LOCAL NEWS : ಉಚಿತ ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ ಕೌಶಲ್ಯ ತರಬೇತಿ ಪಡೆದುಕೊಳ್ಳಿ ಜೀವನೋಪಾಯಕ್ಕೆ ವಿನಿಯೋಗಿಸಿಕೊಳ್ಳಿ …!!
ಹಾಸನ : ನಗರದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗ ಯುವಕ – ಯುವತಿಯರಿಗಾಗಿ ದಿನಾಂಕ 20-01-2025ರಿಂದ 30 ದಿನಗಳ ಕಾಲ ಉಚಿತವಾಗಿ ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ ತರಬೇತಿ. ಪ್ರಾರಂಭವಾಗಲಿದೆ. ಈ ತರಬೇತಿಗಳಲ್ಲಿ ಉದ್ಯಮಶೀಲತ ಹಾಗೂ ವ್ಯಕ್ತಿತ್ವ ವಿಕಾಸನ ತರಬೇತಿಯನ್ನು ಸಹ ನೀಡಲಾಗುತ್ತದೆ. ನಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆದವರಿಗೆ ಸಾಲ ಸೌಲಭ್ಯ ತೆಗೆದು ಕೊಳ್ಳಲು ಅನುಕೂಲ ವಾಗುವುದು.
ಶಿಬಿರಾರ್ಥಿಗಳಿಗೆ ಉಚಿತವಾಗಿ ತರಬೇತಿ, ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಭೋದನೆ ಮಾಡಿಸಲಾಗುವುದು. ತರಬೇತಿ ಪೂರ್ಣಗೊಂಡ ನಂತರ ಸಂಸ್ಥೆಯಿಂದ ಪ್ರಮಾಣ ಪತ್ರ ವಿತರಿಸಲಾಗುತ್ತದೆ.
ಈ ತರಬೇತಿಯಲ್ಲಿ ಪ್ರಮುಖವಾಗಿ ಏಳಿ ಕೊಡುವ ವಿಷಯಗಳೆಂದರೆ ಡಿಜಿಟಲ್ ಫೋಟೋ ಗ್ರಪಿ, ಪಿಕ್ಚರ್ ಕಂಪೋಸ್, ಜೂಮ್ ಲೆನ್ಸ್ ಅಂಡ್ ಫ್ರೆಂಡ್ ಲೆನ್ಸ್ ಮ್ಯಾಕ್ರೋ ಶೂಟಿಂಗ್, ಸ್ಪೋರ್ಟ್ ಶೂಟಿಂಗ್, ಕ್ಲಾಸ್ ಫೋಟೋಗ್ರಾಫಿ, ಲೈಟ್ ಅಂಡ್ ಪಾರ್ಟಿ, ಕರಿಜ್ಮ ಆಲ್ಬಮ್, MPEG, AVI, H.D ವಿಡಿಯೋ ಫಾರ್ಮೆಟ್ಸ್, ವಿಡಿಯೋ ಶೂಟಿಂಗ್ DSLR, ಕಂಪ್ಯೂಟರ್ ಫೋಟೋಶಾಪ್, ಫೋಟೋ ಎಡಿಟಿಂಗ್, ಫೋಟೋ ಜರ್ನಲಿಸಂ ಅಂಡ್ ಡಿವಿಜನ್ ಇತ್ಯಾದಿ ವಿಷಯಗಳನ್ನು ಹೇಳಿಕೊಡಲಾಗುವುದು.
ಆಸಕ್ತ 18 ವರ್ಷ ಮೇಲ್ಪಟ್ಟ 45 ವರ್ಷದೊಳಗಿನ ನಿರುದ್ಯೋಗ ಯುವಕ – ಯುವತಿಯರು ಸಂಸ್ಥೆಯ ಕಚೇರಿಯಲ್ಲಿ ಅಥವಾ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ 08172-297013, 7353654000, 8147903497, 9535684409, ಸಂಪರ್ಕಿಸಬಹುದಾಗಿದೆ. ಸಂಪರ್ಕಿಸಬೇಕಾದ ಸಮಯ : ಬೆಳಗ್ಗೆ 10 ರಿಂದ ಸಂಜೆ 6ರ ತನಕ ಗೂಗಲ್ ಫಾರ್ಮ್ ಮೂಲಕ ಆನ್ಲೈನಲ್ಲೇ ಉಚಿತ ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ ತರಬೇತಿ ತರಬೇತಿಗೆ ಅರ್ಜಿ ಸಲ್ಲಿಸಲು ಅದರ ಲಿಂಕ್ ಕೆಳಗೆ ಇದೆ.
https://docs.google.com/forms/d/1Hx56-7eS-tJuKoCYMkG8xcRPFKMctfoAJU8G5D8EVpI/edit#responses
ಈ ಪೋಸ್ಟ್ ನ್ನು ಆದಷ್ಟು ಶೇರ್ ಮಾಡಿ, ಅಗತ್ಯ ಇರುವವರಿಗೆ ಅನುಕೂಲವಾಗಬಹುದು.
ನಿರ್ದೇಶಕರು,
ಹಾಸನ.