ಮುದಗಲ್ಲ ವರದಿ..
ಮುದಗಲ್ ಸಿದ್ಧಾರ್ಥ ನಗರದ ಹುಲಿಗೆಮ್ಮ ದೇವಿ ಜಾತ್ರೆ ನಿಮಿತ್ತ ಮೆರವಣಿಗೆ ಜರುಗಿತು.
ಮುದಗಲ್ಲ ಪಟ್ಟಣದ ಸಿದ್ಧಾರ್ಥ ನಗರದ ಆರಾಧ್ಯ ದೈವ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವವು ಶುಕ್ರವಾರ ಶ್ರದ್ಧಾ ಭಕ್ತಿಯಿಂದ ಜರುಗಿತು. ದೇವಿ ಮೂರ್ತಿಗೆ ವಿವಿಧ ಹೂಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ನವರಾತ್ರಿ ಉತ್ಸವದ ನಿಮಿತ್ತವಾಗಿ ದೇವಿಗೆ ಮಹಿಳೆಯರಿಂದ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ದೇವಿಯ ಕಲಶ ಮೆರವಣಿಗೆ ನಡೆಯಿತು. ಮಹಿಳೆಯರು ಮೆರವಣಿಗೆಯಲ್ಲಿ ಪೂರ್ಣಕುಂಭದೊಂದಿಗೆ ಮೆರುಗು ತಂದರು. ಡೊಳ್ಳುಕುಣಿತ, ಭಜನಾ ನೃತ್ಯ ಗಮನ ಸೆಳೆಯಿತು.

ಈ ಸಂಬಂಧದಲ್ಲಿ :-ಗುಂಡಪ್ಪ ಗಂಗವಾತಿ,ಸುರೇಶ, ರವಿ, ಹನುಮಂತ ಭಜಂತ್ರಿ, ರಾಜು, ರಾಮು, ರಮೇಶ ಸಂತೋಷ,ಸಮಾಜದ ಮುಖಂಡರು ಹಾಗೂ ಯುವಕರು ಇದ್ದರು
ವರದಿ :-ಮಂಜುನಾಥ ಕುಂಬಾರ
