BIG NEWS : ಮೃತ ಗವಿಸಿದ್ದಪ್ಪ ನಾಯಕ್ ತಂದೆ, ತಾಯಿ ಮತ್ತು ಸಹೋದರಿಯ ಮೇಲೆ ಪೋಸ್ಕೊ ಕೇಸ್ ದಾಖಲು : ಮಹತ್ವದ ತಿರುವು…!
ಕೊಪ್ಪಳ : ಕೆಲ ದಿನಗಳ ಹಿಂದೆ ಕೊಪ್ಪಳದಲ್ಲಿ ಪ್ರೇಮ ವಿಚಾರಕ್ಕೆ ಕೊಲೆಯಾದ ಗವಿಸಿದ್ದಪ್ಪ ನಾಯಕ್ ಕೊಲೆ ಪ್ರಕರಣ ಮತ್ತೆ ಮಹತ್ವದ ತಿರುವು ಪಡೆದುಕೊಂಡಿದೆ. ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಸಹಕರಿಸಿದ ಆರೋಪದಲ್ಲಿ ಮೃತ ಗವಿಸಿದ್ದಪ್ಪನ ತಂದೆ, ತಾಯಿ ಮತ್ತು ಸಹೋದರಿಯ ಮೇಲೆ ಕೊಪ್ಪಳ ಮಹಿಳಾ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.
ಮೃತ ಗವಿಸಿದ್ದಪ್ಪನು ನನ್ನ ಅಪ್ರಾಪ್ತ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರ ವೆಸಗಿದ್ದಾನೆ. ಆತನ ಕೃತ್ಯಕ್ಕೆ ತಂದೆ-ತಾಯಿ ಮತ್ತು ಸಹೋದರಿ ಸಹಕರಿಸಿದ್ದಾರೆ ಎಂದು ಬಾಲಕಿಯ ತಾಯಿ ಗಂಭೀರ ವಾಗಿ ಆರೋಪಿಸಿದರು. ನಮಗೆ ನ್ಯಾಯ ಕೊಡಿಸಿ ಎಂದು ಅಪ್ರಾಪ್ತ ಬಾಲಕಿಯ ತಾಯಿ ಮತ್ತು ಸಹೋದರಿ ಕೆಲದಿನಗಳ ಹಿಂದೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಕುಳಿತು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಅಪ್ರಾಪ್ತ ಬಾಲಕಿಯ ತಾಯಿ ನೀಡಿದ ದೂರಿನ ಅನ್ವಯ, ಗವಿಸಿದ್ದಪ್ಪ ಹಾಗೂ ಅವರ ತಂದೆ-ತಾಯಿ, ಸಹೋದರಿಯ ಮೇಲೆ ಕೊಪ್ಪಳ ಮಹಿಳಾ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.