You are currently viewing LOCAL NEWS : ಬೈಕ್‌ ಸವಾರರಿಗೆ ಗುಲಾಬಿ ಹೂವು ನೀಡಿ ಹೆಲೈಟ್ ಜಾಗೃತಿ ಮೂಡಿಸುತ್ತಿರುವ ಬೇವೂರು ಪಿಎಸ್‌ಐ ಎಸ್‌.ಪಿ ನಾಯ್ಕ್‌!

LOCAL NEWS : ಬೈಕ್‌ ಸವಾರರಿಗೆ ಗುಲಾಬಿ ಹೂವು ನೀಡಿ ಹೆಲೈಟ್ ಜಾಗೃತಿ ಮೂಡಿಸುತ್ತಿರುವ ಬೇವೂರು ಪಿಎಸ್‌ಐ ಎಸ್‌.ಪಿ ನಾಯ್ಕ್‌!

LOCAL NEWS : ಬೈಕ್‌ ಸವಾರರಿಗೆ ಗುಲಾಬಿ ಹೂವು ನೀಡಿ ಹೆಲೈಟ್ ಜಾಗೃತಿ ಮೂಡಿಸುತ್ತಿರುವ ಬೇವೂರು ಪಿಎಸ್‌ಐ ಎಸ್‌.ಪಿ ನಾಯ್ಕ್‌!


ಪ್ರಜಾ ವೀಕ್ಷಣೆ ಸುದ್ದಿ : 

ಯಲಬುರ್ಗಾ : ತಾಲೂಕಿನ ಬೇವೂರು ಗ್ರಾಮದ ಪೊಲೀಸ್ ಠಾಣೆ ವತಿಯಿಂದ ಹೆಲೈಟ್ ಧರಿಸದೆ ದ್ವಿಚಕ್ರ ವಾಹನ ಓಡಿಸುವವರಿಗೆ ಠಾಣೆಯ ಪಿಎಸ್‌ಐ ಎಸ್.ಪಿ.ನಾಯಕ್‌ ಹಾಗೂ ಸಿಬ್ಬಂದಿಯವರು ಗುಲಾಬಿ ಹೂವು ನೀಡಿ ವಿಶೇಷವಾಗಿ ಹೆಲೈಟ್ ಜಾಗೃತಿ ಅಭಿಯಾನ ಮಾಡಿದರು.

ಇತ್ತಿಚೆಗೆ ದ್ವಿಚಕ್ರ ವಾಹನ ಸವಾರರು  ಹೆಲ್ಮೆಟ್ ಧರಿಸದೇ ಶೋಕಿಗಾಗಿ ಬೈಕ್‌ ಸವಾರಿ ಮಾಡುತ್ತಾರೆ ಇದರಿಂದ ಸಾವುನೋವುಗಳ ಹೆಚ್ಚಾಗಿದ್ದು, ಇದನ್ನು ಕ್ರಮೇಣವಾಗಿ ತಡೆಯಲು ಪೊಲೀಸ್‌ ಇಲಾಖೆಯಿಂದ ವಿಶೇಷವಾಗಿ “ಹೆಲ್ಮೆಟ್ ಜಾಗೃತಿ ಅಭಿಯಾನ” ಹಮ್ಮಿಕೊಂಡಿದೆ. ಹೆಲ್ಮೆಟ್ ಧರಿಸದೇ ಸಂಚಾರ ಮಾಡುವ ಬೈಕ್‌ ಸವಾರರಿಗೆ ಮೊದಲು ಪ್ರೀತಿಯಿಂದ ಗುಲಾಬಿ ಹೂ ನೀಡಿ ಜಾಗೃತಿ ಮೂಡಿಸಲು ಮುಂದಾಗಿದೆ. ಈ ಅಭಿಯಾನದ ಸಂದರ್ಭದಲ್ಲಿಅಲ್ಲಲ್ಲಿಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನವನ್ನು ಚಲಾಯಿಸುತ್ತಿದ್ದ ಸವಾರರಿಗೆ ಗುಲಾಬಿ ಹೂವು ನೀಡಿ, ಹೆಲ್ಮೆಟ್ ಧರಿಸುವುದರ ಅನಿವಾರ್ಯತೆ ವಿವರಿಸಿದರು.

ಜೀವ ರಕ್ಷಣೆ ಹಾಗೂ ಸಂಚಾರ ನಿಯಮ ಪಾಲನೆ 

ಹೆಲ್ಮೆಟ್ ಧರಿಸುವುದರಿಂದ ಅಪಘಾತವಾದಾಗ ನಿಮ್ಮ ಜೀವವನ್ನು ಉಳಿಸಬಹುದು. ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ನಿಯಮಗಳನ್ನು ಉಲ್ಲಂಘಿಸಿದರೆ ದಂಡ ವಿಧಿಸಲಾಗುತ್ತದೆ. ಅನೇಕ ಕಡೆಗಳಲ್ಲಿ ಹೆಲ್ಮೆಟ್ ಧರಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಮತ್ತು ನಿಯಮ ಉಲ್ಲಂಘಿಸಿದರೆ ಮುಂದಿನ ದಿನಗಳಲ್ಲಿ ದಂಡ ವಿಧಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ಈ ಸಂದರ್ಭ ಎಎಸ್‌ಐ ಶರಣಪ್ಪ, ಪೇದೆಗಳಾದ ಶಂಕ್ರಯ್ಯ, ಗವಿಸಿದ್ದಯ್ಯ, ಬಸವರಾಜ ಸೇರಿದಂತೆ ಇತರರು ಇದ್ದರು.

“ಪ್ರತಿಯೊಬ್ಬ ಬೈಕ್ ಸವಾರರು ರಸ್ತೆ ನಿಯಮ ಪಾಲಿಸುವ ಜತೆಗೆ ತಮ್ಮ ಜೀವ ರಕ್ಷಕವಾದ ಹೆಲೈಟ್‌ನ್ನು ಕಡ್ಡಾಯವಾಗಿ ಉಪಯೋಗಿಸಬೇಕು. ನಿಮ್ಮನ್ನು ನಂಬಿದ ಕುಟುಂಬದವರ ಸಲುವಾಗಿಯಾದರೂ ಹೆಲೈಟ್ ಧರಿಸಬೇಕು. ಎಲ್ಲರೂ ಸಂಚಾರ ನಿಯಮ ಅನುಸರಿಸುವ ಜತೆಗೆ ಕಾನೂನು ನಿಯಮ ಪಾಲಿಸಬೇಕು. ‘ಸದಾ ಸಂಚಾರ ನಿಯಮ ಪಾಲಿಸಿ. ಸುರಕ್ಷಿತರಾಗಿರಿ”

ಎಸ್‌.ಪಿ ನಾಯ್ಕ್‌

ಠಾಣಾಧಿಕಾರಿ, (ಪೊಲೀಸ್ ಸಬ್‌ಇನ್‌ಸ್ಪೆಕ್ಟರ್-ಪಿಎಸ್‌ಐ)

ಪೊಲೀಸ್‌ ಠಾಣೆ, ಬೇವೂರು.

Prajavikshane

Chandru R Bhanapaur

Leave a Reply

error: Content is protected !!