LOCAL BREAKING : ವಸತಿ ನಿಲಯಯೊಂದರಲ್ಲಿ ವಿದ್ಯಾರ್ಥಿನಿ ಹೆರಿಗೆ! : ಸಂಬಂಧದಲ್ಲಿ ಅಣ್ಣ ತಂಗಿ..! : ಪಾಲಕರಿಗೆ..ಶಾಕ್‌..!!

You are currently viewing LOCAL BREAKING : ವಸತಿ ನಿಲಯಯೊಂದರಲ್ಲಿ ವಿದ್ಯಾರ್ಥಿನಿ ಹೆರಿಗೆ! : ಸಂಬಂಧದಲ್ಲಿ ಅಣ್ಣ ತಂಗಿ..! : ಪಾಲಕರಿಗೆ..ಶಾಕ್‌..!!

LOCAL BREAKING : ವಸತಿ ನಿಲಯಯೊಂದರಲ್ಲಿ ವಿದ್ಯಾರ್ಥಿನಿ ಹೆರಿಗೆ : ಸಂಬಂಧದಲ್ಲಿ ಅಣ್ಣ ತಂಗಿ..! : ಪಾಲಕರಿಗೆ..ಶಾಕ್‌..!!

 

ಪ್ರಜಾವೀಕ್ಷಣೆ ಸುದ್ದಿ :-

ಕುಕನೂರು : ಕುಕನೂರು ತಾಲೂಕಿನ ಗ್ರಾಮ ಒಂದರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ವಸತಿ ನಿಲಯದಲ್ಲಿ ವಾಸ ಇದ್ದುಕೊಂಡು ಹತ್ತನೇ ತರಗತಿ ಓದುತ್ತಿದ್ದ 16 ವರ್ಷದ ವಿದ್ಯಾರ್ಥಿನಿ ಇಂದು ಬೆಳಗಿನ ಜಾವ ಸುಮಾರು 5:30 ಗಂಟೆಯ ವೇಳೆಗೆ ಹೆರಿಗೆ ಹೇಗಿದ್ದು ತಿಳಿದು ಬಂದಿದೆ.

ತತಕ್ಷಣ ಎಚ್ಚತ್ತ ವಸತಿ ನಿಲಯದ ಮೇಲ್ವಿಚಾರಕಿ ಬಾಣಂತಿ ಹಾಗೂ ಮಗುವನ್ನು ಕೊಪ್ಪಳದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.  ನವಜಾತ ಶಿಶು 1 ಕೆಜಿ 20 ಗ್ರಾಮ ತೂಕವನ್ನು ಹೊಂದಿದ್ದು, ಮಗವನ್ನು ತೀವ್ರನಿಗಾದಲ್ಲಿ ಚಿಕಿತ್ಸೆ ಕೊಡಲಾಗುತ್ತಿದ್ದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಉಳಿದಂತೆ ತಾಯಿ ಮಗು ಆರೋಗ್ಯ ಸ್ಥಿರವಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈ ವಿಷಯ ತಿಳಿದ ಇಬ್ಬರ ಪಾಲಕರು ಶಾಕ್‌ ಆಗಿದ್ದಾರೆ ಎನ್ನಲಾಗಿದೆ. ಈ ಕುರಿತು ಕುಕುನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕೃತ್ಯ ಎಸಗಿದ 21 ವರ್ಷದ ಯುವಕ ಹಾಗೂ ಬಾಲಕಿ ಯಲಬುರ್ಗಾ ತಾಲೂಕಿನವರು ಎಂದು ತಿಳಿದು ಬಂದಿದೆ. ಇವರಿಬ್ಬರು ದೂರದ ಸಂಬಂಧದಲ್ಲಿ ಅಣ್ಣತಂಗಿ ಆಗುತ್ತಾರೆ ಎನ್ನಲಾಗಿದೆ. ಈ ಯುವಕನನ್ನು ಈಗಾಗಲೇ ಕುಕನೂರು ಪೊಲೀಸರು ಬಂಧಿಸಿದ್ದು, ಮುಂದಿನ ಕ್ರಮಕ್ಕಾಗಿ ವಸತಿ ನಿಲಯದ ಮೇಲ್ವಿಚಾರಕಿ ಹಾಗೂ ಶಾಲೆಯ ಮುಖ್ಯೋಪಾದ್ಯನ ಮೇಲೆ ಪ್ರಕರಣವನ್ನು ದಾಖಲಿಸಲಾಗುವುದು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

*ನಿಲಯದ ಮೇಲ್ವಿಚಾರಕಿಕರ್ತವ್ಯ ಲೋಪದ ಆರೋಪ..!!*

ಹೌದು, ತಿಂಗಳು ಗಟ್ಟಲೇ ವಸತಿ ನಿಲಯದ್ದ ಬಾಲಕಿ ವಿದ್ಯಾರ್ಥಿನಿಯ ಗರ್ಭಧಾರಣೆ ತಿಂಗಳಿನಷ್ಟು ಕಾಲ ನಿಲಯದ ಸಿಬ್ಬಂದಿ, ಶಿಕ್ಷಕರು ಹಾಗೂ ಸ್ಥಳೀಯ ಅಧಿಕಾರಿಗಳಿಗೆ ತಿಳಿಯದೇ ಉಳಿದಿರುವುದು ಗಂಭೀರ ನಿರ್ಲಕ್ಷ್ಯ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಲಯದಲ್ಲಿ ಆರೋಗ್ಯ ತಪಾಸಣೆ, ಕೌನ್ಸೆಲಿಂಗ್ ಮತ್ತು ನಿಗಾ ಕ್ರಮಗಳು ಪರಿಣಾಮಕಾರಿಯೇ ಎಂಬ ಪ್ರಶ್ನೆಗಳು ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿವೆ.

Leave a Reply

error: Content is protected !!