Post Views: 375
LOCAL NEWS: “ಕೊಪ್ಪಳದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ”
ಕೊಪ್ಪಳ : ಕೊಪ್ಪಳ ನಗರದಲ್ಲಿ ಬೀದಿನಾಯಿಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ

ಕೊಪ್ಪಳ : ಕೊಪ್ಪಳ ನಗರಸಭೆಯಿಂದ ಬೀದಿನಾಯಿಗಳ ನಿಯಂತ್ರಣಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.
ಕೊಪ್ಪಳ ನಗರದಲ್ಲಿ ನಗರದಲ್ಲಿರುವ ಬೀದಿನಾಯಿಗಳ ನಿಯಂತ್ರಣಕ್ಕಾಗಿ ಎ.ಆರ್.ವಿ & ಎ.ಬಿ.ಸಿ ಸಂತಾನ ನಿಯಂತ್ರಣ ನಗರಸಭೆಯಿಂದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಅದರಂತೆ ಚಿಕಿತ್ಸೆಯನ್ನು ನೀಡಿದ ನಂತರ ಬೀದಿನಾಯಿಗಳನ್ನು ತಾತ್ಕಾಲಿಕವಾಗಿ ನಗರಸಭೆಯ ಎಸ್.ಡಬ್ಲೂö್ಯ.ಎಂ ಸೈಟ್ (SWM Site)ನಲ್ಲಿ ಬಿಡಲಾಗುತ್ತಿದ್ದು, ಇದರ ಹೊರತಾಗಿ ಅಕ್ಕ-ಪಕ್ಕದ ಗ್ರಾಮಗಳು ಅಥವಾ ಸುತ್ತ ಮುತ್ತಲಿನ ಯಾವುದೇ ಪ್ರದೇಶಗಳಲ್ಲಿ ಬಿಡಲಾಗುತ್ತಿಲ್ಲ ಎಂಬ ಮಾಹಿತಿಯನ್ನು ಈ ಪ್ರಕಟಣೆ ಮೂಲಕ ಸಾರ್ವಜನಿಕರಿಗೆ ತಿಳಿಸಲಾಗಿದೆ ಎಂದು ಕೊಪ್ಪಳ ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.