ನಾಳೆ ಬೈ ಇಲೆಕ್ಷನ್ ಮಹಾ ತೀರ್ಪು, ರಾಜಕೀಯ ಪಕ್ಷಗಳು ಫುಲ್ ಅಲರ್ಟ್.!!
ನಾಳೆ ಶನಿವಾರ ಕರ್ನಾಟಕ ರಾಜ್ಯದ 3 ಕ್ಷೇತ್ರಗಳ ಬೈ ಎಲೆಕ್ಷನ್ ಮತ್ತು ಮಹಾರಾಷ್ಟ್ರ ಜಾರ್ಕಂಡ್ ರಾಜ್ಯಗಳ ಮಹಾ ಫಲಿತಾಂಶ ಹೊರ ಬೀಳಲಿದ್ದು ರಾಜಕೀಯ ಪಕ್ಷಗಳು ಫುಲ್ ಅಲರ್ಟ್ ಆಗಿವೆ.
ರಾಜ್ಯದ ಮೂರು ಕ್ಷೇತ್ರಗಳ ಮತದಾನೋತ್ತರ ಸಮೀಕ್ಷೆಯಲ್ಲಿ ಮೂರು ಪಕ್ಷಗಳಿಗೂ ಒಂದು ಸ್ಥಾನ ಸಿಗಲಿದೆ ಎಂದು ಹೇಳಲಾಗಿದೆ. ಸಿಗ್ಗಾವಿಯಲ್ಲಿ ಬಿಜೆಪಿ, ಚನ್ನಪಟ್ಟಣದಲ್ಲಿ ಜೆಡಿಎಸ್ ಮತ್ತು ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾದಿಸಲಿದೆ ಎಂದು ಸಮೀಕ್ಷೆಗಳು ವ್ಯಾಖ್ಯಾನ ಮಾಡಿವೆ. ಆದರೆ ಅಂತಿಮ ಫಲಿತಾಂಶದ ಹಣೆಬರಹ ನಾಳೆ ಶನಿವಾರ ಹೊರಬೀಳಲಿದೆ.
ಇದರ ಜೊತೆಗೆ ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಫಲಿತಾಂಶವೂ ನಾಳೆಯೇ ಹೊರಬೀಳಲಿದ್ದು ಎಲ್ಲಾ ರಾಜಕೀಯ ಪಕ್ಷಗಳು ಎದೆ ಬಡಿತ ಜೋರಾಗಿದೆ.
ಕರ್ನಾಟಕದ 3 ಕ್ಷೇತ್ರಗಳ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ಯಾವ ರೀತಿಯ ಪ್ರಭಾವ ಬಿರಲಿದೆ. ಮಹಾರಾಷ್ಟ್ರ ರಾಜ್ಯದ ಫಲಿತಾಂಶದಿಂದ ರಾಷ್ಟ್ರ ರಾಜಕಾರಣದ ಮೇಲೆ ಬೀರುವ ಪರಿಣಾಮದ ಬಗ್ಗೆ ಈಗಾಗಲೇ ಆಯಾ ರಾಜಕೀಯ ಪಕ್ಷಗಳಲ್ಲಿ ಜಿಜ್ಞಾಷೆ, ವಿಶ್ಲೇಷಣೆ ನಡೆದಿದೆ.
ಒಟ್ಟಿನಲ್ಲಿ ಶನಿವಾರ ಹನುಮನ ಆಶೀರ್ವಾದ ಯಾರಿಗೆ ಸಿಗಲಿದೆ ಎಂಬುದು ನಾಳೆ ಮದ್ಯಾಹ್ನದ ಹೊತ್ತಿಗೆ ಗೊತ್ತಾಗಲಿದೆ.