LOCAL BREAKING : ಬೆಂಕಿಗೆ ನಾಶವಾದ 9 ಎಕರೆ ಕಡಲೆ ಬೆಳೆ…!!

You are currently viewing LOCAL BREAKING : ಬೆಂಕಿಗೆ ನಾಶವಾದ 9 ಎಕರೆ ಕಡಲೆ ಬೆಳೆ…!!

ಪ್ರಜಾ ವೀಕ್ಷಣೆ ಸುದ್ದಿ :-

LOCAL BREAKING : ಬೆಂಕಿಗೆ ನಾಶವಾದ 9 ಎಕರೆ ಕಡಲೆ ಬೆಳೆ…!!

ಕುಕನೂರು : ತಾಲೂಕಿನ ತಳಕಲ್ ಗ್ರಾಮದ ಹೊರವಲಯದ ಜಮೀನಿನಲ್ಲಿ ಕೂಡು ಹಾಕಿದ್ದು 9 ಎಕರೆ ಕಡೆಲೆ ಬೆಳೆ ಬೆಂಕಿ ಬಿದ್ದು ಸಂಪೂರ್ಣ ಸುಟ್ಟು ಕರಕುಲಾಗಿದೆ.

ತಳಕಲ್ ಗ್ರಾಮದ ರೈತರಾದ ವೀರನಗೌಡ ಮಾಲಿಪಾಟೀಲ ಎಂಬುವರಿಗೆ ಸೇರಿವ ಪ್ರತ್ಯಕ ಮೂರು ಜಮೀನುಗಳಲ್ಲಿ ಬೆಳೆದ ಕಡಲೆ ಬೆಳೆಯನ್ನು ರಾಶಿ ಮಾಡುವ ಉದ್ದೇಶದೊಂದಿಗೆ ಒಂದೇ ಹೊಲದಲ್ಲಿ ಕೂಡು ಹಾಕಿದ್ದರು. ಶನಿವಾರ ತಡರಾತ್ರಿ ಯಾರೋ ಕಿಡಿಗೇಡಿಗಳು, ಕೂಡಿ ಹಾಕಿದ್ದ ಕಡಲೆ ಬೆಳೆಯ ರಾಶಿಗೆ ಬೆಂಕಿ ಹಚ್ಚಿದ್ದಾರೆ.

ರೈತರು ಎಂದಿನಂತೆ ಬೆಳಗಿನ ಜಾವ ಹೊಲದ ಕಡೆ ಹೋದಾಗ ವಿಷಯ ತಿಳಿದು, ಅಗ್ನಿ ಶಾಮಕ ಠಾಣೆ ಮಾಹಿತಿಯನ್ನು ನೀಡಿದ್ದಾರೆ. ಅಷ್ಟೋತ್ತಿಗಾಗಲೇ ಕಡಲೆ ಬೆಳೆ ಸಂಪೂರ್ಣವಾಗಿ ಸುಟ್ಟು ಕರುಕುಲಾಗಿದೆ. 120 ಕ್ವಿಂಟಲ್ ಬೆಳೆ ಅಂದರೆ ಸುಮಾರು 8.40.000/- ಸಾವಿರ ರೂಗಳ ನಷ್ಟ ಉಂಟಾಗಿದೆ ಎಂದು ಹೇಳಲಾಗುತ್ತಿದ್ದೆ. ಈ ಕುರಿತು ರೈತರಾದ ವೀರನಗೌಡ ಮಾಲಿಪಾಟೀಲ ಕುಕನೂರು ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Leave a Reply

error: Content is protected !!