LOCAL EXPRESS : ಕಾಸನಕಂಡಿ ಅರಣ್ಯ ವಲಯದಲ್ಲಿ ಚಿರತೆ ಪ್ರತ್ಯಕ್ಷ : ಬೊನಿಗೆ ಬಿದ್ದ ಚಿರತೆ..!

You are currently viewing LOCAL EXPRESS : ಕಾಸನಕಂಡಿ ಅರಣ್ಯ ವಲಯದಲ್ಲಿ ಚಿರತೆ ಪ್ರತ್ಯಕ್ಷ : ಬೊನಿಗೆ ಬಿದ್ದ ಚಿರತೆ..!

ಹುಲಿಗಿ : ಇತ್ತೀಚಿಗೆ ಕಾಡುಪ್ರಾಣಿಗಳು ಕಾಡು ಪ್ರದೇಶಗಳನ್ನು ಬಿಟ್ಟು ಜನದಟ್ಟನೆ ಇರುವ ಪ್ರದೇಶಗಳ , ಸಣ್ಣಪುಟ್ಟ ಅರಣ್ಯ ಪ್ರದೇಶಗಳ, ಬೆಟ್ಟಗುಡ್ಡಗಳ ಕಡೆ ಧಾವಿಸುತ್ತಿವೆ. ಇತ್ತೀಚಿಗೆ ಕೊಪ್ಪಳ ತಾಲೂಕು ನಾಗೇಶನಳ್ಳಿ ಸಮೀಪ ಚಿರತೆಯೊಂದು ಪ್ರತ್ಯಕ್ಷವಾಗಿ ಅಲ್ಲಿನ ಸುತ್ತಮುತ್ತ ಜನರಿಗೆ ಆತಂಕದ ಛಾಯೆ ಮೂಡಿಸಿತ್ತು, ಅರಣ್ಯ ಇಲಾಖೆ ಸಿಬ್ಬಂದಿಯ ಸತತ ಪ್ರಯತ್ನದಿಂದ ಬೋನಿನಲ್ಲಿ ಸೆರೆ ಹಿಡಿಯಲಾಗಿತ್ತು.

ಕೊಪ್ಪಳ ತಾಲೂಕು ಕಾಸನಕಂಡಿ ಗ್ರಾಮಕ್ಕೆ ಹೊಂದಿಕೊಂಡಿರುವ ಅರಣ್ಯವಲಯದಲ್ಲಿ ಕಳೆದ ಐದಾರು ತಿಂಗಳಿಂದ ಆಗಾಗ ಚಿರತೆಯೊಂದು ಪ್ರತ್ಯಕ್ಷ ಆಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಆಗಾಗ ಫೋಟೋ ಹಾಗೂ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಸಂಬಂಧಪಟ್ಟ ಅರಣ್ಯ ಅಧಿಕಾರಿಗಳ ಗಮನ ಸೆಳೆಯುತ್ತಿದ್ದಾರೆ . ತುಂಗಭದ್ರಾ ಹಿನ್ನೀರಿನ ಸ್ಥಳವಾದ ಕಾಸನಕಂಡಿ ಅರಣ್ಯ ವಲಯದಲ್ಲಿ ಆಗಾಗ ದರ್ಶನ ಕೊಡುವ ಚಿರತೆಯು ಅಲ್ಲಿನ ಸುತ್ತಮುತ್ತ ಗ್ರಾಮದ ಜನರಿಗೆ ಅದೃಷ್ಟ ಎಂಬಂತೆ ಇಲ್ಲಿಯ ತನಕ ಯಾವುದೇ ರೀತಿಯ ಪ್ರಾಣ ಹಾನಿ ಮಾಡಿಲ್ಲ. ಇದೆ ಅರಣ್ಯ ವಲಯಕ್ಕೆ ಹೊಂದಿಕೊಂಡಿರುವ ಸಮೀಪದ ಕೋಳಿ ಫಾರಂನಲ್ಲಿ ಸಾಕಷ್ಟು ನಾಯಿಗಳಿವೆ, ಆ ಬೆಟ್ಟದ ಪ್ರದೇಶದಲ್ಲಿ ಮೇಯಲು ಹೋಗುತ್ತಿರುವ ಯಾವುದೇ ಕುರಿ ಮೇಕೆಗಳು ದನಕರಗಳ ಮೇಲೆ ಇಲ್ಲಿ ತನಕ ಯಾವುದೇ ದಾಳಿ ಮಾಡಿರುವ ಅಹಿತತಕರ ಘಟನೆಗಳು ಸಂಭವಿಸಿಲ್ಲ. ಆದರೂ ಸಹ ನಮ್ಮ ಜೀವವನ್ನ ನಮ್ಮ ಕೈಯಲ್ಲಿ ಇಟ್ಟುಕೊಂಡು ಇಲ್ಲಿ ನಾವು ಜೀವನವನ್ನು ಸಾಗಿಸುತಿದ್ದೇವೆ ಎನ್ನುತ್ತಾರೆ ಪ್ರತ್ಯಕ್ಷ ದರ್ಶಿಗಳು. ಈ ಚಿರತೆ ಪ್ರತ್ಯಕ್ಷವಾದ ಸ್ಥಳದ ಸಮೀಪ ಎಚ್ ಆರ್ ಜಿ ಕಾರ್ಖಾನೆ, ಬೆಟ್ಟದ ವೀರಾಂಜನೇಯ ದೇವಸ್ಥಾನ , ಪಶ್ಚಿಮಕ್ಕೆ ಕೂಗಳತೆಯ ದೂರದಲ್ಲಿ ಕಾಸನಕಂಡಿ ಗ್ರಾಮ, ಅದಕ್ಕೆ ಹೊಂದಿಕೊಂಡಿರುವ ಉತ್ತರ ದಿಕ್ಕಿನಂಚಿಗೆ ಸಾಲುಮರದ ತಿಮ್ಮಕ್ಕ ಉದ್ಯಾನವನ ಇರುವುದರಿಂದ ಈ ಪ್ರದೇಶಗಳಿಗೆ ಬರುವ ಜನರಿಗೆ ಭಯದ ಆತಂಕ ಶುರುವಾಗಿದೆ.

