LOCAL NEWS : ಶಾಸಕ ಬಸವರಾಜ್ ರಾಯರೆಡ್ಡಿ ಅವರು ದೂರದೃಷ್ಠಿ ಆಲೋಚನೆ ಹೊಂದಿರುವ ಹಿರಿಯ ರಾಜಕಾರಣಿ : ಸಂಸದ ರಾಜಶೇಖರ್ ಹಿಟ್ನಾಳ್

You are currently viewing LOCAL NEWS : ಶಾಸಕ ಬಸವರಾಜ್ ರಾಯರೆಡ್ಡಿ ಅವರು ದೂರದೃಷ್ಠಿ ಆಲೋಚನೆ ಹೊಂದಿರುವ ಹಿರಿಯ ರಾಜಕಾರಣಿ : ಸಂಸದ ರಾಜಶೇಖರ್ ಹಿಟ್ನಾಳ್

ಪ್ರಜಾವೀಕ್ಷಣೆ ಡಿಜಿಟಲ್‌ ಡೆಸ್ಕ್‌ :

LOCAL NEWS : ಶಾಸಕ ಬಸವರಾಜ್ ರಾಯರೆಡ್ಡಿ ಅವರು ದೂರದೃಷ್ಠಿ ಆಲೋಚನೆ ಹೊಂದಿರುವ ಹಿರಿಯ ರಾಜಕಾರಣಿ : ಸಂಸದ ರಾಜಶೇಖರ್ ಹಿಟ್ನಾಳ್

ಕುಕನೂರು : ‘ಯಾವುದೇ ಒಂದು ಕ್ಷೇತ್ರ ಅಭಿವೃದ್ದಿ ಹೊಂದಬೇಕಾದರೆ, ಅಲ್ಲಿನ ಜನ ಪ್ರತಿನಿಧಿಗಳು ಹಾಗೂ ಸಮಾಜದ ಮುಂಖಡರು ದೂರದೃಷ್ಠಿ ಆಲೋಚನೆ ಹೊಂದಬೇಕು, ಈ ವಿಚಾರದಲ್ಲಿ ಶಾಸಕರಾದ ಬಸವರಾಜ್ ರಾಯರೆಡ್ಡಿ ಅವರು ಯಾವಾಗಲೂ ಮುಂದೆ ಇರುತ್ತಾರೆ’ ಎಂದು ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ್ ಹೇಳಿದರು.

 

ಇಂದು ಪಟ್ಟಣದ ಮಂಗಳೂರು ರಸ್ತೆಯ ಗುದ್ದೆಪ್ಪನ ಮಠದ ಹತ್ತಿರದಲ್ಲಿ “ಭಾನಾಪುರ- ಗದ್ದನಕೆರೆ NH-367”ರ ಬೈಪಾಸ್ ರಸ್ತೆಯನ್ನು  ಕುಕನೂರು, ಯಲಬುರ್ಗಾ ಹಾಗೂ ಗಜೇಂದ್ರಗಡ ಬೈಪಾಸ್ ರಸ್ತೆಯ ಭೂಮಿ ಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಬೈಪಾಸ್‌ ರಸ್ತೆಯ ಭೂಮಿ ಪೂಜೆ ಸಂಸದ ರಾಜಶೇಖರ್ ಹಿಟ್ನಾಳ್ ಅವರು ನೇರವೆರಿಸಿದರು.

ಬಳಿಕ ಮಾತನಾಡಿದ ಸಂಸದ ರಾಜಶೇಖರ್ ಹಿಟ್ನಾಳ್, ‘ ಈ ಕ್ಷೇತ್ರ ಮೂಲತವಾಗಿ ವಾಣಿಜ್ಯ ಸಹಕಾರಿಯಲ್ಲ, ಜೊತೆಗೆ ನೀರಾವರಿ ಪ್ರದೇಶವಂತೂ ಅಲ್ಲ, ಸಂಪೂರ್ಣ ಮಳೆಆಧಾರಿತವಾದ ಪ್ರದೇಶವಾಗಿದೆ. ಆದರೂ ಕೇಲವೂ ವಿ‍ಷಯದಲ್ಲಿ ಯಲಬುರ್ಗಾ ಕ್ಷೇತ್ರವೂ ರಾಜ್ಯದಲ್ಲಿ ಮುಂದೆ ಇದೆ. ಇದಕ್ಕೆ ಮೂಲ ಕಾರಣವೇ ಇಲ್ಲಿಯ ಉತ್ಸಾಹಿ ಶಾಸಕರು, ಕ್ಷೇತ್ರದ ಅಭಿವೃದ್ದಿ ವಿಚಾರದಲ್ಲಿ ಅವರಷ್ಟು ಕೆಲಸ ನಮ್ಮ ರಾಜ್ಯದಲ್ಲಿ ಯಾರು ಮಾಡಲಿಕ್ಕೆ ಸಾದ್ಯವಿಲ್ಲ ಎಂದರು.

