ಸಾವಯವ ಕೃಷಿಯತ್ತ ರೈತರ ಚಿತ್ತ


ಜಿಲ್ಲೆಯ ಯಲಬುರ್ಗಾ ಮತ್ತು ಕುಕನೂರ ತಾಲೂಕಿನ ವಣಗೇರಿ, ಮುರಡಿ, ಕುದರಿಮೋತಿ, ನೆಲಜೇರಿ, ವಟಪರ್ವಿ ಮತ್ತು ಚಿಕ್ಕಮ್ಯಾಗೇರಿ ಗ್ರಾಮಗಳಲ್ಲಿ ಐಸಿಐಸಿಐ ಫೌಂಡೇಶನ್ ವತಿಯಿಂದ ಸಾವಯವ ಕೃಷಿ, ಸಮಗ್ರ ಕೃಷಿ, ಸಿರಿಧಾನ್ಯಗಳ ಕೃಷಿ ಮತ್ತು ಜಲಾನಯನ ಕುರಿತು ತರಬೇತಿಗಳನ್ನು ಆಸಕ್ತ ರೈತರಿಗೆ ನೀಡುತ್ತಾ ಬಂದಿರುತ್ತಾರೆ. ಈ ತರಬೇತಿಗಳಲ್ಲಿ ನುರಿತ ವಿಷಯ ತಜ್ಞರು ಹಾಗೂ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಿಂದ ಪ್ರಾತಕ್ಷತೆ ಮತ್ತು ವಿಷಯ ಚರ್ಚೆ ಮುಖಾಂತರ ಮಣ್ಣು ತಪಾಸಣೆ, ನೀರಿನ ನಿರ್ವಹಣೆ, ಗೊಬ್ಬರಗಳ ಮಹತ್ವ, ಸಾವಯವ ಕೃಷಿಯಲ್ಲಿ ಜೀವಾಮೃತ, ನೀಮಾಸ್ತ್ರ, ಎರೆಹುಳು ಗೊಬ್ಬರ ಘಟಕ,ಎಲೆಗಳ ಕಷಾಯ ಹಾಗೂ ಹೈನುಗಾರಿಕೆಗಾಗಿ ಅಝೋಲಾ, ರಸಮೇವು ಒಳಗೊಂದು ತರಬೇತಿ ನೀಡಿ ರೈತರ ಖರ್ಚು ಮಾಡಿ ಆದಾಯ ಹೆಚ್ಚಳಕ್ಕೆ ಒತ್ತು ನೀಡುತ್ತಿದ್ದಾರೆ.

ಎರೆಹುಳು ಗೊಬ್ಬರ ಉತ್ಪಾದನೆ:
ಸ್ಥಳೀಯ ಕೃಷಿ ಒಣ ತ್ಯಾಜ್ಯಗಳನ್ನು ಬಳಸಿಕೊಂಡು ಹಾಗೂ ಪೌಂಡೇಶನ್ ನೀಡಿರುವ ಎರೆಹುಳು ಬೆಡ್ ನಲ್ಲಿ ರೈತರು ಉತ್ತಮವಾಗಿ ಎರೆಹುಳು ಗೊಬ್ಬರವನ್ನು ಉತ್ಪಾದಿಸುತ್ತಿದ್ದಾರೆ ಹಾಗೂ ಹೊರಗಡೆಯಿಂದ ಖರೀದಿ ಮಾಡುವ ರಾಸಾಯನಿಕ ಗೊಬ್ಬರ ತ್ಯಜಿಸಿ ಎರೆಹುಳುಗೊಬ್ಬರ ಉಪಯೋಗಿಸುವುದರಿಂದ ಸಾವಯವದತ್ತ ಹೊರಟಿರುವುದು ಸಂತಸದಾಯಕ ಎಂದು ಐಸಿಐಸಿಐ ಪೌಂಡೇಶನ ಹಿರಿಯ ಅಧಿಕಾರಿಗಳು ತಿಳಿಸಿದರು.

ರೈತರ ಅಭಿಪ್ರಾಯಗಳು:

ಸ್ಥಳೀಯ ಕೃಷಿ ತ್ಯಾಜ್ಯಗಳನ್ನು ಉಪಯೋಗಿಸಿ ಎರೆಹುಳು ಗೊಬ್ಬರ ಪಡೆದಿದ್ದೇನೆ ಇದರಿಂದ ನನಗೆ ಖರ್ಚು ಮುಂದಿನ ಬೆಳೆಗೆ ಖರ್ಚು ಕಡಿಮೆಯಾಗುತ್ತದೆ.
ಬಸವರಾಜ ದಗಲಿ, ವಣಗೇರಿ ರೈತ

ಐಸಿಐಸಿಐ ಪೌಂಡೇಶನ ತರಬೇತಿ ನೀಡುತ್ತಿರುವುದು ನಮ್ಮೆಲ್ಲ ರೈತರಿಗೆ ಉಪಯೋಗಕರವಾಗಿದೆ . ಈ ತರಬೇತಿ ಹಾಗೂ ಕಲಿಕೆ ಅಳವಡಿಸಿಕೊಂಡರೆ ಉತ್ತಮವಾಗಿ ಆದಾಯವನ್ನು ನೀರಿಕ್ಷಿಸಬಹುದು .
ಯಮನಪ್ಪ ಕವಳದ,ಮುರಡಿ ರೈತ

Leave a Reply

error: Content is protected !!