LOCAL NEWS : ಕರಡಿ ದಾಳಿ : ರೈತನಿಗೆ 60 ಸಾವಿರ ರೂಪಾಯಿ ಪರಿಹಾರ..!
ಕುಕನೂರು : ತಾಲೂಕಿನ ರಾವಣಕಿ ಗ್ರಾಮದ ಕೃಷಿಕ ಜಮೀನಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಕರಡಿ ದಾಳಿಗೊಳಗಾಗಿದ್ದು ಗಾಯಾಳುವಿಗೆ 60 ಸಾವಿರ ರೂಪಾಯಿ ಪರಿಹಾರ ನೀಡಲಾಗಿದೆ.
ಕಳೆದ ಜುಲೈ 11ರಂದು ತಾಲೂಕಿನ ರಾವಣಕಿ ಗ್ರಾಮದ ರೈತ ನಾಗಪ್ಪ ಬೆಂಚಳ್ಳಿ ಕೃಷಿ ಜಮೀನಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಕರಡಿಯೊಂದು ದಾಳಿ ಮಾಡಿದ್ದು, ದಾಳಿಗೊಳಗಾದ ರೈತನಿಗೆ ಇಲಾಖೆಯ ವರದಿ ಪ್ರಕಾರ ಕಾಡು ಪ್ರಾಣಿಗಳಿಂದ ಹಲ್ಲೆಗಳಾದ ವ್ಯಕ್ತಿಗಳ ದಾಖಲೆಗಳ ಹಾಗೂ ವರದಿಗಳ ಆಧಾರದಲ್ಲಿ ಕಾಡುಪ್ರಾಣಿ ದಾಳಿಯಿಂದ ಗಾಯಗೊಂಡ/ಅಂಗವೈಕಲ್ಯ ಹೊಂದಿದ ವ್ಯಕ್ತಿ/ವ್ಯಕ್ತಿಗಳಿಗೆ ಸರ್ಕಾರಿ ಆದೇಶಗಳನ್ವಯ ಗಾಯಗೊಂಡ ಪ್ರತಿ ವ್ಯಕ್ತಿಗಳಿಗೆ ರೂ.60,000/-(ಅರವತ್ತು ಸಾವಿರ ರೂಪಾಯಿಗಳು ಮಾತ್ರ)ದ ಮಿತಿಗೊಳಪಟ್ಟ ಎಕ್ಸ್-ಶ್ರೇಟಿಯಾ ಪರಿಹಾರ ಧನವನ್ನು ಮಂಜೂರು ಮಾಡಲು ಈ ಗಾಯಾಳುವಿಗೆ ಅವಕಾಶವಿರುತ್ತದೆ ಆದ್ದರಿಂದ ಕಾಡುಪ್ರಾಣಿ ದಾಳಿಯಿಂದ ಸಂತ್ರಸ್ತರಿಗೆ ಗಾಯಗೊಂಡಿರುವುದು ಧೃಡಪಟ್ಟಿರುವುದರಿಂದ, ಈ ಸಂತ್ರಸ್ತನಿಗೆ ಕರ್ನಾಟಕ ಸರ್ಕಾರದ ಆದೇಶದನ್ವಯ ಎಕ್ಸ್-ಶ್ರೇಟಿಯಾ ಹಣವನ್ನು ಪಾವತಿಸಲು ಮಾಡಲಾಗಿದೆ.
ಅರಣ್ಯ ಇಲಾಖೆಯ ವತಿಯಿಂದ 60 ಸಾವಿರ ರೂಪಾಯಿಗಳ ಪರಿಹಾರವನ್ನು ನಾಗಪ್ಪ ಬೆಂಚಳ್ಳಿ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸುವುದರೊಂದಿಗೆ ಪರಿಹಾರ ನೀಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಪತ್ರಿಕಾ ಪ್ರಕಟಣೆಗೆ ತಿಳಿಸಿರುತ್ತಾರೆ