ಕಾರ್ಯಕ್ರಮದ ಕುರಿತು ಮಾತನಾಡಿದ ಶಾಸಕ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ, ‘ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ 2014ರ ಕೊನೆಯ ಅವಧಿಯಲ್ಲಿ ಅಂದಿನ ಕೇಂದ್ರ ಸರ್ಕಾರದ ಸಾರಿಗೆ ಸಚಿವರು ಬಹು ಬೇಡಿಕೆಯ “ಭಾನಾಪುರ- ಗದ್ದನಕೆರೆ NH-367” ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡುವುದಕ್ಕೆ ಅಂದೆ ಅನುಮೋದನೆ ನೀಡಿದ್ದರು.

ಇದೀಗ ಆ ಕಾರ್ಯವನ್ನು ಆರಂಭಿಸಲಾಗುತ್ತಿದೆ. ಅಂದಿನಿಂದ ಇಂದಿನವರೆಗೆ ವಿಳಂಬವಾಗುತ್ತಲೇ ಬಂದಿದೆ. ಇದಕ್ಕೆ ಪ್ರಮುಖ ಕಾರಣ ಕೆಲ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆ ಇರುವುದರಿಂದ ಈ ರೀತಿ ತಡವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅಂದಾಜು ವೇಚ್ಚ 180 ಕೋಟಿ ರೂ.ಗಳಲ್ಲಿ ಇದೀಗ 169ಕೋಟಿ ರೂ.ಗೆ ಟೆಂಡರ್‌ ಕರೆಯಲಾಗಿ ಅನೂಮೋದನೆ  ನೀಡಿದ್ದು, ಈ ವೆಚ್ಚದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 50-50 ಅನುಪಾತದಲ್ಲಿ ನೀಡಬೇಕು.  ಇದೀಗ ಮೊದಲ ಹಂತದಲ್ಲಿ 97 ಕೋಟಿ ಅನುದಾನವನ್ನು ಸಹ ಬಿಡುಗಡೆ ಮಾಡಿದ್ದು, ಪಟ್ಟಣದ ಬೈಪಾಸ್ ಗೆ 6.8 ಕಿಲೋ ಮೀಟರ್, ಯಲಬುರ್ಗಾ ಪಟ್ಟಣಕ್ಕೆ 4.76 ಕಿಲೋಮೀಟರ್, ಗಜೇಂದ್ರಗಡ ಪಟ್ಟಣಕ್ಕೆ 5.43 ಕಿಲೋಮೀಟ‌ರ್ ರಸ್ತೆಗೆ ಇಂದು ಚಾಲನೆ ದೊರೆತಿದೆ. ಈ ರಸ್ತೆಯು ಎರಡು ಮೇಲ್ ಸೇತುವೆಯನ್ನು ಸಹ ಒಳಗೊಂಡಿದೆ. ನಮ್ಮ ಕ್ಷೇತ್ರದ ಜನರಿಗೆ ಈ ರಸ್ತೆಗಳು ಬಹಳಷ್ಟು ಉಪಯುಕ್ತವಾಗಲಿದೆ. ಇದರಿಂದ ವ್ಯವಹಾರಿಕವಾಗಿ ಬೆಳೆಯಲಿಕ್ಕೆ ಸಾಧ್ಯವಾಗುತ್ತದೆ. ಈ ಕ್ಷೇತ್ರದಲ್ಲಿ ಸಣ್ಣಪುಟ್ಟ ಪಟ್ಟಣಗಳಿದ್ದು, ರಾಜ್ಯದ ದೊಡ್ಡ ದೊಡ್ಡ ನಗರಗಳಿಗೆ ಮಾರ್ಗವಾಗಲಿದೆ. ಇದರ ಜೊತೆಗೆ ನಮ್ಮ ಕ್ಷೇತ್ರಕ್ಕೆ ರೈಲು ಸಂಚಾರ ಕೂಡ ಆರಂಭವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಯಲಬುರ್ಗಾ-ಕುಕನೂರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಅಭಿಯಂತರ ಗಿರೀಶ್, ಪಪಂ ಉಪಾಧ್ಯಕ್ಷ ಪ್ರಶಾಂತ ಆರಬೆರಳಿನ್, ಮುಖಂಡರಾದ ನಾರಾಯಣಪ್ಪ ಹರಪನಹಳ್ಳಿ, ಮಂಜುನಾಥ ಕಡೇಮನಿ, ವೆಂಕಣ್ಣ ಯರಾಶಿ, ಹನುಮಂತಗೌಡ ಚಂಡೂರ, ತಿಮ್ಮಣ್ಣ ಚೌಡ್ಮಿ, ಸಿರಾಜ್ ಕರಮುಡಿ, ರಾಮಣ್ಣ ಬಂಕದಮನಿ, ನೂರುದ್ದಿನ್ ಸಾಬ ಗುಡಿಹಿಂದಲ್, ಡಾ.ಶಿವನಗೌಡ ದಾನರಡ್ಡಿ, ಸಂಗಮೇಶ ಗುತ್ತಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಇನ್ನಿತರರು ಇದ್ದರು. ಶರಣಪ್ಪ ವೀರಾಪೂರ ಕಾರ್ಯಕ್ರಮ ನಿರೂಪಣೆ ಮಾಡಿದರು.

Leave a Reply

error: Content is protected !!