ಭೀಕರ ರಸ್ತೆ ಅಪಘಾತ : ಮುತ್ತಾಳ ಕ್ರಾಸ್ ಬಳಿ ಬೈಕ್ ಹಾಗೂ KSRTC ಬಸ್ ನಡುವೆ ಡಿಕ್ಕಿ : ಬೈಕ್ ಸಾವಾರ ಸಾವು!!
ಕುಕನೂರು : ತಾಲೂಕಿನ ಮುತ್ತಾಳ ಕ್ರಾಸ್ ಬಳಿ ಬೈಕ್ ಹಾಗೂ ಕೆಎಸ್ಆರ್ಟಿಸಿ ಬಸ್ ನಡುವೆ ಡಿಕ್ಕಿಯಾಗಿದ್ದು, ಈ ಪರಿಣಾಮ ಸ್ಥಳದಲ್ಲಿ ಬೈಕ್ಸ ಅವರ ಸಾವನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಇಂದು ಸಂಜೆ 6:ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಕೆ ಎಸ್ ಆರ್ ಟಿ ಸಿ ಬಸ್ ಚಕ್ರದ ಕೆಳಗೆ ಸಿಲುಕಿ ಹಾಕಿಕೊಂಡಿದ್ದ ಬೈಕ್ ಸವಾರ ರಕ್ತದ ನಡುವಿನಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ನಿಂಗಪ್ಪ ಗುರೆಡ್ಡಿ (40) ಎಂದು ಗುರುತಿಸಲಾಗಿದೆ. ಇವರು ನಿಟ್ಟಾಲಿ ಗ್ರಾಮದವರು ಎಂದು ಅಧಿಕೃತ ಮಾಹಿತಿ ತಿಳಿದು ಬಂದಿದೆ. ಈ ಘಟನೆಯು ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.