You are currently viewing ನೂತನ ಕೆಡಿಪಿ ಸದಸ್ಯರ ಪದಗ್ರಹಣ ಕಾರ್ಯಕ್ರಮ

ನೂತನ ಕೆಡಿಪಿ ಸದಸ್ಯರ ಪದಗ್ರಹಣ ಕಾರ್ಯಕ್ರಮ

ಕನಕಗಿರಿ : ತಾಲೂಕಿನ ಸಮಗ್ರ ಅಭಿವೃದ್ದಿಗೆ ಕೆಡಿಪಿ ಸದಸ್ಯರು ಕೆಲಸ ಮಾಡುವಂತೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕೆ.ರಾಜಶೇಖರ್ ಹೇಳಿದರು.

ಇಂದು ಪಟ್ಟಣದ ತಾಲೂಕು ಪಂಚಾಯತ್ ಕಚೇರಿಯ ಸಭಾಂಗಣದಲ್ಲಿ ತಾ.ಪಂ ಯ ತ್ರೈಮಾಸಿಕ ಪರಿಶೀಲನಾ ಕೆಡಿಪಿ ಸಮಿತಿಯ ಸದಸ್ಯರ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾಲೂಕಿನ ಅಭಿವೃದ್ದಿಯ ಕುರಿತು ಸದಸ್ಯರು ಸಲಹೆಗಳನ್ನು ನೀಡುವಂತೆ ತಿಳಿಸಿದರು.

ನಂತರ ನೂತನ ಕೆಡಿಪಿ ಸದಸ್ಯರಾದ ಶರಣಪ್ಪ ತೆಗ್ಗಿನಮನಿ, ಕೆ.ವೀರವೆಂಕಟ ವಿರುಪಾಕ್ಷಿ, ಹುಸೇನಸಾಬ್ ಹುಲಿಹೈದರ್, ಗಂಗಮ್ಮ ಚಿಕ್ಕಡಂಕನಕಲ್, ರಾಮನಗೌಡ ಬುನ್ನಟ್ಟಿ, ಯಲ್ಲಪ್ಪ ಉದ್ದಿಹಾಳ ಅವರನ್ನು ತಾಲೂಕು ಪಂಚಾಯತಿ ವತಿಯಿಂದ ಸನ್ಮಾನಿಸಿ ಆದೇಶ ಪತ್ರವನ್ನು ನೀಡುವ ಮೂಲಕ ಗೌರವಿಸಲಾಯಿತು.

 ಇದೇ ವೇಳೆ ಜಿ.ಪಂ ಯ ಕೆಡಿಪಿ ಸದಸ್ಯರಾಗಿ ನಾಮನಿರ್ದೇಶನಗೊಂಡ ನಾಗಪ್ಪ ಹುಗ್ಗಿ ಸಿರಿವಾರ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ತಹಶೀಲ್ದಾರ್ ವಿಶ್ವನಾಥ ಮುರುಡಿ, ಮಾಜಿ ಜಿ.ಪಂ ಸದಸ್ಯರಾದ ವಿರೇಶ್ ಸಮಗಂಡಿ, ಹನುಮೇಶ್ ನಾಯಕ ಸೇರಿದಂತೆ ಪಟ್ಟಣ ಪಂಚಾಯತಿ, ತಾ.ಪಂ, ಗ್ರಾ.ಪಂ ಅಧ್ಯಕ್ಷರು, ಸದಸ್ಯರು ಹಾಗೂ ಹಲವರು ಭಾಗಿಯಾಗಿದ್ದರು. ಪಿಡಿಓ ಬಸವರಾಜ್ ಸಂಕನಾಳ ಅವರು ಕಾರ್ಯಕ್ರಮ ನಿರೂಪಿಸಿದರು.

Prajavikshane

Chandru R Bhanapaur

Leave a Reply

error: Content is protected !!