ಕುಷ್ಟಗಿ : ಸರಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಕಟ್ಟಡ ನಿರ್ಮಿಸಲು ಕುಷ್ಟಗಿ ಪಟ್ಟಣದ ವ್ಯಾಪ್ತಿಯಲ್ಲಿ ವಸತಿ ವಿನ್ಯಾಸಗಳಲ್ಲಿ ಸಾರ್ವಜನಿಕರಿಗಾಗಿ ಕಾಯ್ದಿರಿಸಿರುವ ನಿವೇಶನವನ್ನು ಒದಗಿಸಲು ಆಕ್ಷೇಪಣೆಗೆ ಆಹ್ವಾನಿಸಲಾಗಿದೆ.
KOPPAL NEWS : ಅಕ್ರಮ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದವರ ಬಂಧನ..!
LOCAL NEWS : ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆ..!
ಕುಷ್ಟಗಿ ಪಟ್ಟಣದ ವಾರ್ಡ ನಂಬರ 03 ರಲ್ಲಿ ಬರುವ ಸರ್ವೇ ನಂಬರ 105/10ರ ಸುರೇಶ ತಂದೆ ನಾಗಪ್ಪ ಪತ್ತಾರ ಸಾ||ಕುಷ್ಟಗಿ, ಇವರ ವಸತಿ ವಿನ್ಯಾಸದಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಮೀಸಲಿಟ್ಟ ನಿವೇಶನದ ಕ್ಷೇತ್ರ 1472 ಚದುರ ಮೀಟರ ಜಾಗೆಯಲ್ಲಿ ಸರ್ಕಾರಿ ಮೇಟ್ರಿಕ ಪೂರ್ವ ಬಾಲಕಿಯರ ವಸತಿ ನಿಲಯ ಕಟ್ಟಡ ನಿರ್ಮಾಣ ಮಾಡಲು ಸಂಬಂದಪಟ್ಟ ಇಲಾಖೆಗೆ ಮಂಜೂರು ನೀಡುವಲ್ಲಿ ಸಾರ್ವಜನಿಕರಿಂದ ತಂಟೆ ತಕರಾರು ಅಥವಾ ಆಕ್ಷೇಪಣೆಗಳಿದ್ದಲ್ಲಿ, ಕುಷ್ಟಗಿ ಪಟ್ಟಣದ ಸಾರ್ವಜನಿಕರು ತಮ್ಮ ತಕರಾರನ್ನು ಈ ಪ್ರಕಟಣೆ ಪ್ರಕಟಗೊಂಡ 15 ದಿನಗಳ ಒಳಗಾಗಿ ಕುಷ್ಟಗಿ ಪುರಸಭೆ ಕಾರ್ಯಾಲಯಕ್ಕೆ ಸಲ್ಲಿಸಬೇಕು. ಅವಧಿ ಮೀರಿ ಬಂದ ತಕರಾರುಗಳನ್ನು ಸ್ವೀಕರಿಸುವುದಿಲ್ಲ ಎಂದು ಕುಷ್ಟಗಿ ಪುರಸಭೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.