ಮುದಗಲ್ಲ ವರದಿ.
ಬೀದಿ ನಾಯಿಗಳ ಹಾವಳಿ..
ಮುದಗಲ್ಲ ಪಟ್ಟಣದಲ್ಲಿ ಬೆಳಗಾವಿ-ಹೈದರಾಬಾದ್ ಹೆದ್ದಾರಿಯ ಮುಖ್ಯ ರಸ್ತೆಯಲ್ಲಿ ಬೀದಿ ನಾಯಿಗಳ ಓಡಾಟ, ಜಗಳ,ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಮುದಗಲ್ಲ : ಮುಖ್ಯ ರಸ್ತೆಯಲ್ಲಿ ಬೀದಿ ನಾಯಿಗಳದ್ದೇ ಕಾರುಬಾರು ಮುದಗಲ್ಲ ಪಟ್ಟಣದ ಬಹುತೇಕ ರಸ್ತೆಗಳನ್ನು ಆಕ್ರಮಿಸಿಕೊಂಡಿರುವ ಬೀದಿ ನಾಯಿಗಳಿಗೆ ರಸ್ತೆಗಳೇ ಆಶ್ರಯ ತಾಣಗಳಾಗಿವೆ.

ಇದರಿಂದ ಪಟ್ಟಣದಲ್ಲಿ ದಲ್ಲಿ ಸಂಚರಿ ಸುವ ವಾಹನ ಸವಾರರು ತೀವ್ರ ತೊಂದರೆ ಅನು ಭವಿಸುವಂತಾಗಿದೆ.ರಸ್ತೆ ಮಧ್ಯೆದಲ್ಲಿಯೇ ದಿನನಿತ್ಯ ಅಡ್ಡಾಡುವ ನಾಯಿಗಳ ಹಾವಳಿಯಿಂದ ವಾಹನ ಸವಾರರು ನೆಮ್ಮದಿಯಿಂದ ವಾಹನ ಚಾಲನೆ ಮಾಡಲು ಆಗದ ಸ್ಥಿತಿ ನಿರ್ಮಾಣವಾಗಿದೆ.
ಆದರೆ, ಪುರಸಭೆ ಮಾತ್ರ ಈ ವಿಷಯದಲ್ಲಿ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬ ಆರೋಪ ಸಾರ್ವ ಜನಿಕ ರಿಂದ ಕೇಳಿ ಬರುತ್ತಿದೆ.ಈಗಲಾದರೂ ಪುರಸಭೆ ಎಚ್ಚೆತ್ತುಕೊಂಡು ಮುದಗಲ್ಲ ಪಟ್ಟಣದಲ್ಲಿನ ನಾಯಿಗಳ ಹಾವಳಿ ತಡೆಗಟ್ಟುವಂತೆ ಕ್ರಮ ವಹಿಸುತ್ತಾರೆ ಎಂಬುದು ಕಾದು ನೋಡ ಬೇಕಾಗಿದೆ.
ವರದಿ:ಮಂಜುನಾಥ ಕುಂಬಾರ