ಮುದಗಲ್ಲ ವರದಿ: ಬೈಕ್‌ಗಳ ಕರ್ಕಶ ಶಬ್ದಕ್ಕೆ ಸಾರ್ವಜನಿಕರು ಹೈರಾಣು..

ಮುದಗಲ್ಲ ವರದಿ.

ಮುದಗಲ್ಲ ವರದಿ: ಬೈಕ್‌ಗಳ ಕರ್ಕಶ ಶಬ್ದಕ್ಕೆ ಸಾರ್ವಜನಿಕರು ಹೈರಾಣು..

ಮಾರ್ಪಡಿಸಿದ ಸೈಲೆನ್ಸರ್‌ಗಳ ಹಾವಳಿಗೆ ಕಡಿವಾಣ ಯಾವಾಗ ? ಸಾರ್ವಜನಿಕರ ನೆಮ್ಮದಿಗೆ ಧಕ್ಕೆ —
ಮುದಗಲ್ಲ ಪಟ್ಟಣದಲ್ಲಿ ಇತ್ತೀಚಿನ ದಿನಗಳಲ್ಲಿ ಬೈಕ್‌ಗಳ ಕರ್ಕಶ ಶಬ್ದ ಮತ್ತು ಕರ್ಕಶ ಹಾರನ್‌ಗಳ ಹಾವಳಿ ವಿಪರೀತವಾಗಿದ್ದು, ಸಾರ್ವಜನಿಕರು ತೀವ್ರ ಕಿರಿಕಿರಿ ಅನುಭವಿಸುತ್ತಿದ್ದಾರೆ.
ಕಿರಿಕಿರಿ: ಕೆಲವು ಬೈಕ್ ಸವಾರರು ತಮ್ಮ ವಾಹನಗಳ ಸೈಲೆನ್ಸರ್‌ಗಳನ್ನು ಬದಲಾಯಿಸಿ  ರಸ್ತೆಗಳಲ್ಲಿ ಅತಿಯಾದ ಮತ್ತು ಕರ್ಕಶವಾದ ಶಬ್ದ ಮಾಡುತ್ತಾ ಸಂಚರಿಸುತ್ತಿದ್ದಾರೆ.
ವೃದ್ಧರು ಮತ್ತು ರೋಗಿಗಳಿಗೆ ತೊಂದರೆ :-  ಹಠಾತ್ತನೆ ಬರುವ ಭೀಕರ ಶಬ್ದದಿಂದಾಗಿ ಹೃದಯ ರೋಗಿಗಳು, ವೃದ್ಧರು ಹಾಗೂ ಸಣ್ಣ ಮಕ್ಕಳು ಬೆಚ್ಚಿ ಬೀಳುತ್ತಿದ್ದಾರೆ
ಅಪಘಾತಗಳ ಭೀತಿ: ಜೋರಾದ ಶಬ್ದ ಮಾಡುತ್ತಾ ಅತಿ ವೇಗವಾಗಿ ಬೈಕ್ ಚಲಾಯಿಸುವುದರಿಂದ ರಸ್ತೆಯಲ್ಲಿ ಓಡಾಡುವ ಪಾದ ಚಾರಿಗಳಿಗೆ ಹಾಗೂ ಇತರ ವಾಹನ ಸವಾರರಿಗೆ ಅಪಘಾತದ ಭಯ ಎದುರಾಗಿದೆ.
ನಿಶ್ಯಬ್ದ ವಲಯಗಳಿಗೂ ಧಕ್ಕೆ: ಆಸ್ಪತ್ರೆ ಹಾಗೂ ಶಾಲಾ ವಲಯಗಳಲ್ಲೂ ಈ ಪುಂಡ ಹೈಕಳ ಬೈಕ್ ಸವಾರಿ ಸಾರ್ವಜನಿಕರ ನೆಮ್ಮದಿ ಕೆಡಿಸಿದೆ. ಸ್ಥಳೀಯ ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇಂತಹ ವಾಹನಗಳನ್ನು ಪತ್ತೆ ಹಚ್ಚಿ, ಮಾರ್ಪಡಿಸಿದ ಸೈಲೆನ್ಸರ್‌ಗಳನ್ನು ವಶಪಡಿಸಿಕೊಂಡು ಕಠಿಣ ಕಾನೂನು ಕ್ರಮ ಜರುಗಿಸಬೇಕು ಮತ್ತು ದಂಡ ವಿಧಿಸಬೇಕು ಎಂದು ಮುದಗಲ್ಲ ಪಟ್ಟಣದ ನಾಗರಿಕರು ಆಗ್ರಹಿಸುತ್ತಿದ್ದಾರೆ.

ವರದಿ:-ಮಂಜುನಾಥ ಕುಂಬಾರ 

 

Prajavikshane

Chandru R Bhanapaur

Leave a Reply

error: Content is protected !!