ಈ ಕುರಿತು ಅರಣ್ಯ ಅಧಿಕಾರಿಗಳನ್ನು ಕರೆ ಮೂಲಕ ಸಂಪರ್ಕಿಸಿದಾಗ ಚಿರತೆ ಇರುವುದು ಖಚಿತಪಡಿಸಿದ್ದಾರೆ. ಆ ಚಿರಿತೆಯನ್ನು ಹಿಡಿಯಲು ಈಗಾಗಲೇ ನಾಗೇಶನಹಳ್ಳಿ ಸಮೀಪ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿದಂತೆ ಕಾಸನಕಂಡಿ ಅರಣ್ಯದಲ್ಲಿಯೂ ಸಹ ಚಿರತೆ ಬೊನ್ ಬಳಸಿ ಆ ಬೋನಿನಲ್ಲಿ ಚಿರತೆಗೆ ಆಹಾರವೆಂದು ನಾಯಿಯನ್ನು ಅಥವಾ ಕುರಿಯೊಂದನ್ನು ಕಟ್ಟಿ ಸೆರೆ ಹಿಡಿಯಲು ಅನುಸರಿಸುವ ಎಲ್ಲಾ ಕ್ರಮಗಳನ್ನು ಅನುಸರಿಸುತ್ತೇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

“ಕಾಸನಕಂಡಿ ಅರಣ್ಯ ವಲಯದಲ್ಲಿ ಚಿರತೆಯೆಂದು ಕಾಣಿಸಿಕೊಂಡಿದ್ದು ನಿಜವಿದ್ದು. ಅದನ್ನು ಹಿಡಿಯಲು ಕಳೆದ 15 ದಿನಗಳಿಂದ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದೇವೆ. ಆದರೆ ಇಲ್ಲಿಯವರೆಗೂ ಹಾಕಲಾಗಿರುವ ಬೋನಿನ ಸಮೀಪ ಸುಳಿಯುತ್ತಿಲ್ಲ. ನಾಗೇಶನಹಳ್ಳಿಯಲ್ಲಿ ಬಳಸಿರುವ ಕ್ರಮಗಳನ್ನೇ ಕೈಗೊಂಡು ಏನಾದರೂ ಮಾಡಿ ಚಿರತೆಯನ್ನು ಸೆರೆ ಹಿಡಿಯುತ್ತೇವೆ”

ಪವರ್ ಗೌಡ್ರು ಆರ್ ಎಫ್ ಓ

“ಎಚ್ ಆರ್ ಜಿ ಕಾರ್ಖಾನೆಗೆ ಹೋಗುವ ಮುನ್ನ ಈ ಚಿರತೆಯು ಆಗಾಗ ಕಾಣಿಸಿಕೊಳ್ಳುತ್ತಿದೆ. ಈ ಪ್ರದೇಶದಲ್ಲಿರುವ ಕಾರ್ಖಾನೆಗಳಿಗೆ ಹೋಗಲು ತುಂಬಾ ಭಯವಾಗುತ್ತಿದೆ. ಆದಷ್ಟು ಬೇಗ ಈ ಚಿರತೆಯನ್ನು ಸೆರೆ ಹಿಡಿದು ಇಲ್ಲಿರುವ ಜನರ ಆತಂಕವನ್ನು ದೂರ ಮಾಡಿ”

ಮುರಳಿಧರ್ ಬಸಿರಾಳ ಲಿಂಗದಹಳ್ಳಿ, ಖಾಸಗಿ ಕಾರ್ಖಾನೆ, ಉದ್ಯೋಗಿ

Leave a Reply

error: Content is protected !!