You are currently viewing LOCAL BREAKING : ಖಾಸಗಿ ಸ್ಲೀಪರ್ ಕೋಚ್ ಬಸ್ ಹರಿದು ಹುಲಿಗೆಮ್ಮ ದೇವಿ ಪಾದಯಾತ್ರಿಕರ ದುರ್ಮರಣ!

LOCAL BREAKING : ಖಾಸಗಿ ಸ್ಲೀಪರ್ ಕೋಚ್ ಬಸ್ ಹರಿದು ಹುಲಿಗೆಮ್ಮ ದೇವಿ ಪಾದಯಾತ್ರಿಕರ ದುರ್ಮರಣ!

ಪ್ರಜಾ ವೀಕ್ಷಣೆ ಸುದ್ದಿ : 

LOCAL BREAKING : ಖಾಸಗಿ ಸ್ಲೀಪರ್ ಕೋಚ್ ಬಸ್ ಹರಿದು ಹುಲಿಗೆಮ್ಮ ದೇವಿ ಪಾದಯಾತ್ರಿಕರ ದುರ್ಮರಣ!

ಕೊಪ್ಪಳ : ತಾಲೂಕಿನ ಸುಪ್ರಸಿದ್ಧ ಕ್ಷೇತ್ರ ಹುಲಿಗೆಮ್ಮ ದೇವಿಗೆ ಪಾದಯಾತ್ರೆ ಹೊರಟಿದ್ದವರ ಮೇಲೆ ಖಾಸಗಿ ಸ್ಲೀಪರ್ ಕೋಚ್ ಬಸ್ ಹರಿದು, ಸ್ಥಳದಲ್ಲೇ ಮೂವರು ಮೃತಪಟ್ಟ ಘಟನೆ ನಡೆದಿದ್ದು, ಮತ್ತೊಬ್ಬ ಪಾದಚಾರಿಯ ಮೇಲೆ ಬೈಕ್‌ ಡಿಕ್ಕಿಯಾಗಿ ಮೃತ ಪಟ್ಟಿದ್ದಾನೆ. ಒಟ್ಟು ಈ ಪ್ರಕರಣದಲ್ಲಿ ನಾಲ್ವರು ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಈ ಘಟನೆ ಕೊಪ್ಪಳ ಜಿಲ್ಲೆಯ ಕೂಕನಪಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 50ರಲ್ಲಿಇಂದು (ಮಂಗಳವಾರ) ನಡೆದಿದೆ.

ಈ ಮೃತರನ್ನು ಗದಗ ಜಿಲ್ಲೆಯ ರೋಣ ತಾಲೂಕಿನ ತಳ್ಳಿಹಾಳ ಗ್ರಾಮದ ಅನ್ನಪೂರ್ಣ(40),ಪ್ರಕಾಶ್(25), ಶರಣಪ್ಪ(19) ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಗಂಭೀರ ಗಾಯಗೊಂಡ ನಾಲ್ಕು ಜನರನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಇದೆ.

ಖಾಸಗಿ ಬಸ್‌ ಸಿಂದಗಿ-ಬೆಂಗಳೂರು ಖಾಸಗಿ ಸ್ಲೀಪರ್ ಬಸ್ ನಿಯಂತ್ರಣ ತಪ್ಪಿ ಪಾದಯಾತ್ರಿಗಳ ಮೇಲೆ ಹರಿದ ಪರಿಣಾಮ ದುರಂತ ಸಂಭವಿಸಿದ್ದು, ಅಪಘಾತದ ವೇಳೆ ಯಾತ್ರಾರ್ಥಿಗಳು ದೇವಸ್ಥಾನ ತಲುಪಲು ಕೇವಲ ಮೂರು ಗಂಟೆಗಳ ಅಂತರದಲ್ಲಿ ದೂರವಿದ್ದರು. ಅಪಘಾತ ನಡೆದ ಸ್ಥಳಕ್ಕೆ ಕೂಡಲೇ ಕೊಪ್ಪಳ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ರಾಮ್ ಅರಸಿದ್ದಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ : ವಿಶ್ವನಾಥ್‌ ಪಟ್ಟಣಶೆಟ್ಟಿ

Prajavikshane

Chandru R Bhanapaur

Leave a Reply

error: Content is protected !!