ಮುದಗಲ್ಲ ವರದಿ..
ಮುದಗಲ್ಲ:-ಪುರಸಭೆ ಸೇರಿ ವಿವಿಧೆಡೆ ಗಾಂದೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜಯಂತಿ ಆಚರಣೆ..

ಮುದಗಲ್ಲ:- ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟ ಮಹಾತ್ಮ ಗಾಂಧಿಯವರ ಜನ್ಮದಿನವನ್ನು ಪ್ರತಿ ವರ್ಷ ಅಕ್ಟೋಬರ್ 2 ರಂದು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿಗೆ ಪ್ರವೀಣ್ ಕುಮಾರ್
ತಿಳಿಸಿದರು.ಪುರಸಭೆ ಯಲ್ಲಿ ಆಯೋಜಿಸಲಾಗಿದ್ದ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಹಿಂಸೆಯೇ ಗಾಂಧಿಜೀಯವರ ಅಸ್ತ್ರವಾಗಿತ್ತು. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಅವರು ನೀಡಿದ ಕೊಡುಗೆಗಳನ್ನು ಗೌರವಿಸಲು ಅವರ ಜನ್ಮದಿನವಾದ ಅಕ್ಟೋಬರ್ 2 ಅನ್ನು ರಾಷ್ಟ್ರೀಯ ರಜಾದಿನವೆಂದು ಗುರುತಿಸಲಾ ಗಿದೆ. ವಿಶ್ವಸಂಸ್ಥೆಯು ಗಾಂಧಿ ಜಯಂತಿಯನ್ನು‘ಅಂತರಾಷ್ಟ್ರೀಯ ಅಹಿಂಸಾ ದಿನ’ ಎಂದು ಆಚರಿಸಿ ಮಹಾತ್ಮ ಗಾಂಧಿಗೆ ತಮ್ಮ ಗೌರವ ನಮನಗಳನ್ನು ಸಲ್ಲಿಸುತ್ತದೆ. ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿಯವರು 17 ತಿಂಗಳ ಕಾಲ ಪ್ರಧಾನಿ ಯಾಗಿದ್ದರೂ ಕೂಡ ಅವರು ಮಾದರಿ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಅವರ ಜೈ ಜವಾನ್ ಜೈ ಕಿಸಾನ್, ಹತ್ಯಾರೋಂ ಕಾ ಜವಾಬ್, ಹತ್ಯಾರೋಂ ಸೆ ದೇಂಗೆ, ಹಮಾರಾ ದೇಶ್ ರಹೇಗಾ ತೋ, ಹಮಾರಾ ತಿರಂಗಾ ರಹೇಗಾ’ ಘೋಷಣೆ ಸ್ಮರಣೀಯವಾದದ್ದು, ಎರಡನೇ ಜಾಗತಿಕ ಸಮರದ ನಂತರ ಭುಗಿಲೆದ್ದ ಅತಿ ದೊಡ್ಡ ಸಂಘರ್ಷವಾದ 1965 ರ ಪಾಕಿಸ್ತಾನ ಮತ್ತು ಭಾರತ ಯುದ್ಧ ಸಂದರ್ಭದಲ್ಲಿ ಅವರು ದೇಶ ರಕ್ಷಣೆಗೆ ತೆಗೆದುಕೊಂಡ ನಿರ್ಧಾರಗಳು ಶ್ಲಾಘನೀಯ ವಾದದ್ದು ಎಂದರು.
ಪಟ್ಟಣದ ಉಪತಹಸಿಲ್ದಾರ್ ಕಚೇರಿ, ಪ.ಪಂ.ಕಾರ್ಯಾಲಯ, ಆರಕ್ಷಕ ಠಾಣೆ, ರೈತ ಸಂಪರ್ಕ ಕೇಂದ್ರ, ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳು, ಸರ್ಕಾರಿ ಮತ್ತು ಖಾಸಗಿ ಶಾಲೆ ಕಾಲೇಜುಗಳು ಸೇರಿದಂತೆ ಮುದಗಲ್ಲನ ವಿವಿಧ ಗ್ರಾಮಗಳಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರು ದೇಶಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸಿ ಮಹನೀಯರಿಗೆ ನುಡಿನಮನ ಸಲ್ಲಿಸಿದರು.
ಪೋಲಿಸ್ ಠಾಣೆಯಲ್ಲಿ ಪಿಎಸ್ಐ ವೆಂಕಟೇಶ, ಎಂ, ಕೃಷಿ ಅಧಿಕಾರಿ ಶ್ರೀಶೈಲ್ ರವರು ಹೂ ಮಾಲೆ ಹಾಕಿ ಪೂಜೆ ಸಲ್ಲಿಸಿ
ಈಸಂಬಂಧದಲ್ಲಿ :-ಮುಖ್ಯಧಿಕಾರಿ ಪ್ರವೀಣ್ ಬೋಗೊರ್, ವ್ಯವಸ್ಥಾಪಕ ಜಗದೇಶ ಬಿರಾದಾರ್,ಆರೀಫ್ ಹುನ್ನಿಸಾ ಬೇಗಂ, ಕಂದಾಯ ನಿರೀಕ್ಷಕ ಆತೋನಿ ರಾಜ,ಕಿರಣ ಕುಮಾರ್ ಗ್ರಾಮ ಆಡಳಿತ ಅಧಿಕಾರಿ ಹಾಗೂ ಶರಣಮ್ಮ ಪರಿಚಾರಕಿ ಹಾಗೂ ಪುರಸಭೆ ಸಿಬ್ಬಂದಿ ಗಳು,ಗ್ರಾಮಲೆಕ್ಕಾಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು, ರೈತ ಸಂಪರ್ಕ ಕೇಂದ್ರದ, ಸಿಬ್ಬಂದಿ ಗಳು, ಸಮುದಾಯದ ಆರೋಗ್ಯ ಇಲಾಖೆ ಸಿಬ್ಬಂದಿಗಳು, ಪ್ರಥಮ ದರ್ಜೆ ಕಾಲೇಜ್ ಸಿಬ್ಬಂದಿಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ವರದಿ :ಮಂಜುನಾಥ ಕುಂಬಾರ