ಕುಕನೂರಿನ ಹಿರಿಯ ಮುಖಂಡರು, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದ ದಿವಂಗತ ಶ್ರೀ ಶೇಖರಪ್ಪ ವಾರದ ರವರ ಪತ್ನಿಯವರಾದ ಶ್ರೀಮತಿ ಪಾರ್ವತಮ್ಮ ಶೇಖರಪ್ಪ ವಾರದ ಇವರು ಇಂದು (30/09/2023) ಶನಿವಾರ ಬೆಳಿಗ್ಗೆ 5.00 ಗಂಟೆಗೆ ಶಿವಾಧೀನರಾದರೆಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮೃತರ ಅಂತ್ಯಕ್ರಿಯೆಯನ್ನು ಇಂದು ಮಧ್ಯಾಹ್ನ 2.00 ಗಂಟೆಗೆ ಕೋಳಿಪೇಟಿಯ ಕಲ್ಲಿನಾಥೇಶ್ವರ ದೇವಸ್ಥಾನದ ಹತ್ತಿರದ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು. ಆದಕಾರಣ ತಾವುಗಳು ಮೃತರ ಅಂತ್ಯೆಕ್ರಿಯೆಗೆ ಆಗಮಿಸಿ ಚಿರಶಾಂತಿ ಕೋರಬೇಕಾಗಿ ವಿನಂತಿ ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.