ಕೊಪ್ಪಳ : ಹಿಂದುಳಿದ ವರ್ಗಗಳ ಹಾಗೂ ಕನ್ನಡ ಮತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ ತಂಗಡಗಿ ಅವರು ಮೇ 30ರಂದು ಹಾಗೂ ಮೇ 31ರಂದು ಕೊಪ್ಪಳ, ಬಾಗಲಕೋಟ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ.
ಮೇ 30ರ ಬೆಳಗ್ಗೆ 11 ಗಂಟೆಗೆ ಕಾರಟಗಿಯ ಎಪಿಎಂಸಿ ಸಭಾಂಗಣದಲ್ಲಿ ಕಾರಟಗಿ ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸುವರು. ಮಧ್ಯಾಹ್ನ 3 ಗಂಟೆಗೆ ಕಾರಟಗಿಯಿಂದ ನಿರ್ಗಮಿಸಿ ಸಿಂಧನೂರ, ತಾವರಗೇರಾ, ಕುಷ್ಟಗಿ ಇಳಕಲ್ಲ ಮಾರ್ಗವಾಗಿ ವಿಜಯಪುರ ಜಿಲ್ಲೆಗೆ ತೆರಳಿ ಮುದ್ದೆಬಿಹಾಳ ತಾಲೂಕಿನ ತಂಗಡಗಿಯ ಶ್ರೀದುರ್ಗಾದೇವಿ ದೇವಸ್ಥಾನಕ್ಕೆ ಭೇಟಿ ನೀಡುವರು. ಅಲ್ಲಿಂದ ಸಂಜೆ 6.30ಕ್ಕೆ ನಿರ್ಗಮಿಸಿ ಹುನಗುಂದ, ಇಳಕಲ್, ಕುಷ್ಟಗಿ, ತಾವರಗೇರಾ ಮತ್ತು ಸಿಂಧನೂರ ಮಾರ್ಗವಾಗಿ ಕಾರಟಗಿಗೆ ಆಗಮಿಸಿ ವಾಸ್ತವ್ಯ ಮಾಡುವರು.
ಮೇ 31ರಂದು ಬೆಳಗ್ಗೆ 11 ಗಂಟೆಗೆ ಕನಕಗಿರಿಯ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ಟರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಕನಕಗಿರಿ ತಾಲೂಕುಮಟ್ಟದ ಅಧಿಕಾರಿಗಳ ಸಭೆ ನಡೆಸುವರು. ಬಳಿಕ ಮಧ್ಯಾಹ್ನ 3 ಗಂಟೆಗೆ ಕನಕಗಿರಿಯಿಂದ ನಿರ್ಗಮಿಸಿ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಸಹಾಯಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.