371 ಜೆ ಕಲಂ ಸೌಲಭ್ಯ ಸದುಪಯೋಗ ಪಡೆಯಿರಿ : ತಾ.ಪಂ ಇಓ ಕೆ.ರಾಜಶೇಖರ ಸಲಹೆ
ಕನಕಗಿರಿ : ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಇದ್ದು, ಇದಕ್ಕೆ ವಿಶೇಷ ಅನುದಾನವನ್ನು ನೀಡಲಾಗುತ್ತಿದೆ. 371 ಜೆ ಕಲಂ ಸೌಲಭ್ಯ ಇದೆ. ಎಲ್ಲರೂ ಈ ಸೌಲಭ್ಯಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಾ.ಪಂ ಇಓ ಕೆ.ರಾಜಶೇಖರ ಹೇಳಿದರು.
ಅವರು ತಾಲೂಕು ಪಂಚಾಯತ್ ಆವರಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಅಂಗವಾಗಿ ಮಂಗಳವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ಕೂಡ ನಮ್ಮ ಕಲ್ಯಾಣ ಕರ್ನಾಟಕ ಭಾಗಕ್ಕೆ ಸ್ವಾತಂತ್ರ್ಯ ಭಾಗ್ಯ ಸಿಕ್ಕಿರಲಿಲ್ಲ. ಆ ಸಂದರ್ಭದಲ್ಲಿ ಉಕ್ಕಿನ ಮನುಷ್ಯ ಎಂದು ಹೆಸರುವಾಸಿಯಾದ ದೇಶದ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ ಪೋಲೊ ಆಪರೇಷನ್ ಮೂಲಕ ಹೈದರಾಬಾದ್ ನಿಜಾಮನ ಸಾರ್ವಭೌಮತ್ವವನ್ನು ವಿರೋಧಿಸಿ ನಿಜಾಮನ ಸಂಸ್ಥಾನವನ್ನು 17 ನೇ ಸೆಪ್ಟೆಂಬರ್ 1948 ರಂದು ಭಾರತ ಒಕ್ಕೂಟಕ್ಕೆ ಸೇರಿಸಿದ ಕೀರ್ತಿ ಸರ್ದಾರ್ ವಲ್ಲಭಭಾಯಿ ಪಟೇಲ್ ರವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಮಹನೀಯರಾದ ಮಹಾತ್ಮ ಗಾಂಧೀಜಿ, ಡಾ.ಬಿ.ಆರ್ ಅಂಬೇಡ್ಕರ್, ಸರ್ಧಾರ್ ವಲ್ಲಭಬಾಯ್ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ಹಜರತ್ ಹುಸೇನ್, ಸದಸ್ಯರಾದ ಕರಿಯಪ್ಪ, ಜಗದೀಶ್, ಕೆಡಿಪಿ ಸದಸ್ಯರಾದ ವಿರುಪಾಕ್ಷಿ, ಗಂಗಮ್ಮ ಶಿವನಗೌಡ್ರು, ಯಲ್ಲಪ್ಪ ಹಾಗೂ ತಾ.ಪಂ ಸಿಬ್ಬಂದಿಗಳಾದ ಕೊಟ್ರಯ್ಯಸ್ವಾಮಿ, ಕೆ.ಪವನಕುಮಾರ್, ಯಂಕೋಬ, ಹನುಮಂತ, ಹನುಮವ್ವ ಸೇರಿದಂತೆ ತಾ.ಪಂ ಸಿಬ್ಬಂದಿಗಳು ಹಾಜರಿದ್ದರು.