ಈಗಲೂ ಅಷ್ಟೇ ಸಿಬ್ಬಂದಿ ಇರುವುದು ಕಾರ್ಯ ನಿರ್ವಹಣೆಗೆ ಹಿನ್ನಡೆಯಾಗಿದೆ. ಅಪರಾಧಗಳನ್ನು ನಿಯಂತ್ರಿಸಲು, ಸಂಚಾರ ನಿಯಮ ಪಾಲನೆಗೆ ನಿಗಾವಹಿಸಲು, ಅಪಘಾತಗೊಂಡಾಗ ತುರ್ತಾಗಿ ಸ್ಪಂದಿಸಲು, ಬೀಟ್, ಬಂದೋಬಸ್ತ್, ಠಾಣಾ ಕೆಲಸ, ಕಂಪ್ಯೂಟರ್ ನಿರ್ವಹಣೆ, ಚುನಾವಣಾ ಕರ್ತವ್ಯ ಸೇರಿದಂತೆ ಇತರ ಕಾನೂನು ಸುವ್ಯವಸ್ಥೆ ಹಾಗೂ ಹೆಚ್ಚುವರಿ ಕೆಲಸ ನಿರ್ವಹಿಸಲು 8 ರಿಂದ  15 ಸಿಬ್ಬಂದಿ ಅಗತ್ಯವಿದೆ  ಎಂದರು

ಈ ಸಂದರ್ಭದಲ್ಲಿ ಪಿಎಸ್ಐ ವೆಂಕಟೇಶ ಮಾಡಗೇರಿ, ಅಬಕಾರಿ ನಿರೀಕ್ಷಕರು ಲಕ್ಷ್ಮೀದೇವಿ, ಜೆಸ್ಕಾಂ ಶಾಖಾಧಿಕಾರಿ ಬನ್ನೆಪ್ಪ, ಮುಖ್ಯಾಧಿಕಾರಿ ಪ್ರವೀಣ ಬೋಗಾರ, ಪುರಸಭೆ ಸದಸ್ಯ ಮಹೆಬೂಬ ಕಡ್ಡಿಪುಡಿ, ಮಾಸುಮ್ ಷರೀಫ, ಕರವೇ ಅಧ್ಯಕ್ಷ ಎಸ್.ಎ ನಹೀಂ, ಸಾಬು ಹುಸೇನ್, ಸಾಬು ಹುಸೇನ್, ಜಮೀರಪಾಷ, ರಹೆಮಾನ ದುಲಾ ಜಂಬಾಳಿ, ಮಹಾಂತೇಶ ಬೋವಿ, ಜವರಲಾಲ್ ಶೆಟ್, ನ್ಯಾಮತುಲ್ಲಾ ಖಾದ್ರಿ, ನಾಗರಾಜ ತಳವಾರ,ಮಂಜುನಾಥ ಸೇರಿದಂತೆ ಇತರರು ಉಪಸ್ಥಿತರಿದ್ದರು..

ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!