ಯಲಬುರ್ಗಾ : ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ಕುರಿತು ಸರ್ಕಾರ ಕೂಡಲೇ ಸ್ಪಷ್ಟ ನಿರ್ಧಾರ, ಕಾನೂನು ತರಬೇಕು, ಮೂಗಿಗೆ ತುಪ್ಪ ಸವರುವ ಕೆಲಸ ಮಾಡಬಾರದು ಎಂದು ಕರ್ನಾಟಕ ರಕ್ಷಣಾ ವೇಧಿಕೆ ಯಲಬುರ್ಗಾ ಘಟಕ ಸರ್ಕಾರವನ್ನು ಆಗ್ರಹಿಸಿದೆ.
ಈ ಕುರಿತು ಯಲಬುರ್ಗಾ ಕರವೇ ಘಟಕವು ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಿದ್ದು ಕರ್ನಾಟಕದಲ್ಲಿ ಖಾಸಗಿ, ಅರೆ ಖಾಸಗಿ ಕಂಪನಿಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಶೇ 75 ರಷ್ಟು ಉದ್ಯೋಗ ಮೀಸಲಾತಿ ಕಾಯ್ದೆ ಜಾರಿ ಮಾಡಬೇಕು ಎಂದು ಅಗ್ರಹಿಸಿದ್ದಾರೆ.
ಸರ್ಕಾರ ಕನ್ನಡಿಗರಿಗೆ ಉದ್ಯೋಗ ಕಲ್ಪಿಸಲು ವಿಧೇಯಕ ಮಂಡಿಸಿ ಮಾರ್ಪಡು ಮಾಡುವ ನೆಪದಲ್ಲಿ ಮತ್ತೆ ಅದನ್ನು ವಾಪಾಸ್ ಪಡೆದಿದೆ. ಈ ಕೂಡಲೇ ಕನ್ನಡಿಗರಿಗೆ ಸ್ಥಳೀಯವಾಗಿ ಉದ್ಯೋಗ ಮೀಸಲಾತಿ ವಿಧೇಯಕ ಮಂಡಿಸಿ ಜಾರಿಗೆ ತರಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಬಣ ಅಗ್ರಹಿಸಿದೆ.
ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಶಿವಕುಮಾರ್ ನಾಗನಗೌಡ, ಮಂಜುನಾಥ್ ಬಿ ಕೆ, ಭೀಮೇಶ್ ಬಂಡಿವಡ್ಡರ, ರಾಮನಗೌಡ ಪಾಟೀಲ್, ಮಂಜುನಾಥ್ ಕಮ್ಮಾರ್, ಶ್ರೀಧರ್ ಸುರಕೋಡ, ಘನವಂತೇಶ್ ಚನ್ನಾದಾಸರ, ವಿರೇಶ್ ಬಳಗೇರಿ ಇತರರು ಉಪಸ್ಥಿತರಿದ್ದರು.