LOCAL NEWS : ಕುಕನೂರು | ಗಣಿತ ವಸ್ತು ಪ್ರದರ್ಶನ ವಿದ್ಯಾರ್ಥಿಗಳಲ್ಲಿ ಕಲಿಕೆಯ ಉತ್ಸಾಹ..!

You are currently viewing LOCAL NEWS : ಕುಕನೂರು | ಗಣಿತ ವಸ್ತು ಪ್ರದರ್ಶನ ವಿದ್ಯಾರ್ಥಿಗಳಲ್ಲಿ ಕಲಿಕೆಯ ಉತ್ಸಾಹ..!

LOCAL NEWS : ಕುಕನೂರು | ಗಣಿತ ವಸ್ತು ಪ್ರದರ್ಶನ ವಿದ್ಯಾರ್ಥಿಗಳಲ್ಲಿ ಕಲಿಕೆಯ ಉತ್ಸಾಹ..!

ಪ್ರಜಾ ವೀಕ್ಷಣೆ ಡಿಜಿಟಲ್‌ ಸುದ್ದಿ : 

ಕುಕನೂರು ಫೆ.14 : ಪಟ್ಟಣದ ಎಸ್.ಎಫ್. ಎಸ್. ಶಾಲೆಯಲ್ಲಿ ಇಂದು ಗಣಿತ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು, ಇಲ್ಲಿನ ವಿದ್ಯಾರ್ಥಿಗಳು ತುಂಬಾ ಉತ್ಸಾಹಕಾರಾಗಿ ಸ್ವತಃ ತಾವೇ ತಯಾರಿಸಿದ ವಿವಿಧ ಬಗೆಯ ಗಣಿತ ಮಾದರಿಗಳನ್ನು ಅಂದರೆ, ತ್ರಿಭುಜಗಳ ವಿಧಗಳು, ಭಿನ್ನರಾಶಿಗಳು, ವೃತ್ತ ಮಾದರಿ, ವಿಸ್ತೀರ್ಣ ಮಾದರಿ, ಬಾರ್ ಗ್ರಾಫ್,ಹಾಗೂ ಸಂಖ್ಯಾ ರೇಖೆ ಹೀಗೆ ವಿವಿಧ ರೀತಿಯ ಮಾದರಿಗಳನ್ನು ಪ್ರದರ್ಶಿಸಿದರು.

ಗಣಿತ ವಸ್ತು ಪ್ರದರ್ಶನದ ಉದ್ಘಾಟನೆ ಮಾಡಿದಂತಹ ಶಾಲೆಯ ಆಡಳಿತ ಅಧಿಕಾರಿಯಾದ ಅರೋಕಿಯ ಸಾಮಿ ಮಾತನಾಡಿ, ‘ಈ ಕಾರ್ಯಕ್ರಮದಿಂದ ವಿದ್ಯಾರ್ಥಿಗಳ ಸಾಮರ್ಥ್ಯ ನವೀನತೆ ವೈಚಾರಿಕ ಹಾಗೂ ಕೌಶಲ್ಯಗಳನ್ನು ಬೆಳೆಸುವ ಉತ್ತಮ ವೇದಿಕೆಯಾಗಿದೆ. ವಿದ್ಯಾರ್ಥಿಗಳಿಗೆ ಗಣಿತದ ವಿಷಯದಲ್ಲಿ ಹೆಚ್ಚಿನ ಜ್ಞಾನ ಸಂಪಾದಿಸಲು ಈ ವಸ್ತು ಪ್ರದರ್ಶನ ತುಂಬಾ ಸಹಾಯಕಾರಿಯಾಗಿದೆ ಎಂದು ಹೇಳಿದರು.

ಗಣಿತ ವಸ್ತು ಪ್ರದರ್ಶನ ದಿಂದ ಮಕ್ಕಳ ಬುದ್ಧಿವಂತಿಕೆಯಲ್ಲಿ ಸೃಜನಶೀಲತೆ, ತಾರ್ಕಿಕತೆ, ಅನಾವರಣಗೊಳ್ಳುತ್ತದೆ. ರೈತ ತನ್ನ ಹೊಲವನ್ನು ಅಳೆಯಲು ಗಣಿತ ಉಪಯೋಗಿಸುತ್ತಾನೆ ಹಾಗೂ ವಾಸ್ತುಶಿಲ್ಪ ಕಲೆ ರಚನೆಗೆ,. ಅಂಗಡಿಯವ ಚಿಲ್ಲರೆ ವ್ಯಾಪಾರಕ್ಕೆ, ಕ್ರೀಡೆಯಲ್ಲಿ, ಪ್ರಯಾಣದಲ್ಲಿ, ದೈನಂದಿನ ಚಟುವಟಿಕೆಯಲ್ಲಿ ಗಣಿತ ಬೇಕೇ ಬೇಕು; ಬಹಳಷ್ಟು ಮಕ್ಕಳು ಗಣಿತವನ್ನು ಅಂಕಿಗಳೆಂದು ತಿಳಿದುಕೊಳ್ಳುತ್ತಾರೆ ಆದರೆ ಇದು ತಾಳ್ಮೆ ಬುದ್ಧಿವಂತಿಕೆಯಾಗಿದೆ. ‘ಗಣಿತ ಎಂಬುದು ಬರಿ ಪುಸ್ತಕಕ್ಕೆ ಸೀಮಿತವಲ್ಲ ಇದು ದೈನಂದಿನ ಚಲನೆಯಾಗಿದೆ’. ಹಾಗೂ “ದೇವರು ಕೂಡ ಒಬ್ಬ ಗಣಿತ ತಜ್ಞನು ಆಗಿದ್ದಾನೆ ಎಂದರು.

ಗಣಿತ ಪ್ರದರ್ಶನದ ಆಯೋಜಿಕಿಯಾದ ಶಿಕ್ಷಕಿ ಶರಣ್ಯ ಮಾತನಾಡಿ ಗಣಿತ ವಸ್ತು ಪ್ರದರ್ಶನದಿಂದ ಗಣಿತದ ವಿಷಯದಲ್ಲಿ ಆಸಕ್ತಿ ಇರದ ಮಕ್ಕಳು ಸಹ ಈ ವಸ್ತು ಪ್ರದರ್ಶನದಿಂದ ಮುಂದೆ ಬರಬೇಕು ಎಂಬುದೇ ಈ ಪ್ರದರ್ಶನದ ಉದ್ದೇಶ. ಹಾಗೂ ಮುಂದಿನ ದಿನಗಳಲ್ಲಿ ಗಣಿತದ ವಿಷಯವನ್ನು ಉತ್ತಮವಾಗಿ ಕಲಿಯಲು ಮಕ್ಕಳನ್ನು ಪ್ರೇರೇಪಿಸುವುದಾಗಿದೆ ಎಂದರು.

ಈ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಶಾಲೆಯ ಸಿಬ್ಬಂದಿ ವರ್ಗ ಮತ್ತು ಮಕ್ಕಳ ಪಾಲಕರು, ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು.

ವರದಿ : ಅಲ್ಲಾಬೇಗಂ ಅಮರಾವತಿ, ಕುಕನೂರು.

Leave a Reply

error: Content is protected !!