BREAKING : ರಾಜೂರ ಗ್ರಾಮದ ಬಳಿ ಭೀಕರ ಅಪಘಾತ : ಸ್ಕೂಟಿ ಸವಾರ ಮೃತ..!!

You are currently viewing BREAKING : ರಾಜೂರ ಗ್ರಾಮದ ಬಳಿ ಭೀಕರ ಅಪಘಾತ : ಸ್ಕೂಟಿ ಸವಾರ ಮೃತ..!!

ಕುಕನೂರು : ಕುಕನೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 367ರಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಈ ಪರಿಣಾಮ ಆಕ್ಟಿವಾ ಸ್ಕೂಟಿ ಸವಾರ ಮೃತ ಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ತಾಲೂಕಿನ ರಾಷ್ಟ್ರೀಯ ಹೆದ್ದಾರಿ 367ರ ರಾಜೂರ ಗ್ರಾಮದ ಬೈಪಾಸ್‌ ಕಲ್ಲೂರು ಕ್ರಾಸ್‌ ಬಳಿ ಈ ಘಟನೆ ನಡೆದಿದೆ.

ಕುಕನೂರು ಪಟ್ಟಣದ ಮಂಜುನಾಥ್‌ ಬೀಕ್ಷಾವತಿಮಠ ಎಂದು ಮೃತನನ್ನು ಗುರುತಿಸಲಾಗಿದೆ. ಹಳದಿ ಬಣ್ಣದ 10 ವೀಲರ್‌ ಟಿಪ್ಪರ್‌ ಶರವೇಗದಲ್ಲಿ ಬಂದು ಆಕ್ಟಿವಾ ಸ್ಕೂಟಿಗೆ ಹೊಡೆದಿದೆ. ಈ ಪರಿಣಾಮ ಸ್ಕೂಟಿ ಸವಾರನಿಗೆ ತೀವ್ರ ರಕ್ತ ಸ್ರಾವ ಆಗಿದ್ದು, ಬಳಿಕ ಆ ವ್ಯಕ್ತಿಯನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ವಿಧಿ ಆಟವೇ ಬಲ್ಲವ ಯಾರು? ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಈ ಘಟನೆ ಕುರಿತು ಕುಕನೂರು ಪೊಲೀಸರು ತನಿಖೆಯನ್ನು ಮಾಡುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

Leave a Reply

error: Content is protected !!