You are currently viewing ಮುದಗಲ್ಲ :- ಇಂದು ಸುಕ್ಷೇತ್ರ ಹಾಲಬಾವಿ ವೀರಭದ್ರೇಶ್ವರ ದೇವಸ್ಥಾನ ದ 31ನೇ ವಷ೯ದ ಜಾತ್ರಾ ಮಹೋತ್ಸವ..

ಮುದಗಲ್ಲ :- ಇಂದು ಸುಕ್ಷೇತ್ರ ಹಾಲಬಾವಿ ವೀರಭದ್ರೇಶ್ವರ ದೇವಸ್ಥಾನ ದ 31ನೇ ವಷ೯ದ ಜಾತ್ರಾ ಮಹೋತ್ಸವ..

ಮುದಗಲ್ಲ ವರದಿ..

ಇಂದು ಸುಕ್ಷೇತ್ರ ಹಾಲಬಾವಿ ವೀರಭದ್ರೇಶ್ವರ ದೇವಸ್ಥಾನ ದ 31ನೇ ವಷ೯ದ ಜಾತ್ರಾ ಮಹೋತ್ಸವ..

ಮುದಗಲ್ಲ :- ಐತಿಹಾಸಿಕ ಹಾಲಭಾವಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವವು ಅತ್ಯಂತ ಸಂಭ್ರಮದಿಂದ  ಇಂದು ದಿನಾಂಕ :- 25-11-2026 ಬುದವಾರ ರಂದು ನಡೆಯುತ್ತದೆ.

ಪ್ರತಿ ವರ್ಷದ ಪದ್ದತಿಯಂತೆ ಈ ವರ್ಷವು ಕೂಡ ಶ್ರೀ. ಶ್ರೀ ದಾಸೋಹ ರತ್ನ ವೀರಭದ್ರ ಮಹಾಸ್ವಾಮಿಗಳು ಸುಕ್ಷೇತ್ರ ಅಂಕಲಿಮಠ ಇವರ ಮಹಾದಪ್ಪಣೆ ಮೇರಿಗೆ
ಶ್ರೀ ಸಿದ್ದಯ್ಯ ಸ್ವಾಮಿಗಳು ಸಾಲಿಮಠ ಹಾಲಭಾವಿ ಶ್ರೀ ವೀರಭದ್ರೇಶ್ವರ ದೇವಸ್ಥಾನ, ಮುದಗಲ್ಲ ಇವರ ನೇತೃತ್ವದಲ್ಲಿ ಮತ್ತು ಮಹಾದೇವನ ಸಕಲ ಸದ್ಭಕ್ತರ ಸಹಕಾರದೊಂದಿಗೆ
ಶ್ರೀ ಹಾಲಭಾವಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಬುಧವಾರ ದಿನಾಂಕ 25-11-2026 ಬೆಳಿಗ್ಗೆ ಬ್ರಹ್ಮಮೂಹೂರ್ತದಲ್ಲಿ ಶ್ರೀ ವೀರಭದ್ರ ಮಹಾದೇವರಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ನಂತರ ಸುಮಂಗಲೆಯರಿಂದ ಕಳಸ,ಕನ್ನಡಿಯೊಂದಿಗೆ ಸಕಲವಾದ ಬಾಜಾಭಜಂತ್ರಿ ಡೊಳ್ಳು ಹಾಗೂ ಕುಂಭ ಮೇಳದೊಂದಿಗೆ ಬೆಳಿಗ್ಗೆ 09-30 ಗಂಟೆಗೆ ದೇವಸ್ಥಾನದ ಬಲಭಾಗಕ್ಕೆ ಇರುವ ಸಕ್ಕರೆ ಬಾವಿಯ ಗಂಗಾ ಸ್ಥಳದಿಂದ ಶ್ರೀ ವೀರಭದ್ರ ದೇವರ ಮೂರ್ತಿ, ಕಳಸ, ಮೆರವಣಿಗೆಯೊಂದಿಗೆ ಪುರವಂತರ ಸಮ್ಮುಖದಲ್ಲಿ ಹೊರಡಿಸಿ ದೇವಸ್ಥಾನದ ಮುಂಬಾಗದ ಅಗ್ನಿ ಪೂಜೆ ಯೊಂದಿಗೆ ಅಗ್ನಿ ಪ್ರವೇಶ ಹಾಗೂ ಸುಮಂಗಲೆಯರು ಹೊತ್ತು ತಂದ ಕುಂಭದಿಂದ ಮಹಾದೇವನ ಕುಂಭಾಭಿಷೇಕ ಮತ್ತು ಕಳಸಾರೋಹಣಾ ಹಾಗೂ ಮಹಾದಾಸೋಹ ನಡೆಯುವುದು
ಸಾಯಂಕಾಲ 5 ಗಂಟೆಗೆ ಉಚ್ಚಾಯ ಕಾರ್ಯಕ್ರಮ ಜರಗುತ್ತದೆ ಪಟ್ಟಣದ ಕುಂಬಾರ ಪೇಟೆ ಯಲ್ಲಿರುವ ಬಸವೇಶ್ವರ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಮೆರವಣಿಗೆ ನಡೆಯುತ್ತದೆ .

ಹಾಲಭಾವಿ ವೀರಭದ್ರೇಶ್ವರ ದೇವಸ್ಥಾನಕ್ಕೆ ತೆರಳಿ ಅಗ್ನಿ ಕುಂಡ ಹಾಯುವ ಮೂಲಕ ಪುರವಂತರು, ಹಾಗೂ ಕುಂಭ ಗಳನ್ನು ಹೊತ್ತ ಮಹಿಳೆಯರು ದೇವಸ್ಥಾನ ಪ್ರವೇಶಿಸಿದರುತ್ತಾರೆ

ಸಾಯಂಕಾಲ 5 ಗಂಟೆ ಗೆ ಉಚ್ಚಯ ಜರಗುವು ಆದರಿಂದ ಮುದಗಲ್ಲ ಹಾಗೂ ಸುತ್ತಲಿನ ಹಳ್ಳಿಯ ಜನ ಭಕ್ತರುಭಾಗವಹಿಸಿ ಎಂದು ಸಿದಯ್ಯ ಸ್ವಾಮಿ ಸಾಲಿಮಠ ಆಮಂತ್ರಣ ಪತ್ರಿಕೆಯಲ್ಲಿ ತಿಳಿಸಿದ್ದಾರೆ

ವರದಿ :-ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!