Post Views: 1,057
ಪ್ರಜಾ ವೀಕ್ಷಣೆ ವಿಶೇಷ ವರದಿ :
BIG NEWS : ಅವಳಿ ತಾಲೂಕಿನಲ್ಲಿ ಶ್ರೀಗಂಧದ ಮರಗಳಿಗೆ ರಕ್ಷಣೆ ಇಲ್ಲ: ಹೊರ ರಾಜ್ಯಗಳಿಗೆ ಕಳ್ಳ ಸಾಗಣೆ..!! : ಕಣ್ಣುಮುಚ್ಚಿ ಕುಳಿತ ಅರಣ್ಯ ಅಧಿಕಾರಿಗಳು..?

ಪ್ರಜಾ ವೀಕ್ಷಣೆ ಡಿಜಿಟಲ್ ಡೆಸ್ಕ್ : ಕರ್ನಾಟಕ ರಾಜ್ಯವನ್ನು “ಗಂಧದ ನಾಡು ಚೆಂದದ ಬೀಡು” ಎಂದೆಲ್ಲಾ ಕವಿಗಳು ವರ್ಣಿಸಿದ್ದಾರೆ. ಆದರೆ, ಇಂತಹ ಈ ಗಂಧದ ಬೀಡಿನಲ್ಲಿ ಶ್ರೀಗಂಧದ ಮರಗಳಿಗೆ ರಕ್ಷಣೆ ಇಲ್ಲದಾಗಿದ್ದು, ಇದು ಅಕ್ಷರಶಃ ಸತ್ಯವಾದ ಮಾತು ಎಂದು ಹೇಳಬಹುದು.
ರಾಜ್ಯದ ಅರಣ್ಯಗಳಲ್ಲಿ ಶ್ರೀಗಂಧದ ಮರಗಳ ಕಳ್ಳತನ ಅವ್ಯಾಹತವಾಗಿ ನಡೆಯುತ್ತಿರುವ ಘಟನೆಗಳಾಗಿದ್ದರೇ, ಇನ್ನೊಂದು ಕಡೆ ಉತ್ತರ ಕರ್ನಾಟಕ ಭಾಗದಲ್ಲಿ ಅಥಾವ ಕಲ್ಯಾಣ ಕರ್ನಾಟಕ ಪ್ರದೇಶಗಳಲ್ಲಿ ಶ್ರೀಗಂಧದ ಮರ ಬೆರಳೆಣಿಕೆಯಷ್ಟು ಇದ್ದರೂ ಇವುಗಳ ರಕ್ಷಣೆ ಆಗುತ್ತಿಲ್ಲ ಎಂಬುವುದು ವಿಪರ್ಯಾಸವೇ ಸರಿ.

ಇದಕ್ಕೆ ತಾಜಾ ಉದಾಹರಣೆ ಎನ್ನುವುದಾರೇ, ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕಲ್ಲೂರು ಗ್ರಾಮದ ದಂಡೆಯಲ್ಲಿ ಸರಿಸುಮಾರು 200 ರಿಂದ 400 ಶ್ರೀಗಂಧದ ಮರಗಳಿವೆ ಎಂಬ ಮಾಹಿತಿ ಇದೆ. ಈ ಸ್ಥಳದಲ್ಲೇ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡುವ ಖದೀಮರು ನೆರೆ ರಾಜ್ಯಗಳಾದ ಆಂಧ್ರ, ಕೇರಳ, ತಮಿಳುನಾಡು ಸೇರಿದಂತೆ ಇತರ ರಾಜ್ಯಗಳಿಗೆ ಕಳ್ಳ ಸಾಗಣಿಕೆ ಮಾಡುತ್ತಾರೆ ಎಂದು ಮಾಹಿತಿಯೊಂದು ಲಭ್ಯವಾಗಿದೆ.

ಹೌದು, ಕಲ್ಲೂರು ಗ್ರಾಮದ ಹಳ್ಳದ ದಂಡೆಯಲ್ಲಿರುವ ಕೃಷಿಕರು ಹೊಲದ ಕೆಲಸ ಮಾಡುತ್ತಿರುವಾಗ ಶ್ರೀಗಂಧದ ಮರಗಳನ್ನು ಕಡಿದಿರುವುದು ಗಮನಕ್ಕೆ ಬಂದ ತತಕ್ಷಣ ಸ್ಥಳೀಯ ನಮ್ಮ “ಪ್ರಜಾ ವೀಕ್ಷಣೆ ಡಿಜಿಟಲ್ ಮಾಧ್ಯಮ”ದ ಪ್ರತಿನಿಧಿಗೆ ಮಾಹಿತಿ ನೀಡಿದ್ದಾರೆ. ಬಳಿಕ ನಮ್ಮ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿತ್ತು.

