ಕೊಪ್ಪಳ : ಶೌಚಾಲಯ ಬಳಕೆ, ನೈರ್ಮಲ್ಯ ಹಾಗೂ ಶುಚಿತ್ವ ಕುರಿತು ಜಾಗೃತಿ ಮೂಡಿಸಲು ನೀತಿ ಕಥೆ ಮತ್ತು ಕವನಗಳನ್ನು ರಚಿಸಿ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಿಸಿದ ವೈಯಕ್ತಿಕ ಶೌಚಾಲಯ ಬಳಕೆ, ನೈರ್ಮಲ್ಯ ಮತ್ತು ಶುಚಿತ್ವ ಕಾಪಾಡುವ ದೃಷ್ಠಿಯಿಂದ ಶಾಲಾ ಹಾಗೂ ಅಂಗನವಾಡಿ ಮಕ್ಕಳಲ್ಲಿ ಜಾಗೃತಿ ಮೂಡಿಸಲು ನೀತಿ ಕಥೆ ಮತ್ತು ಕವನಗಳನ್ನೊಳಗೊಂಡ ಪುಸ್ತಕವನ್ನು ಸಿದ್ದಪಡಿಸಲಾಗುತ್ತಿದೆ.
ಈ ಪ್ರಯುಕ್ತ ಸಾರ್ವಜನಿಕರು ನೀತಿ ಕಥೆ ಮತ್ತು ಕವನಗಳನ್ನು (200 ರಿಂದ 250 ಪದಗಳ ಮಿತಿಯಲ್ಲಿ) ಸಿದ್ದಪಡಿಸಿ, ವಾಟ್ಸ್ಅಪ್ ನಂಬರ್ 9980128210, 9481085235, 8971363678 ಗೆ ಜುಲೈ 31ರ ಸಂಜೆ 5.30ರೊಳಗಾಗಿ ಕಳುಹಿಸಿ ಕೊಡಬೇಕು ಎಂದು ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಎಂ.ಎ ರೆಡ್ಡೇರ್ ಅವರು ತಿಳಿಸಿದ್ದಾರೆ.