BREAKING :ಕುಕನೂರು | ಭೀಕರ ರಸ್ತೆ ಅಪಘಾತ : ಎರಡು ಬೈಕ್ ಗಳ ಮದ್ಯ ಮುಖಾಮುಖಿ ಢಿಕ್ಕಿ : ಇಬ್ಬರು ಸ್ಥಳದಲ್ಲೇ ಮೃತ!
ಪ್ರಜಾವೀಕ್ಷಣೆ ಸುದ್ದಿ :
ಕುಕನೂರು : ತಾಲೂಕಿನ ಭಾನಾಪುರ ಗ್ರಾಮದ ಬಳಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ್ದು, ಈ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಭಾನಾಪುರ ಬಳಿ ಇರುವ ಕಾವೇರಿ ಪೆಟ್ರೋಲ್ ಪಂಪ್ ಎದುರುಗಡೆ ಈ ಘಟನೆ ನಡೆದಿದ್ದು, ಈ ಘಟನೆ ಪರಿಣಾಮ ಭಾನಾಪುರ ಗ್ರಾಮದ ಶ್ರೀಶೈಲ್ ಹಿರೇಮಠ (30 ವರ್ಷ), ಕೊಪ್ಪಳ ತಾಲೂಕಿನ ಹ್ಯಾಟಿ ಮುಂಡರಗಿ ಗ್ರಾಮದ ಮಾರುತಿ ಶಿವಪ್ಪನವರ (50ವರ್ಷ) ಮೃತರ ಎಂದು ಗುರುತಿಸಲಾಗಿದೆ.
ಘಟನೆ ವಿವರ:-
ಮೃತ ಮಾರುತಿ ಶಿವಪ್ಪನವರ ಎಂಬಾತ ಕೊಪ್ಪಳದ ಕಡೆಯಿಂದ ಕುಕನೂರು ಕಡೆಗೆ ಬರುತ್ತಿದ್ದ, ಅದೇ ರೀತಿ ಮೃತ ಶ್ರೀಶೈಲ್ ಎಂಬಾತ ಭಾನಾಪುರನಿಂದ ಕಾವೇರಿ ಪೆಟ್ರೋಲ್ ಬಂಕ್ ಕಡೆಗೆ ರಾಂಗ್ ರಸ್ತೆಯಲ್ಲಿ ಬಂದಿದ್ದರು ಎನ್ನಲಾಗಿದೆ. ಈ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು ಇನ್ನುಳಿದ ಹಿಂಬದಿ ಸವಾರರು ಗಂಭೀರ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.
ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾತಿಗಿದ್ದು, ಇನ್ನು ಹೆಚ್ಚಿನ ತನಿಖೆಗಾಗಿ ಪೊಲೀಸರು ಸ್ಥಳಕ್ಕೆ ಧಾವಿಸಿ , ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.