ಇಂದು ಅಧಿಕೃತವಾಗಿ ಲೋಕಾರ್ಪಣೆಗೊಂಡ ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ ಮಾಧ್ಯಮ.

ಕುಕನೂರು : ಇಂದು ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ ಮಾಧ್ಯಮ ಅಧಿಕೃತವಾಗಿ ಲೋಕಾರ್ಪಣೆಗೊಂಡಿತು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಯಲಬುರ್ಗಾ ಶಾಸಕ, ಮಾಜಿ ಸಚಿವರಾದ ಬಸವರಾಜ್ ರಾಯರಡ್ಡಿ ಅವರಿಂದ ಪ್ರಜಾವೀಕ್ಷಣೆ ಸುದ್ದಿ ಮಾಧ್ಯಮದ ಲೋಗೋ ಅನಾವರಣ ಮಾಡಲಾಯಿತು.

ನಂತರದ ವೇದಿಕೆ ಕಾರ್ಯಕ್ರಮದಲ್ಲಿ ಕುಕನೂರ್ ತಹಸೀಲ್ದಾರ್ ಹೆಚ್ ಪ್ರಾಣೇಶ್, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪಿ ಸುಬ್ರಮಣ್ಯ, ಕೊಪ್ಪಳ ಜಿಲ್ಲೆಯ ವಾರ್ತಾ ಅಧಿಕಾರಿಗಳಾದ ಗವಿಸಿದ್ದಪ್ಪ ಹೊಸಮನಿ, ಇವರುಗಳಿಂದ ಡಿಜಿಟಲ್ ಸುದ್ದಿ ಮಾಧ್ಯಮದ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.


ಈ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಗೌರವ ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ್ ಎಚ್ ಪ್ರಾಣೇಶ್ ಅವರು ಪ್ರಜಾವೀಕ್ಷಣೆ ಸುದ್ದಿ ಮಾಧ್ಯಮ ತಂಡಕ್ಕೆ ಶುಭಕೋರಿದರು. ನಂತರ ಕುಕನೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪಿ ಸುಬ್ರಮಣ್ಯ ಅವರು, ಈಗಿನದು ಡಿಜಿಟಲ್ ಯುಗ, ತುಂಬಾ ವೇಗ ಪಡೆದುಕೊಂಡಿದೆ, ಸುದ್ದಿ, ಸಂದೇಶಗಳು ತತಕ್ಷಣದಲ್ಲಿ ಜನರಿಗೆ ತಲುಪುತ್ತಿವೆ, ಇಂತಹ ಸ್ತುತ್ಯಾರ್ಹ ಕಾರ್ಯದಲ್ಲಿ ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ ಮಾಧ್ಯಮ ತಂಡ ಮುಂದಾಗಿದ್ದು ಅಭಿನಂದನೀಯ, ನೈಜ ವರದಿಗಳ ಮೂಲಕ ಪ್ರಜಾತಂತ್ರ ವ್ಯವಸ್ಥೆಯ, ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವ, ಬೆಳಕು ಚೆಲ್ಲುವ, ಸಂವಿಧಾನದ ನಾಲ್ಕನೇ ಅಂಗವಾಗಿ ಮಾಧ್ಯಮವಾಗಿ ಬೆಳೆಯಲಿ ಎಂದು ತಂಡಕ್ಕೆ ಹಾರೈಸಿದರು.

ಕೊಪ್ಪಳ ಜಿಲ್ಲಾ ವಾರ್ತಾ ಅಧಿಕಾರಿ ಗವಿಸಿದ್ದಪ್ಪ ಹೊಸಮನಿ ಅವರು ಮಾತನಾಡಿ, ‘ಜಾಗತಿಕರಣದ ಮುಂದುವರಿದ ಭಾಗವಾಗಿ ಇವತ್ತು ಇಡೀ ಜಗತ್ತೇ ಒಂದು ಹಾಲಿಯಂತಾಗಿದೆ, ಇಡೀ ಜಗತ್ತೇ ನಮ್ಮ ಅಂಗೈಯಲ್ಲಿದೆ, ಇದಕ್ಕೆಲ್ಲಾ ಕಾರಣ ಡಿಜಿಟಲ್ ತಂತ್ರಜ್ಞಾನ. ಡಿಜಿಟಲೀಕರಣ. ಪತ್ರಿಕೆಯಲ್ಲಿ ಬರುವ ಮೊದಲೇ ಸುದ್ದಿಗಳು ಜನರಿಗೆ ತ್ವರಿತವಾಗಿ ತಲುಪುತ್ತಿವೆ, ಜಗತ್ತು ಬದಲಾಗುತ್ತಿದೆ, ಕುಳಿತಲ್ಲಿಯೇ ಇಡೀ ಜಗತ್ತಿನ ವಿದ್ಯಮಾನ ದೇಶ, ವಿದೇಶ, ರಾಷ್ಟ್ರ, ರಾಜ್ಯ, ಜಿಲ್ಲೆಯ ಸುದ್ದಿಗಳನ್ನು ಇಂದು ತಿಳಿದುಕೊಳ್ಳಬಹುದು’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಮೇಘರಾಜ್ ಬಳಗೇರಿ, ವಿರೂಪಾಕ್ಷಯ್ಯ ಕುರ್ತಕೋಟಿ, ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ನಾಗರಾಜ್ ಬೆಣಕಲ್, ಸುರೇಶ್ ಬಳೂಟಗಿ, ಪ್ರಜಾವೀಕ್ಷಣೆ ಸಂಪಾದಕ ಚಂದ್ರು ಆರ್ ಬಾಣಪುರ, ಸಹ ಸಂಪಾದಕ ಈರಯ್ಯ ಕುರ್ತಕೋಟಿ, ಶರಣಯ್ಯ ತೊಂಟದಾರ್ಯ ಮಠ, ಜಾಹಿರಾತು ಮುಖ್ಯಸ್ಥ ವಿಶ್ವನಾಥ್ ಪಟ್ಟಣಶೆಟ್ಟಿ, ಜಿಲ್ಲಾ ಸುದ್ದಿ ಸಂಯೋಜಕ ಕನಕಪ್ಪ ತಳವಾರ್, ಸ್ನೇಹಿತರು, ಇತರರು ಉಪಸ್ಥಿತರಿದ್ದರು.

ವರದಿ : ಈರಯ್ಯ ಕುರ್ತಕೋಟಿ

Leave a Reply

error: Content is protected !!