You are currently viewing BREAKING : ಇಂದು ಕುಕನೂರು ಸಂಪೂರ್ಣ ಬಂದ್‌..!! : ಶಾಲಾ ಕಾಲೇಜುಗಳಿಗೆ ಅಧಿಕೃತ ರಜೆ ಘೋಷಣೆ ಇಲ್ಲ!

BREAKING : ಇಂದು ಕುಕನೂರು ಸಂಪೂರ್ಣ ಬಂದ್‌..!! : ಶಾಲಾ ಕಾಲೇಜುಗಳಿಗೆ ಅಧಿಕೃತ ರಜೆ ಘೋಷಣೆ ಇಲ್ಲ!

ಪ್ರಜಾ ವೀಕ್ಷಣೆ ಸುದ್ದಿ : 

BREAKING : ಇಂದು ಕುಕನೂರು ಸಂಪೂರ್ಣ ಬಂದ್‌..!! : ಶಾಲಾ ಕಾಲೇಜುಗಳಿಗೆ ಅಧಿಕೃತ ರಜೆ ಘೋಷಣೆ ಇಲ್ಲ!

ಕುಕನೂರು :  ಪಟ್ಟಣದಲ್ಲಿ ಸೂಕ್ತ ಸರ್ಕಾರಿ ಕಟ್ಟಡಗಳು ಇಲ್ಲದೆ ತಾಲೂಕಿನ ಆಡಳಿತಾತ್ಮಕ ಹಾಗೂ ಅಭಿವೃದ್ಧಿಗೆ ಅಡೆತಡೆ ಉಂಟಾಗುತ್ತಿದೆ. ಹಾಗಾಗಿ ಈಗಾಗಲೇ ಸರ್ಕಾರ ಗುರುತಿಸಿರುವ ಸರ್ಕಾರಿ ಜಮೀನಿನಲ್ಲಿ ಸರ್ಕಾರದ ಆಡಳಿತ ಕಛೇರಿಗಳು ನಿರ್ಮಿಸಿ ತಾಲೂಕ ಕಾರ್ಯಾಲಯಗಳನ್ನು ಪ್ರಾರಂಭಿಸುವಂತೆ ಸರ್ಕಾರವನ್ನು ಒತ್ತಾಯಿಸಿ ತಾಲೂಕಿನ ವಿವಿಧ ಸಂಘಟನೆಗಳು ಇಂದು ಸ್ವಯಂ ಪ್ರೇರಿತ ಕುಕನೂರು ಪಟ್ಟಣವನ್ನು ಸಂಪೂರ್ಣ ಬಂದ್ ಮಾಡಿ ಬೆಂಬಲ ನೀಡಿದ್ದಾರೆ.

ಇಂದು ಬೆಳಗ್ಗೆ 8 ಗಂಟೆಯಿಂದ 5:00 ವರೆಗೆ ಸಂಪೂರ್ಣ ಕುಕನೂರು ಸ್ತಬ್ಧವಾಗಲಿದೆ ಎಂದು ಅಂಗಡಿ ಮುಗ್ಗಟ್ಟಗಳ ಮಾಲೀಕರು ಹಾಗೂ ವರ್ತಕರು ವಿವಿಧ ಸಂಘಟನೆಗಳು ಈ ಬಂದ್ ಗೆ ಬೆಂಬಲ ನೀಡಿದ್ದಾರೆ. ಆದರೆ, ಪಟ್ಟಣ ವ್ಯಾಪ್ತಿಯಲ್ಲಿರುವ ಶಾಲಾ ಕಾಲೇಜುಗಳಿಗೆ ಅಧಿಕೃತವಾದ ರಜೆ ಘೋಷಣೆ ಆಗಿಲ್ಲ, ಖಾಸಗಿ ಶಾಲಾ-ಕಾಲೇಜುಗಳು ಈಗಾಗಲೇ ರಜೆ ಘೋಷಣೆ ಮಾಡಿದ್ದು, ಸರ್ಕಾರಿ ಶಾಲಾ ಕಾಲೇಜುಗಳಿಗೆ ಅಧಿಕೃತವಾಗಿ ಮೇಲಾಧಿಕಾರಿಗಳಿಂದ ಯಾವುದೇ ರಜೆ ಘೋಷಣೆ ಆಗಿರುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅತ್ಯಂತ ಅಗತ್ಯ ಇರುವ ಮೆಡಿಕಲ್ ಶಾಪ್, ಆಸ್ಪತ್ರೆಗಳು, ಹಾಲಿನ ಡೈರಿಗಳು ಓಪನ್ ಆಗಲಿವೆ ಎಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ.

ಕುಕನೂರು ತಾಲೂಕು ಕೇಂದ್ರವಾಗಿ ಸರಿ ಸುಮಾರು ಎಂಟು ವರ್ಷಗಳ ಕಳೆದರೂ ಕೂಡ ಯಾವುದೇ ಒಂದು ಆಡಳಿತಾತ್ಮಕ ಸರ್ಕಾರಿ ಕಟ್ಟಡಗಳಿಲ್ಲದೆ ಅಭಿವೃದ್ಧಿ ಕೆಲಸಕ್ಕೆ ಹಾಗೂ ಜನಸಾಮಾನ್ಯರಿಗೆ ಸಾಕಷ್ಟು ಅಡೆತಡೆಗಳು ಉಂಟಾಗಿದ್ದು, ಗುರು ಪಟ್ಟಣದ ಸರ್ಕಾರಿ ಭೂಮಿ ಈಗಾಗಲೇ ಸರ್ಕಾರವು ಗುರುತಿಸಿದ್ದು, ಇದೇ ಜಮೀನಿನಲ್ಲಿ ಸರ್ಕಾರಿ ಆಡಳಿತಾತ್ಮಕ ಕಚೇರಿಗಳ ಕಟ್ಟಡಗಳು ಆರಂಭವಾಗಬೇಕು ಎಂದು ಸಂಘಟನೆಗಳ ಒತ್ತಾಯವಾಗಿದೆ.

 

Prajavikshane

Chandru R Bhanapaur

Leave a Reply

error: Content is protected !!