ಬಳಿಕ ಬಂದ ಅರಣ್ಯ ಅಧಿಕಾರಿಗಳು ಈ ಭಾಗದಲ್ಲಿ ಸಂಪೂರ್ಣವಾಗಿ ಪರಿಶೀಲಿಸಿ ಮಾಹಿತಿ ಪಡೆದರು. ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅರಣ್ಯ ಅಧಿಕಾರಿ ಸಂತೋಷ, ‘ಇಲ್ಲಿ ಬೆಳೆದಿರುವುದು ಶುದ್ಧ ಶ್ರೀಗಂಧ ಗಡಗಳಾಗಿದ್ದು, ಸುಮಾರು 4 ರಿಂದ 5 ಗಿಡಗಳನ್ನು ಕಳ್ಳರು ಕಡಿದಿದ್ದಾರೆ. ಆದರೆ, ಇನ್ನು ಶ್ರೀಗಂಧ ಸಸಿ ಆಗಿದ್ದು, ಅದರ ಖಾಂಡಗಳು ಇನ್ನು ಬೆಳೆಯುವ ಹಂತದಲ್ಲಿದೆ. ಒಟ್ಟು 5 ಶ್ರೀಗಂಧದ ಗಿಡಗಳನ್ನು ಕಟಾವ್ ಮಾಡಿದ್ದು, 35 ಸೇಂಟಿ ಮೀಟರ್‌ನ 1 ಮೀಟರ್ ಕಾಂಡ ಕಡೆದಿದ್ದಾರೆ. ಈ ಕಾಂಡದ ಸುತ್ತಳತೆ 41 ಸೇ.ಮೀ. 34, 45 ಕ್ರಮವಾಗಿ 1 ಮೀಟರ್ ಉದ್ದ ಗಿಡದ ಕಾಂಡ ಇದಾಗಿತ್ತು, ಇದರ ಒಟ್ಟು ಮೌಲ್ಯವು ಅಂದಾಜು 15 ರಿಂದ 20 ಸಾವಿರ ರೂಪಾಯಿಗಳಷ್ಟು, ಅವುಗಳನ್ನು ಪರೀಕ್ಷಿಸಿ ಇಲ್ಲೇಯೇ ಬೀಟ್ಟು ಪರಾರಿಯಾಗಿದ್ದಾರೆ ಎಂಬುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದರು.
ಕಳದೆ ಮೂರು ವರ್ಷಗಳ ಹಿಂದೆ ಇದೆ ಕಲ್ಲೂರು ಭಾಗದಲ್ಲಿ ಶ್ರೀಗಂಧದ ಮರಗಳನ್ನು ಕಡಿದು ಕಳ್ಳ ಸಾಗಾಣಿಕೆ ಮಾಡುವಾಗ ಖದೀಮರು ಸಿಕ್ಕಿಬಿದ್ದರು ಎಂಬ ಪ್ರಕರಣ ದಾಖಲಾಗಿದೆ. ಇದೀಗ ಮತ್ತೆ ಇದು ಮರುಕಳಿಸಿದ್ದು, ಈಭಾಗದಲ್ಲಿ ಅರಣ್ಯ ಅಧಿಕಾರಿಗಳು ಹಾಗೂ ಪೊಲೀಸರು ಮಪ್ತಿಯಲ್ಲಿ ಗಸ್ತು ತಿರುಗುವ ಅನಿರ್ವಾಯತೆ ಇದೆ.
ಒಂದು ಕಾಲದಲ್ಲಿ ಕರ್ನಾಟಕ ರಾಜ್ಯ ಶ್ರೀಗಂಧದ ಉತ್ಪಾದನೆಯಲ್ಲಿ ಉನ್ನತ ಸ್ಥಾನದಲ್ಲಿತ್ತು. ಆದರೆ, ಕಳ್ಳರ ಕಾಟ ಶ್ರೀಗಂಧದ ನಾಡಿಗೆ ಬಹುದೊಡ್ಡ ಕಂಠಕವಾಗುತ್ತಿವೆ. ಅರಣ್ಯ ಇಲಾಖೆಯ ಅಧಿಕಾರಿಗಳು ಈಗಲಾದರೂ ಎತ್ತೆಚ್ಚುಕೊಂಡು ಶ್ರೀಗಂಧ ಚೋರರ ಹೆಡೆಮುರಿ ಕಟ್ಟಬೇಕು ಎಂದು ಇಲ್ಲಿನ ಜನರ ಅಭಿಪ್ರಾಯವಾಗಿದೆ.