ಮುದಗಲ್ ವರದಿ
ಮುದಗಲ್ :-ಡಿಸೆಂಬರ್‌ನಲ್ಲಿ ಆರ್ಯವೈಶ್ಯರ ಜಾಗತಿಕ ಶೃಂಗಸಭೆ ಬೀದರ್ ನಿಂದ ಬಳ್ಳಾರಿವರೆಗೆ ಬೈಕ್ ಯಾತ್ರೆ: ಶ್ರೀ ನಿವಾಸ ಕಂಪ್ಲಿ..
ಮುದಗಲ್ : ಆರ್ಯವೈಶ್ಯ ಸಮಾಜದ ಜಾಗತಿಕ ಶೃಂಗಸಭೆಯ ಕುರಿತು ಸಮಾಜದ ಪ್ರತಿಯೊಬ್ಬರಿಗೂ ಮಾಹಿತಿ ತಲುಪಿಸುವ ಉದ್ದೇಶದಿಂದ ಬೀದರ್‌ನಿಂದ ಬಳ್ಳಾರಿವರೆಗೆ ಆರು ದಿನಗಳ ಕಲ್ಯಾಣ ಕರ್ನಾಟಕ ಬೈಕ್ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮುದಗಲ್ ನ ಆರ್ಯವೈಶ್ಯ ಸಮಾಜದ ಅಧ್ಯಕ್ಷ ಶ್ರೀ ನಿವಾಸ ಕಂಪ್ಲಿ ಅವರು ಪತ್ರಿಕೆ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ತಿಳಿಸಿದ್ದಾರೆ.

ಬೀದರ್ ಆರ್ಯ ವೈಶ್ಯ ಹಾಗು ಯುವಜನ ಸಂಘದ ಸಹ
ಯೋಗದಲ್ಲಿ ಅ.2 ರಂದು ಬೀದರ್ ನಿಂದ ಬಳ್ಳಾರಿವರೆಗಿನ ಕಲ್ಯಾಣ ಕರ್ನಾಟಕ ಬೈಕ್ ಯಾತ್ರೆಗೆ ಚಾಲನೆ ಸಿಗಲಿದೆ
ಈ ಅಭಿಯಾನ ಒಟ್ಟು ಆರು ದಿನಗಳ ವರೆಗೆ ಏಳು ಜಿಲ್ಲೆಗಳಲ್ಲಿ 12 ತಾಲೂಕ ಹಾಗೂ 11 ಪಟ್ಟಣಗಳಲ್ಲಿ ಸಂಚರಿಸಲಿದೆ.

ಡಿಸೆಂಬರ್ 25,26,27.ಹೀಗೆ ಮೂರು ದಿನಗಳ ವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜಾಗತಿಕ ಶೃಂಗ ಸಮ್ಮೇಳನದ ನಡೆಯಲಿದ್ದು, ಆ ಕಾರ್ಯಕ್ರಮದ ಮಾಹಿತಿಯು ಸಮಾಜದ ಪ್ರತಿಯೋರ್ವರಿಗೆ ತಿಳಿಸುವ ಉದ್ದೇಶದಿಂದ ಈ ಬೈಕ್ ಯಾತ್ರೆ ಹಮ್ಮಿ ಕೊಳ್ಳಲಾಗಿದೆ.

ಈ ಬೈಕ್ ರಾಲಿ ಸಾಮೂಹಿಕ ಸಭೆ ನಡೆಸುವ ಸ್ಥಳ. ಕಲಬುರ್ಗಿ, ಸೇಡಂ, ಸೈದಾಪುರ, ಯಾದಗಿರಿ, ರಂಗಂಪೇಟೆ, ಸುರಪುರ, ರಾಯಚೂರು, ಮುದಗಲ್ಲ,ಮಾನವಿ, ಸಿಂಧನೂರು, ಕಾರಟಗಿ, ಗಂಗಾವತಿ, ಕುಷ್ಟಗಿ, ಕೊಪ್ಪಳ, ಹೊಸಪೇಟೆ,
ಕಂಪ್ಲಿ, ಸಿರುಗುಪ್ಪ, ಬಳ್ಳಾರಿ, ಬೈಕ್ ಯಾತ್ರೆ ಮಾತ್ರ. ಹುಮ್ನಾಬಾದ್,ಗುರುಮಿಟ್ಕಲ್, ಗುರುಗುಂಟಾ, ಲಿಂಗಸಗೂರು, ಕವಿತಾಳ, ಪೋತ್ನಾಳ್, ಜವಳಗೇರಾ, ಶ್ರೀಪುರಂಜಂಕ್ಷನ್, ಕನಕಗಿರಿ, ತಾವರಗೇರಾ, ಕಮಲಾಪುರ, ಕುರುಗೋಡು,
ಈ ಸಂದರ್ಭದಲ್ಲಿ ಸಾಮೂಹಿಕ ಸಭೆಗಳು ನಡೆಯುವ ಸ್ಥಳಗಳಲ್ಲಿ ಶೃಂಗಸಭೆಯ ಕುರಿತು ಸಮಾಜದ ಸದಸ್ಯರಿಗೆ ಮಾಹಿತಿ ನೀಡುವ
ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಾಮೂಹಿಕ ಸಭೆಗಳು ನಡೆಯುವ ಸ್ಥಳಗಳಲ್ಲಿ ಶೃಂಗಸಭೆಯ ಕುರಿತು ಸಮಾಜದ ಸದಸ್ಯರಿಗೆ ಮಾಹಿತಿ ನೀಡುವಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುವುದು
ಎಂದು ತಿಳಿಸಿದ್ದರು
ಈ ಸಂಧರ್ಭ ದಲ್ಲಿ ಆರ್ಯ ವೈಷ್ಯ ಸಮಾಜದ ಅಧ್ಯಕ್ಷ ಶ್ರೀನಿವಾಸ ಕಂಪ್ಲಿ ಸಮಾಜದ ಪ್ರಮುಖರಾದ ಬದ್ರಿನಾರಾಯಣ ತಾವರಗೇರಿ, ಬಾಳಪ್ಪ ಸುರಪುರ, ನವೀನ್ ತವರಿಗೇರಿ,ಸುನೀಲ್ ಇಲಕಲ್ ಹಾಗೂ ನಾಗರಾಜ್, ಪ್ರಸನ್ನ ತಾವರಗೇರಿ,ಸುಬ್ರಮಣ್ಯ ಆರ್ಯವಷ್ಯ ಮಹಾಸಭಾ ನಿರ್ದೇಶಕ ರಾಘವೇಂದ್ರ ಸುರಪುರ. ಇದ್ದರು
ವರದಿ :ಮಂಜುನಾಥ ಕುಂಬಾರ