LOCAL NEWS : ಶಿವಶರಣಗೌಡ ಪಾಟೀಲ ಹೇಳಿಕೆ ಸತ್ಯಕ್ಕೆ ದೂರವಾಗಿದೆ : ಎಸ್‌. ಆರ್‌. ನವಲಿ ಹಿರೇಮಠ

You are currently viewing LOCAL NEWS : ಶಿವಶರಣಗೌಡ ಪಾಟೀಲ ಹೇಳಿಕೆ ಸತ್ಯಕ್ಕೆ ದೂರವಾಗಿದೆ : ಎಸ್‌. ಆರ್‌. ನವಲಿ ಹಿರೇಮಠ

ಪ್ರಜಾವೀಕ್ಷಣೆ ಸುದ್ದಿಜಾಲ :- 

LOCAL NEWS : ಮಾಜಿ ಶಾಸಕ ಶಿವಶರಣಗೌಡ ಪಾಟೀಲ ಹೇಳಿಕೆ ಸತ್ಯಕ್ಕೆ ದೂರವಾಗಿದೆ : ಎಸ್‌. ಆರ್‌. ನವಲಿ ಹಿರೇಮಠ

ಕುಕನೂರು : ಯಲಬುರ್ಗಾ ವಿಧಾನಸಭಾ ಕ್ಷೇತ್ರ ಮಾಜಿ ಶಾಸಕ ಶರಣಗೌಡ ಪಾಟೀಲ ಹೇಳಿಕೆ ಸತ್ಯಕ್ಕೆ ದೂರವಾಗಿದೆ ಎಂದು ಸಮಾಜ ಸೇವಕ, ರಾಜಕೀಯ ಮುಖಂಡರಾದ ನವಲಿ ಹಿರೇಮಠ ಹೇಳಿದರು.

ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ನೆಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಯಲಬುರ್ಗಾ ಕ್ಷೇತ್ರದ ಮಾಜಿ ಶಾಸಕರಾದ ಶರಣಗೌಡ ಪಾಟೀಲರ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿರುವುದು ಸತ್ಯಕ್ಕೆ ದೂರವಾಗಿದೆ. ನಾನು ಯಾವುದೇ ರೀತಿ ಅಕ್ರಮವಾಗಿ ಆಸ್ತಿ ಗಳಿಸಿಲ್ಲ, ಕಷ್ಟಪಟ್ಟು ನನ್ನ ಸ್ವಂತ ಶ್ರಮದಿಂದ ದುಡಿದ ಮೇಲೆ ಬಂದಿದ್ದೇನೆ. ಅವರು ಹೇಳಿರುವಂತೆ ನಾನು ಹಾಗೂ ಹಾಲಿ ಶಾಸಕರು ಯಾವುದೇ ರೀತಿಯಲ್ಲಿ ಪಾಲುದಾರಿಕೆಯ ಉದ್ಯಿಮೆಯನ್ನು ಹೊಂದಿಲ್ಲ. ನಮ್ಮ ಕ್ರಷರ್‌ನಿಂದಲೇ ಕಡಿ ಖರೀದಿಸುವಂತೆ ನಾನು ಯಾರಿಗೂ ಒತ್ತಡವನ್ನು ಹೇರಿಲ್ಲ” ಇದನ್ನು ಸ್ಪಷ್ಟವಾಗಿ ಹೇಳುತ್ತೇನೆ ಎಂದು ತಿಳಿಸಿದರು.

“ಶಾಸಕರಿಂದ ಯಾವುದೇ ಶಿಪಾರಸ್ಸು ಮಾಡಿಸಿರುವುದಿಲ್ಲ. ಆದರೂ ಸಹಿತ ನನ್ನ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಹಾಲಿ ಶಾಸಕರು ಕುಟುಂಬಸ್ಥರು ಯಾವುದೇ ರಾಜಕೀಯ ಹಸ್ತಕ್ಷೇಪವನ್ನು ಸಹ ಮಾಡಿಲ್ಲ ಎಂದ ಅವರು, ಶಿವಶರಣಗೌಡ ಪಾಟೀಲ ಇವರ ಕ್ರುಷರ್‌ನಿಂದ ಹತ್ತಿರದ ಗ್ರಾಮಸ್ಥರಿಗೆ ತೊಂದರೆಯಾಗಿದ್ದು, ಸ್ಥಳೀಯರು ಪ್ರತಿಭಟನೆ ನೆಡೆಸಿ ಪೋಲಿಸ್ ದೂರನ್ನು ನೀಡಿದ್ದಾರೆ. ಶಿವಶರಣಗೌಡ ಪಾಟೀಲರ ಮಗ ಅರವಿಂದಗೌಡನನ್ನು ಪೋಲಿಸರು ಹುಡುಕುತ್ತಿದ್ದಾರೆ. ಇದರಿಂದ ಕುಪಿತಗೊಂಡ ಮಾಜಿ ಶಾಸಕರು ನನ್ನ ಮೇಲೆ ಹಾಗೂ ಹಾಲಿ ಶಾಸಕರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಆದ್ದರಿಂದ ಶರಣಪ್ಪಗೌಡ ಹೇಳಿಕೆಯಲ್ಲಿ ಯಾವುದೇ ಸತ್ಯ ಇಲ್ಲ, ಅವರ ಹೇಳಿಕೆ ಸತ್ಯಕ್ಕೆ ದೂರವಾದ ಮಾತಾಗಿದೆ” ಎಂದು ಹೇಳಿದರು.

Leave a Reply

error: Content is protected !!