You are currently viewing BIG BREAKING : ಕಾಂಗ್ರೆಸ್‌ ಶಾಸಕ ಕೆ.ವೈ ನಂಜೇಗೌಡ ಅವರ ಆಯ್ಕೆ ಅಸಿಂಧು : ಹೈಕೋರ್ಟ್‌ ಆದೇಶ..!

BIG BREAKING : ಕಾಂಗ್ರೆಸ್‌ ಶಾಸಕ ಕೆ.ವೈ ನಂಜೇಗೌಡ ಅವರ ಆಯ್ಕೆ ಅಸಿಂಧು : ಹೈಕೋರ್ಟ್‌ ಆದೇಶ..!

ಪ್ರಜಾವೀಕ್ಷಣೆ ಸುದ್ದಿ :

BIG BREAKING : ಕಾಂಗ್ರೆಸ್‌ ಶಾಸಕ ಕೆ.ವೈ ನಂಜೇಗೌಡ ಅವರ ಆಯ್ಕೆ ಅಸಿಂಧು : ಹೈಕೋರ್ಟ್‌ ಆದೇಶ..!

ಬೆಂಗಳೂರು : ಮಾಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಕೆ.ವೈ ನಂಜೇಗೌಡ ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ಹೈಕೋರ್ಟ್ ಇದೀಗ ಆದೇಶ ಹೊರಡಿಸಿದೆ. ಮರುಮತ ಎಣಿಕೆಯ ಬಳಿಕ ಹೊಸದಾಗಿ ಫಲಿತಾಂಶ ಘೋಷಿಸಲು ನ್ಯಾ.ಆರ್ ದೇವದಾಸ್ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ.

ಇದೆ ವೇಳೆ ಶಾಸಕರ ಪರವಾಗಿ ವಕೀಲರು 30 ದಿನಗಳ ಕಾಲ ಅವಕಾಶ ಕೋರಿ ಮನವಿ ಸಲ್ಲಿಸಿದ್ದು, ಹೈಕೋರ್ಟ್ 30 ದಿನಗಳ ಕಾಲ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿದೆ ಎನ್ನಲಾಗಿದೆ.

 

4 ವಾರಗಳಲ್ಲಿ ಹೈಕೋರ್ಟ್ ಮರು ಮತ ಎಣಿಕೆ ನಡೆಸಲು ಆದೇಶ ನೀಡಿದ್ದು, ಶಾಸಕ ಕೆ.ವೈ ನಂಜೇಗೌಡ ಆಯ್ಕೆ ಅಸಿಂಧುಗೊಳಿಸಿ ಆದೇಶ ಹೊರಡಿಸಿತು. ಜಿಲ್ಲಾ ಚುನಾವಣಾ ಅಧಿಕಾರಿ ಮತ ಎಣಿಕೆಯ ವಿಡಿಯೋ ಸಲ್ಲಿಸಿಲ್ಲ ಹಾಗಾಗಿ ಜಿಲ್ಲಾ ಚುನಾವಣಾ ಅಧಿಕಾರಿ ವಿರುದ್ಧ ಸಹ ಕ್ರಮಕ್ಕೆ ಹೈಕೋರ್ಟ್ ಸೂಚನೆ ನೀಡಿತು.

ವರದಿ : ಚಂದ್ರು ಆರ್‌ ಭಾನಾಪೂರ್‌

 

Prajavikshane

Chandru R Bhanapaur

Leave a Reply

error: Content is protected !!