BIG NEWS : ಕೊಪ್ಪಳದಲ್ಲಿ ಲೋಕಾಯುಕ್ತ ದಾಳಿ : ಕಿಮ್ಸ್ ಆಡಳಿತ ಅಧಿಕಾರಿಗೆ ಸೇರಿದ ಒಂದು ಕೆಜಿ ಚಿನ್ನ ಪತ್ತೆ…!
ಕೊಪ್ಪಳ ವೈದ್ಯಕೀಯ ಮಹಾವಿದ್ಯಾಲಯದ ಆಡಳಿತಾಧಿಕಾರಿ ಬಿ. ಕಲ್ಲೇಶ್
ಪ್ರಜಾ ವೀಕ್ಷಣೆ ಸುದ್ದಿ :
ಕೊಪ್ಪಳ : ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕೊಪ್ಪಳದ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಮುಖ್ಯ ಆಡಳಿತ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಲ್ಲೇಶ್ ಬಿ ಗೆ ಸೇರಿದ ಕೊಪ್ಪಳ, ಭಾಗ್ಯನಗರ ಸೇರಿದಂತೆ ವಿವಿಧ ಸ್ಥಳಗಳ ಆಸ್ತಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಒಂದಲ್ಲ ಎರಡಲ್ಲ, ಹತ್ತಲ್ಲ, ನೂರಲ್ಲ, ಬರೋಬ್ಬರಿ 1,000 ಗ್ರಾಮಕ್ಕಿಂತಲೂ ಹೆಚ್ಚಿನ ಬಂಗಾರ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.
ಕೊಪ್ಪಳ ನಗರದಲ್ಲಿರುವ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮುಖ್ಯ ಆಡಳಿತ ಅಧಿಕಾರಿ ಬಿ ಕಲ್ಲೇಶ್ ಅವರಿಗೆ ಸೇರಿದ ಎನ್ನಲಾದ ಭಾಗ್ಯನಗರದಲ್ಲಿರುವ ನಿವಾಸ, ಖಾಸಗಿ ಕಚೇರಿ, ಅವರ ನೆಂಟರ ಮನೆ, ಶಾಲೆ, ವಿಜ್ಞಾನ ಕಾಲೇಜು ಮತ್ತು ಪಕ್ಕದ ಯಲಬುರ್ಗಾ ತಾಲೂಕಿನ ಚಿಕ್ಕಮನ್ನಾಪುರ ಗ್ರಾಮದ ಮನೆ ಸೇರಿದಂತೆ ಜಿಲ್ಲೆಯ ಆದ್ಯಂತ ಆರಕ್ಕು ಹೆಚ್ಚು ಸ್ಥಳಗಳಲ್ಲಿ ಒಂದೇ ಸಮಯದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.
ಶುಕ್ರವಾರ ಬೆಳಗ್ಗೆ ನಡೆಸಲಾದ ಈ ದಾಳಿಯ ನೇತೃತ್ವದವನ್ನು ಕೊಪ್ಪಳ ಲೋಕಾಯುಕ್ತ ಬಿ ಎಸ್ ಪಿ ಲೋಕೇಶ್ ನೇತೃತ್ವದಲ್ಲಿ ನಡೆಸಲಾಗಿದ್ದು, ಗದಗ, ಹಾವೇರಿ ಹಾಗೂ ರಾಯಚೂರು ಜಿಲ್ಲೆಗಳಿಂದ ಆಗಮಿಸಿದ್ದ 30ಕ್ಕೂ ಹೆಚ್ಚು ಜನರಿದ್ದ ಲೋಕಾಯುಕ್ತ ಸಿಬ್ಬಂದಿಯ ತಂಡದ ನೆರವಿನೊಂದಿಗೆ ದಾಳಿ ಮಾಡಲಾಗಿದ್ದು ಬಿ ಕಲ್ಲೇಶ್ ಅವರ ಆಸ್ತಿ, ಆದಾಯ ಮೂಲಗಳು ಹಾಗೂ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತಹ ದಾಖಲೆಗಳನ್ನು ಪರಿಶೀಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಈ ವೇಳೆಯಲ್ಲಿ ಸಾವಿರ ಗ್ರಾಂ ಅಂದರೆ 1 ಕೆಜಿ ಬಂಗಾರ, ಮೂರುವರೆ ಕೆಜಿಗೂಗು ಹೆಚ್ಚಿನ ಬೆಳ್ಳಿ, ಬ್ಯಾಂಕ್ ಖಾತೆಯಲ್ಲಿ 61 ಲಕ್ಷ ರೂಪಾಯಿ, ಮನೆಯಲ್ಲಿ 31 ಲಕ್ಷ ನಗದು, ಕೊಪ್ಪಳ ಜಿಲ್ಲೆಯಲ್ಲಿ 31 ಎಕರೆ ಭೂ ಪ್ರದೇಶ, ಟುಮಾರೋ 10 ಕೋಟಿ ಬೆಲೆ ಬಾಳುವ ಶಾಲಾ ಕಾಲೇಜು ಕಟ್ಟಡ ಇವಿಷ್ಟು ಲೋಕಾಯುಕ್ತ ದಾಳಿಯ ವೇಳೆಯಲ್ಲಿ ಪತ್ತೆಯಾದ ಕೊಪ್ಪಳ ಕಿಮ್ಸ್ ಆಡಳಿತ ಅಧಿಕಾರಿ ಕಲ್ಲೇಶ್ ಅವರ ಆಸ್ತಿಯಾಗಿದೆ.
ಈ ಹಿಂದೆ ಬಿ. ಕಲ್ಲೇಶ್ ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಕನಕ ತಂಡಗಳ ವಿಚಾರಣೆಗೆ ಒಳಗಾಗಿದ್ದು, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ವಿಶೇಷ ದುರ್ಬಲ ಬುಡಕಟ್ಟು ಗುಂಪುಗಳ ಯೋಜನೆ ಅಡಿ 21.59 ಕೋಟಿ ಅಕ್ರಮ ಹಣ ವರ್ಗಾವಣೆಯಲ್ಲಿಯೂ ಸಹ ಇವರ ಹೆಸರು ಕೇಳಿ ಬಂದಿದ್ದು, ಈ ಪೈಕಿ ಅನುದಾನದ ಗಣನೀಯ ಭಾಗ ಈಗಲೂ ಸ್ಪಷ್ಟಗೊಂಡಿರುವುದಿಲ್ಲ.
ಮಹರ್ಷಿ ವಾಲ್ಮೀಕಿ ಎಷ್ಟು ಅಭಿವೃದ್ಧಿ ನಿಗಮಕ್ಕೆ ಸೇರಿದ ಹಗರಣ ಬೈದೆಗೆ ಬಂದ ನಂತರ ಅನುದಾನಗಳ ಬಳಕೆಯ ಪ್ರಮಾಣ ಪತ್ರಗಳನ್ನು ಸಲ್ಲಿಸುವಲ್ಲಿ ವಿಫಲವಾಗಿದ್ದ ಕಲ್ಲೇಶ್ ಅವರನ್ನು 2024ರ ಜೂನ್ ತಿಂಗಳಲ್ಲಿ ಸೇವೆಯಿಂದ ಅವನತಗೊಳಿಸಲಾಗಿತ್ತು ಆದರೆ ಅಮಾನತಾದ ಮೂರೇ ತಿಂಗಳಲ್ಲಿ ಪ್ರಬಲ ಸಚಿವರ ಬೆಂಬಲದೊಂದಿಗೆ ಅಮಾನತು ಆದೇಶ ರದ್ದುಪಡಿಸಿ ಕೊಪ್ಪಳ ಜಿಲ್ಲೆಗೆ ಆಗಮಿಸಿ ಕಿಮ್ಸ್ ಆಡಳಿತ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.