SC – ST Reservation, ಐತಿಹಾಸಿಕ ತೀರ್ಪು : ಒಳ ಮೀಸಲಾತಿಗೆ ಸುಪ್ರೀಮ್ ಕೋರ್ಟ್ ಗ್ರೀನ್ ಸಿಗ್ನಲ್ !!
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಒಳ ಮೀಸಲಾತಿ ಕಲ್ಪಿಸಲು ಸುಪ್ರೀಮ್ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು ಈ ಸಂಬಂಧ ಅನೇಕ ಸಂಘಟನೆಗಳು ಹೋರಾಟದ ಫಲಕ್ಕೆ ಸುಪ್ರೀಮ್ ಕೋರ್ಟ್ ಸಿಹಿ ಸುದ್ದಿ ನೀಡಿದೆ.
ಇಂದು ಗುರುವಾರ ಒಳ ಮೀಸಲಾತಿ ಕುರಿತು ಮಹತ್ತರ ತೀರ್ಪು ನೀಡಿರುವ ಸುಪ್ರೀಮ್ ಕೋರ್ಟ್, ಒಳ ಮೀಸಲಾತಿ ಕಾನೂನು ಬದ್ದವಾಗಿದೆ. ಸರ್ಕಾರಿ ಉದ್ಯೋಗಗಳಲ್ಲಿ ಪರಿಶಿಷ್ಟ ಜಾತಿ ಪಂಗಡಗಳ ಒಳ ಮೀಸಲಾತಿ ನೀಡಲು ಆಯಾ ರಾಜ್ಯಗಳ ವಿವೇಚನೆಗೆ ಬಿಟ್ಟದ್ದು ಎಂದು ಸುಪ್ರೀಮ್ ಕೋರ್ಟ್ ಹೇಳಿದೆ.
ಎಸ್ ಸಿ, ಎಸ್ ಟಿ ಮೀಸಲಾತಿಯಲ್ಲಿಯೇ ಒಳ ಮೀಸಲಾತಿ ನೀಡಲು ಸುಪ್ರೀಮ್ ಕೋರ್ಟ್ ಒಪ್ಪಿಗೆ ನೀಡಿದೆ. ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ನ್ಯಾ. ವಿಕ್ರಂ ನಾಥ್, ಪಂಕಜ್ ಮಿತಾಲ್, ಮನೋಜ್ ಮಿಶ್ರಾ, ಬಿ ಆರ್ ಗವಾಯಿ, ಬೆಲಾ ಎಂ ತ್ರಿವೇದಿ, ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ಪಂಜಾಬ್ ರಾಜ್ಯದ ಪರಿಶಿಷ್ಟ ಜಾತಿ ವರ್ಗಗಳ ಒಳ ಮೀಸಲಾತಿ ಪ್ರಕರಣ ಸುಪ್ರೀಮ್ ಕೋರ್ಟ್ ಮೆಟ್ಟಿಲೇರಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಮ್ ಕೋರ್ಟ್ 7 ನ್ಯಾಯದೀಶರ ಪೀಠ 6:1 ರ ಬಹುಮತದೊಂದಿಗೆ ಎಸ್ ಸಿ ಎಸ್ ಟಿ ವರ್ಗದ ಅತೀ ಹೆಚ್ಚು ಹಿಂದುಳಿದವರಿಗೆ ಒಳ ಮೀಸಲಾತಿ ನೀಡಬಹುದು ಎಂದು ಐತಿಹಾಸಿಕ ತೀರ್ಪು ನೀಡಿದೆ.
— ಪ್ರಜಾವೀಕ್ಷಣೆ ಸುದ್ದಿ ಜಾಲ.