You are currently viewing BIG NEWS : ಐಸಿಸಿ ಏಕದಿನ ಮಹಿಳೆಯರ ವಿಶ್ವಕಪ್ 2025 : ವಿಶ್ವ ಚಾಂಪಿಯನ್‌ ಆದ ಭಾರತೀಯ ವನಿತೆಯರು..!!

BIG NEWS : ಐಸಿಸಿ ಏಕದಿನ ಮಹಿಳೆಯರ ವಿಶ್ವಕಪ್ 2025 : ವಿಶ್ವ ಚಾಂಪಿಯನ್‌ ಆದ ಭಾರತೀಯ ವನಿತೆಯರು..!!

ಪ್ರಜಾ ವೀಕ್ಷಣೆ ಸುದ್ದಿ : 

BIG NEWS : ಐಸಿಸಿ ಏಕದಿನ ಮಹಿಳೆಯರ ವಿಶ್ವಕಪ್ 2025 : ವಿಶ್ವ ಚಾಂಪಿಯನ್‌ ಆದ ಭಾರತೀಯ ವನಿತೆಯರು..!!

ಪ್ರಜಾ ವೀಕ್ಷಣೆ ಡಿಜಿಟಲ್‌ ಡೆಸ್ಕ್‌ : ದಶಕಗಳ ಬಳಿಕ ಭಾರತೀಯ ವನಿತೆಯರ ಪಡೆ ಕೊನೆಗೂ ಇತಿಹಾಸ ನಿರ್ಮಿಸಿದೆ. ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಏಕದಿನ ಮಹಿಳೆಯರ ವಿಶ್ವಕಪ್ 2025ರ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ರ ವಿಶ್ವ ಚಾಂಪಿಯನ್‌ ಆಗಿದೆ.

ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾಕ್ಕೆ ಗೆಲ್ಲಲು 50 ಓವರ್‌ನಲ್ಲಿ 7 ವಿಕೇಟ್‌ ನಷ್ಟಕ್ಕೆ 299 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿ ಬೆನ್ನಟ್ಟಿದ ಆಫ್ರಿಕಾ ತಂಡವನ್ನು ಟೀಂ ಇಂಡಿಯಾದ ಬೌಲರ್‌ಗಳು 45.2 ಓವರ್‌ಗಳಲ್ಲಿ 246 ರನ್‌ಗಳಿಗೆ ಆಲೌಟ್ ಮಾಡಿ ತಂಡಕ್ಕೆ 52 ರನ್‌ಗಳ ಗೆಲುವು ತಂದುಕೊಟ್ಟರು.

ಭಾರತ ಇದಕ್ಕೂ ಮೊದಲು 2005 ಮತ್ತು 2017ರಲ್ಲಿ ವಿಶ್ವಕಪ್ ಫೈನಲ್ ಆಡಿತ್ತು. ಆದರೆ ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ. ಇದೀಗ ಈ ಬಾರಿ ದಶಕಗಳ ಕನಸನ್ನು ನನಸು ಮಾಡಿಕೊಂಡಿರುವ ಭಾರತವೂ ಪಂದ್ಯವನ್ನು ಗೆದ್ದುಕೊಂಡಿದೆ.

Prajavikshane

Chandru R Bhanapaur

Leave a Reply

error: Content is protected !!