ಮುದಗಲ್ಲ :-ಪುರಸಭೆ ವತಿಯಿಂದ 538ನೇ ಕನಕದಾಸರ ಜಯಂತಿ ಆಚರಣೆ…

ಮುದಗಲ್ಲ ವರದಿ..

ಪುರಸಭೆ ವತಿಯಿಂದ 538 ನೇ ಕನಕದಾಸರ ಜಯಂತಿ ಆಚರಣೆ…

ಮುದಗಲ್: ಕನಕದಾಸರ ಜಯಂತಿ ಯನ್ನು ಪುರಸಭೆ ವತಿಯಿಂದ ಕನಕದಾಸರ 538 ನೇ ಜಯಂತಿ ಯನ್ನು ಶನಿವಾರಆಚರಿಸಲಾಯಿತು. ಭಕ್ತ ಕನಕ ದಾಸರ ಭಾವಚಿತ್ರಕ್ಕೆ ಸಮಾಜದ ಮುಖಂಡ ದೊಡ್ಡ ಸಿದ್ದಯ್ಯ ಅವರು ಕನಕದಾಸರ ಭಾವಚಿತ್ರ ಕ್ಕೆ ಹೂಮಾಲೆ ಹಾಕುವ ಮೂಲಕ ಪೂಜೆ ಸಲ್ಲಿಸಿ ಜಯಂತಿ ಆಚರಣೆ ಮಾಡಲಾಯಿತು.

ಪುರಸಭೆ ಮುಖ್ಯಾಧಿಕಾರಿ ಪ್ರವೀಣ್ ಬೋಗರ್ ಅವರು ಈ ಸಂದರ್ಭ ದಲ್ಲಿ ಮಾತನಾಡಿದರು.ಕನಕದಾಸರು ಒಂದು ವರ್ಗದ ಸೀಮಿತವಾಗಿಲ್ಲ. ಅವರು ಕಾವ್ಯ ಹಾಗೂ ಕೀರ್ತನೆಗಳ ಮೂಲಕ ಸಮಾಜದಲ್ಲಿ ಬೇರೂರಿದ್ದ ಕಂದಾಚಾರಗಳನ್ನು ಹೋಗಲಾಡಿಸಲು ಶ್ರಮಿಸಿ, ಸಾಹಿತ್ಯಕ್ಕೆ ತನ್ನದೆ ಆದ ಕೊಡುಗೆ ನೀಡಿ, ಎಲ್ಲರನ್ನು ಸಮಾನ ತೆ ದೃಷ್ಡಿಕೋನದಿಂದ ನೋಡುವಂತೆ ತಿಳಿಸಿ ವಿಶ್ವಮಾನವರಾದರು ಎಂದರು 

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಪ್ರವೀಣ್ ಕುಮಾರ್ ಸದಸ್ಯರಾದ ಹನುಮಂತ , ಗುಂಡಪ್ಪ ಗಂಗಾವತಿ ,ಶಿವನಾಗಪ್ಪ ತಮ್ಮಣ್ಣ ಗುತ್ತಿದಾರ ,ಕುರುಬ ಸಮಾಜದ ಮುಖಂಡರಾದಅಯಪ್ಪಯ್ಯ, ರಾಯಪ್ಪ, ನಂದಪ್ಪ, ಚನ್ನಬಸಪ್ಪ ,ಪರಮೇಶ ಕನ್ನಾಪೂರ ಹಟ್ಟಿ, ಮಂಜುನಾಥ ಬನ್ನಿಗೋಳಕರ್, ಬಸವರಾಜ ಜಲ್ಲಿ, ಹಾಗೂ ಹಿರಿಯ ಮುಖಂಡರಾದ ವೆಂಕಟೇಶ್ ಹಿರೇಮನಿ , ನ್ಯಾಮತುಲ್ಲಾ ಖಾದ್ರಿ, ನಾಗರಾಜ ದಪ್ಪೇದಾರ , ಕರಿಯಪ್ಪ ಯಾದವ ,ಮಲ್ಲಪ್ಪಮಾಟೂರು,
ಹುಸೇನ್ ಅಲಿ, ಹಾಗೂ ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು..

ವರದಿ:- ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!