BREAKING NEWS : ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಟಿಪ್ಪರ್‌ ನಡುವೆ ಬೀಕರ ಅಪಘಾತ : ಕುಕನೂರಿನ ಬಸ್ ಕಂಡಕ್ಟರ್ ಸಾವು..!

You are currently viewing BREAKING NEWS : ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಟಿಪ್ಪರ್‌ ನಡುವೆ ಬೀಕರ ಅಪಘಾತ : ಕುಕನೂರಿನ ಬಸ್ ಕಂಡಕ್ಟರ್ ಸಾವು..!

BREAKING NEWS : ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಟಿಪ್ಪರ್‌ ನಡುವೆ ಬೀಕರ ಅಪಘಾತ : ಕುಕನೂರಿನ ಬಸ್ ಕಂಡಕ್ಟರ್ ಸಾವು..!

ಪ್ರಜಾ ವೀಕ್ಷಣೆ ಡಿಜಿಟಲ್‌ ಡೆಸ್ಕ್‌ : ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿ ತಾಲೂಕಿನ ಚಿಲಕನಹಟ್ಟಿ ಗ್ರಾಮದ ಬಳಿ ನಿನ್ನೆ ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಟಿಪ್ಪರ್‌ ನಡುವೆ ಡಿಕ್ಕಿಯಾದ ಘಟನೆ ನಡೆದಿದೆ. ಈ ಪರಿಣಾಮ ಬಸ್‌ ನಿರ್ವಾಹಕ ಮೃತನಾಗಿದ್ದು, ಬಸ್‌ ಚಾಲಕನಿಗೆ ಗಂಭೀರ ಗಾಯವಾಗಿದೆ.

ನಿನ್ನೆ ರಾತ್ರಿ 10 ಗಂಟೆಗೆ ಸುಮಾರಿಗೆ ಈ ಘಟನೆ ನಡೆದಿದ್ದು, ತಾಲೂಕಿನ ಕುಕನೂರು ಡಿಪೋದ ಬಸ್‌ KA 37 ಎಫ 934 ಬಸ್ ನಂಬರ್‌ನ ಆಗಿದ್ದು, ಇದೇ ಡಿಪೋದ ನೌಕರ ಮೃತ ಉಮೇಶ್ ಹಾದಿಮನಿ (39) ತಾಲೂಕಿನ ಬಟಪನಹಳ್ಳಿ ಯವರು ಎಂದು ಗುರುತಿಸಲಾಗಿದೆ. ಬಸ್‌ ಚಾಲಕನ ಕಾಲುಗಳಿಗೆ ಗಂಭಿರ ಗಾಯವಾಗಿದ್ದು… ಹೆಚ್ಚಿನ ಚಿಕಿತ್ಸೆಗ ವಿಜಯನಗರ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಪ್ರಕರಣವೂ ಮರಿಯಮ್ಮನಹಳ್ಳಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ ಎಂದು ತಿಳಿದು ಬಂದಿದೆ.

Leave a Reply

error: Content is protected !!