BREAKING : ರಾಜಸ್ಥಾನಗೆ ಭರ್ಜರಿ 57 ರನ್‌ಗಳ ಜಯ!

You are currently viewing BREAKING : ರಾಜಸ್ಥಾನಗೆ ಭರ್ಜರಿ 57 ರನ್‌ಗಳ ಜಯ!

2023ರ IPLನ 11ನೇ ಪಂದ್ಯದಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಭರ್ಜರಿ 57 ರನ್‌ಗಳಿಂದ ಜಯ ಕಂಡಿದೆ. ಟಾಸ್ ಸೋತು ಬ್ಯಾಟ್‌ ಮಾಡಿದ ರಾಜಸ್ಥಾನ ರಾಯಲ್ಸ್ 199 ರನ್ ಬಾರಿಸಿದೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ಗೆ 200ರನ್ ಬೃಹತ್‌ ಗುರಿ ನೀಡಿತ್ತು, ಈ ಗುರಿ ಬೆನ್ನತ್ತಿದ ಡೆಲ್ಲಿ 20 ಓವರ್‌ನಲ್ಲಿ 9 ವಿಕೆಟ್‌ ನಷ್ಟಕ್ಕೆ 142 ರನ್‌ ಗಳಿಸಿಲಷ್ಟೇ ಶಕ್ತವಾಯಿತು. ಡೆಲ್ಲಿ ಪರ ನಾಯಕ್ ವಾರ್ನರ್ 65, ಲಲೀತ್‌ ಯಾದವ್‌ 38 ರನ್‌ ಗಳಿಸಿದರು. ರಾಯಲ್ಸ್ ಪರ ಬೌಲ್ಟ್ & ಚಹೆಲ್‌ ತಲಾ 3 ವಿಕೆಟ್‌, ಅಶ್ವೀನ್ 2, ಸಂದೀಪ್‌ 1 ವಿಕೆಟ್‌ ಪಡೆದರು. ಮೊದಲ ಇನ್ನಿಂಗ್ಸ್‌ನಲ್ಲಿ ರಾಯಲ್ಸ್ ಬ್ಯಾಟ್‌ ಮಾಡಿದ ಬಟ್ಲರ್ 79, ಜೈಸ್ವಾಲ್ 60, ಹೆಟ್ಮೆಯರ್ 39 ರನ್‌ ಸಿಡಿಸಿದರು. ಡೆಲ್ಲಿ ಪರ ಉತ್ತಮ ಬೌಲಿಂಗ್ ಮಾಡಿದ ಮುಖೇಶ್ 2, ಯಾದವ್ ಪೋವೆಲ್‌ ತಲಾ 1 ವಿಕೆಟ್‌ ಪಡೆದರು.

ಈ ಪಂದ್ಯದಲ್ಲಿ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಮಿಂಚಿನ ಕಿಪಿಂಗ್‌ನಿಂದ ಬೌಲ್ಟ್ ಅವರ 3ನೇ ಎಸೆತವು ಪೃಥ್ವಿ ಶಾ ಎದರಿಸಿದ್ದು, ಡೈವ್ ಹೊಡೆದ ಸಂಜು ಸ್ಯಾಮ್ಸನ್ ಒಂದೇ ಕೈಯಲ್ಲಿ ಚೆಂಡನ್ನು ಹಿಡಿದರು. ಈ ಅತ್ಯದ್ಭುತ ಡೈವಿಂಗ್ ಕ್ಯಾಚ್ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Leave a Reply

error: Content is protected !!