ಮುದಗಲ್ಲ ವರದಿ
ಇಂದು ಸಂಜೆ ಚೌಡಿಕಟ್ಟಿಯಲ್ಲಿ ಸಾಂಸ್ಕೃತಿಕ ಕಾಯ೯ಕ್ರಮ ಆರಂಭ ಮುದಗಲ್ ದಸರಾ ಮಹೋತ್ಸವದ ಉದ್ಘಾಟನೆಗೆ ಕ್ಷಣಗಣನೆ..
ಇಂದು ಸಂಜೆಯಿಂದ ದಸರಾ ಹಬ್ಬ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭ.
ಮುದಗಲ್: ಈ ಬಾರಿಯ 2026ರ ದಸರಾ ಮಹೋತ್ಸವವನ್ನು ಮುದಗಲ್ನಲ್ಲಿ ವಿಶೇಷವಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಪಟ್ಟಣದ ಛಾವಡಿಕಟ್ಟಿ ಹತ್ತಿರವಿರುವ ಬಯಲು ಜಾಗದಲ್ಲಿ ಪ್ರತಿದಿನ ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಇಂದು ಸಂಜೆ . 18, ರವಿವಾರ – ಗುರುರಾಜ ಹೊಸಕೋಟೆ ಮತ್ತು ರೋಹಿಣಿ ಹೊಸಕೋಟೆ ತಂಡದಿಂದ ಜಾನಪದ ಸಂಗೀತ ಕಾರ್ಯಕ್ರಮ. ದಿ. 19, ಸೋಮವಾರ – ಗೋಪಿ ತಿಂಗಲೂರು ಮತ್ತು ಇಂದುಮತಿ ಸಾಲಿಮಠ ತಂಡದಿಂದ ಮಿಮಿಕ್ರಿ ಮತ್ತು ನಗೆ ಹಬ್ಬ ಕಾರ್ಯಕ್ರಮ.

ದಿ. 20, ಮಂಗಳವಾರ – ವರ್ಧನ್ ಮತ್ತು ಚೇತನ ಅವರ ಕಲಾ ತಂಡದಿಂದ ಭದ್ರಾವತಿ ಬಾಯ್ಸ್ ಆರ್ಕೆಸ್ಟ್ರಾ ಕಾರ್ಯಕ್ರಮ.

ದಿ. 21, ಬುಧವಾರ ಮಧ್ಯಾಹ್ನ 2 ಗಂಟೆಗೆ ಶ್ರೀ ಚಾಮುಂಡೇಶ್ವರಿ ಶೋಭಾ ಯಾತ್ರೆಯು ನಾಸಿಕ್ ರಣಾಂಗಣ ಡೋಲು ತಂಡದೊಂದಿಗೆ ಭವ್ಯ ಮೆರವಣಿಗೆಯ ಮೂಲಕ ನಡೆಯಲಿದೆ ಆದರಿಂದ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಿಕೊಡಬೇಕಾಗಿ ಆಯೋಜಕರು ತಿಳಿಸಿದ್ದಾರೆ.

ವರದಿ:- ಮಂಜುನಾಥ ಕುಂಬಾರ
