ಮುದಗಲ್ಲ ವರದಿ…
71ನೇ ಕನ್ನಡ ರಾಜ್ಯೋತ್ಸವ ಕನಾ೯ಟಕ ರಕ್ಷಣೆ ವೇದಿಕೆಯ ಸ್ವಾಭಿಮಾನಿ ಸೇನೆ ವತಿಯಿಂದ ಆಚರಣೆ..
ಮುದಗಲ್ಲ :- ಸೆಕ್ರೆಟ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಡಾ!! ಶಶಿಕಲಾ ಭೋವಿ ಜಿಲ್ಲಾ ಅಧ್ಯಕ್ಷರು ಜನ ಜಾಗೃತಿ ವೇದಿಕೆ ಅವರು ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.

ಪಟ್ಟಣದ ಸಾರ್ವಜನಿಕರು, ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಂದಿಗೆ ಪ್ರಮುಖ ರಸ್ತೆ ಮೂಲಕ ಪುರಸಭೆ ರಂಗ ಮಂದಿರದ ಆವರಣದವರಗೆ ಮೆರವಣೆಗೆ ಬಂದನಂತರ ರಂಗ ಮಂದಿರದ ಹತ್ತಿರ ಇರುವ ಕನ್ನಡದ ಧ್ವಜಾ ಕಟ್ಟೆಯಲ್ಲಿ ದೊಡ್ಡನಗೌಡ ಜಿ. ಪಾಟೀಲ್ (ಲೆಕ್ಕಿಹಾಳ) ಅವರ ಪುತ್ರ ರಾಜುಗೌಡ ಪಾಟೀಲ್ ಧ್ವಜಾರೋಹಣ ನೆರವೇರಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿ ಮಾನ ಸೇನೆ ಮುದಗಲ್ ಹೋಬಳಿ ಘಟಕದ ಅಧ್ಯಕ್ಷ ಎಸ್.ಎ. ನಹಿಂ ಮಾತನಾಡಿದರು ನಮ್ಮ ಕನ್ನಡ ನಾಡು ಶ್ರೇಷ್ಠ ಸಂಸ್ಕøತಿ ಮತ್ತು ಪರಂಪರೆಯನ್ನು ಹೊಂದಿದೆ. ಈ ನಾಡನ್ನು ಮತ್ತು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕಾಗಿದೆ. ಎಲ್ಲರೂ ಕನ್ನಡವನ್ನು ಹೆಚ್ಚೆಚ್ಚು ಬಳಕೆ ಮಾಡಿ ಅದರ ಅಸ್ತಿತ್ವವನ್ನು ಕಾಪಾಡಬೇಕಾಗಿದೆ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಧ್ವಜದ ಕಟ್ಟಿಯ ವೇದಿಕೆ ಮೇಲೆ ಪಿಎಸ್ಐ ಸದ್ದಾಮ್ ಹುಸೇನ್ ಮುಖ್ಯ ಅಧಿಕಾರಿ ಪ್ರವೀಣ್ ಕುಮಾರ್ ಕರವೇ ತಾಲೂಕ್ ಅಧ್ಯಕ್ಷ ಜಿಲಾನಿ ಪಾಷಾ, ಕರವೇ ಅಧ್ಯಕ್ಷ ಎಸ್ ಎ ನಯೀಮ್ , ಮಹೆಬೂಬ್ ಕಡ್ಡಿಪುಡಿ, ಡಾಕ್ಟರ್ ರಹಿಮೋದ್ದೀನ್ ಪಟೇಲ್, ಸಿದ್ದರಾಮ ಪಾಗದ, ಎಸ್ ಎನ್ ಖಾದ್ರಿ, ಸಾಬು ಹುಸೇನ್, ಮಹಾಂತೇಶ್ ಚಟ್ಟರ್,
ಈ ಸಂದರ್ಭದಲ್ಲಿ ರಹೆಮಾನ್ ದೂಲಿ ಜಂಬಾಳಿ, ನಾಗರಾಜ ನಾಯಕ, ಜಮಾಲಿ ಸಾಬ್, ಸಂತೋಷ್, ಜಮೀರ್ ಪಾಶ್, ಗ್ಯಾನಪ್ಪ ಛಲವಾದಿ, ಅಬ್ದುಲ್ ಮಜೀದ್, ಅನಿಫ್ ಖಾನ್, ವೀರೇಶ್ ಸಜ್ಜನ್,ಅಲ್ಲಾವುದೀನ್ ಬಾಬಾ, ಅಜೀಜ್ ಪಾಶ್ ಇಸ್ಮಾಯಿಲ್ ಬಳಿಗಾರ್, ದಾವಲ್ ಸಾಬ್ ಬಾಲಪ್ಪ ಉಪ್ಪಾರ, ಚನ್ನಪ್ಪ ಉಪ್ಪಾರ, ರಮೇಶ್ ಶಾಲೆ ಕಾಲೇಜ್ ಶಿಕ್ಷಕರು ಶಿಕ್ಷಕಿಯರು ವಿದ್ಯಾರ್ಥಿಗಳಿದ್ದರು.
ವರದಿ :-ಮಂಜುನಾಥ ಕುಂಬಾರ