LOCAL NEWS : ರೈತರ ಪ್ರತಿಭಟನೆ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹಕ್ಕೊತ್ತಾಯ!

You are currently viewing LOCAL NEWS : ರೈತರ ಪ್ರತಿಭಟನೆ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹಕ್ಕೊತ್ತಾಯ!

ಪ್ರಜಾವೀಕ್ಷಣೆ ಸುದ್ದಿಜಾಲ :-

LOCAL NEWS : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹಕ್ಕೊತ್ತಾಯ!, ಮಾಡಿದ ಕ್ರಾಂತಿಕಾರಿ ಕೀಸಾನ್ ಸೇನಾ ಸಮೀತಿ!

ಕುಕನೂರು : ‘ಈ ಭಾಗದ ರೈತರ ವಿವಿಧ ಬೇಡಿಕೆಗಳನ್ನು ಇಡೇರಿಸುವಂತೆ ತಾಲೂಕಾ ದಂಢಾಧಿಕಾರಿ ಹಾಗೂ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒತ್ತಾಯ ಮಾಡಲಾಗಿದೆ’ ಎಂದು ಭಾರತೀಯ ಕ್ರಾಂತಿಕಾರಿ ಕೀಸಾನ್ ಸೇನಾ ರಾಷ್ಟ್ರೀಯ ಅಧ್ಯಕ್ಷ ಎಮ್‌ಎನ್‌ ಕುಕನೂರು ತಿಳಿಸಿದರು.

ಇಂದು ಪಟ್ಟಣದಲ್ಲಿ ಭಾರತೀಯ ಕ್ರಾಂತಿಕಾರಿ ಕೀಸಾನ್ ಸೇನಾ ವತಿಯಿಂದ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ವಿರುಭದದ್ರಪ್ಪ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ಬಂದು ತಹಶೀಲ್ದಾರ್ ಗೆ ಮನವಿ ಸಲ್ಲಿಸಲಾಯಿತು.

ಈ ವೇಳೆಯಲ್ಲಿ ಮಾತನಾಡಿದ ಅವರು, ‘ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗದೆ ದಿನ ನಿತ್ಯ ರೈತರು ಪರದಾಡುವಂತೆ ಆಗಿದೆ. ಹಾಗಾಗಿ ರೈತರಿಗೆ ಪ್ರತಿ ಬೆಳೆಗೆ 1000/- ರೂ.ಗಳನ್ನು ಪ್ರೋತ್ಸಾಹ ಧನವನ್ನು ನೀಡಬೇಕು. ಖಾಸಗಿ ಕಂಪನಿಗಳ ಹಾವಳಿಯನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾನೂನಿನ ಅಡಿಯಲ್ಲಿ ಕ್ರಮಕ್ಕೆ ಆದೇಶ ಹೊರಡಿಸಬೇಕು. ಹಾಗನೇ ಇನ್ನು ಅನೇಕ ರೈತರ ಸಮಸ್ಯೆಗೆ ಸರ್ಕಾರಗಳು ಶರವೇಗದಲ್ಲಿ ಸ್ಪಂದಿಸಬೇಕು ಎಂದರು.

ಈ ಸಂದರ್ಭದಲ್ಲಿ ಬಸವರಾಜ್ ಅಡವಿ, ಶರಣಪ್ಪ ಮೇಟಿ. ಸಂಗಮೇಶ್ ಶಾಖಾಪುರ್, ಬಸವರಾಜ್‌ ರೆಡ್ಡಿ ಒಕ್ಕಳದ್‌, ಮಂಜುನಾಥ್‌ ಕಟಗಿಹಳ್ಳಿ, ಮಾಜೀದ್‌ ಖಾನ್, ಪಿಡ್ಡನಗೌಡ್‌, ರಾಜು ವಾಲ್ಮೀಕಿ, ಮುತ್ತು ಮಂಗಳೂರು, ಮಂಜುನಾಥ್‌ ಮ್ಯಾದರ್‌,ಇನ್ನು ಅನೇಕ ರೈತರು ಭಾಗವಹಿಸಿದ್ದರು.

Leave a Reply

error: Content is protected !!